WhatsApp Image 2024-05-24 at 2.28.21 PM

ಬುದ್ಧನು ಅನುಸರಿಸಿದ ಜೀವನ ಪ್ರಜ್ವಲ ಗೊಳಿಸಿ : ಶಂಶೇ ಆಲಂ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 24- ಬುದ್ಧನ ಅನುಸರಿಸಿ ಜೀವನ ಪ್ರಜ್ವಲಗೊಳಿಸಿ ಇಡೀ ಜಗತ್ತಿಗೆ ದಯೆ ಕರುಣೆ ಶಾಂತಿ ಮಾರ್ಗಕ್ಕೆ ಒತ್ತಡಕ್ಕೆ ಒಳಗಾಗದೆ ತಾಳ್ಮೆ ಕಳೆದುಕೊಳ್ಳದಿದ್ದರೆ ಶಾಂತಿ ತಾನಾಗಿಯೇ ಬರುತ್ತದೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ತಹಸಿಲ್ದಾರ್ ಶಂಸೇ ಆಲಂ ಅವರು ಹೇಳಿದರು.

ಸಿರುಗುಪ್ಪ ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಭಾಭವನದಲ್ಲಿ ದಲಿತ ಸಂಘರ್ಷ ಡಿಜಿ ಸಾಗರ ಬಣ ಹಾಗೂ ದಲಿತ ವಿದ್ಯಾರ್ಥಿಗಳ ಒಕ್ಕೂಟ ತಾಲೂಕ ಸಮಿತಿ ಆಯೋಜಿಸಿದ ಭಗವಾನ್ ಗೌತಮ ಬುದ್ಧ ಅವರ 2568ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಬುದ್ಧ ಅವರ ಭಾವಚಿತ್ರಕ್ಕೆ ಗೌರವಿಸಿ ಮಾಲಾರ್ಪಣೆ, ಪುಷ್ಪ ಅರ್ಪಿಸಿ ನಮನ ಸಲ್ಲಿಸಿ ಸ್ಮರಿಸಿ ಅವರು ಮಾತನಾಡುತ್ತಾ ಬುದ್ಧನ ತತ್ವ ಆಚರಿಸಿ ಎಂದು ಹೇಳುವುದಕ್ಕಿಂತ ಮೊದಲು ನಮ್ಮೊಳಗಿನ ಬುದ್ಧನನ್ನು ಎಚ್ಚರಿಸಿದಲ್ಲಿ ಪ್ರತಿಯೊಬ್ಬರಿಗೂ ಶಾಂತಿ ಸಿಗುತ್ತದೆ ಎಂದು ಶಂಸೇ ಆಲಂ ಅವರು ಕರೆ ನೀಡಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್ ಬಿ ಗಂಗಪ್ಪ ಮಾತನಾಡಿ ಜೀವನದಲ್ಲಿ ಏನನ್ನಾದರೂ ಸಾಧಿಸ ಬಹುದು ಎನ್ನುವುದಕ್ಕೆ ಮಹಾತ್ಮರಾದ ಬುದ್ಧ ಬಸವಣ್ಣ ಅಂಬೇಡ್ಕರ್ ಅವರ ಬದುಕು ಈ ಮೂವರ ಮಹನೀಯರ ಆಸೆ ಈಡೇರಬೇಕಾದರೆ ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ನಡೆಯಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಪ್ರದೀಪ್ ಕಾರ್ಯಕ್ರಮ ಅಧಿಕಾರಿ ರಾಮಕೃಷ್ಣ ರಾಷ್ಟ್ರೀಯ ಸಾಕ್ಷರತಾ ಸಮಾಜ ಸುಧಾರಕ ಅಬ್ದುಲ್ ನಬಿ ತಾಲೂಕು ಸಂಚಾಲಕ ಎಂ ದೊಡ್ಡಬಸಪ್ಪ ಸಂಘಟನಾ ಸಂಚಾಲಕರಾದ ಎಸ್ ವಿರೇಶ ಭಿಮೇಶ ಎಸ್ ರಫಿ ಹೆಚ್ ವೀರೇಶ ಬಿ ಹನುಮೇಶ ಡಿ ಮೂಕಪ್ಪ ಚಿದಾನಂದ ಉಡೇಗೋಳ ಬ್ರಹ್ಮ ಚಿದಾನಂದಪ್ಪ ಕೃಷ್ಣಪ್ಪ ರಾಮಣ್ಣ ರವಿಕುಮಾರ್ ಮತ್ತಿತರ ಗಣ್ಯರು ಜನಪ್ರತಿನಿಧಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!