WhatsApp Image 2024-07-12 at 4.44.43 PM

ಭಾರತೀಯ ಮುಖ್ಯ ಅಂಚೆ ಕಚೇರಿ ಸರ್ವ ಸದಸ್ಯರ ಸಭೆ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 12- ಸರ್ಕಾರದ ಯೋಜನೆಗಳು ಮತ್ತು ಸಾರ್ವಜನಿಕರ ಗ್ರಾಹಕರಿಗೆ ಮತ್ತು ಫಲಾನುಭವಿಗಳಿಗೆ ತಲುಪಿಸುವುದು ಸೇರಿ ಅನೇಕ ಸೇವೆ ಪ್ರಾಮಾಣಿಕ ಕರ್ತವ್ಯದಿಂದ ನಿರ್ವಹಿಸುತ್ತಿದೆ ಪೋಸ್ಟ್ ಮಾಸ್ಟರ್ ಎಂ ಮಂಜುನಾಥ ಶೆಟ್ಟಿ ಹೇಳಿದರು ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ನಡೆದ ಪೋಸ್ಟ್ ಪೋರಂ ಎಂಡಿಜಿಎಸ್‌ಸಿಪಿ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಮುಖ್ಯ ಅಂಚೆ ಕಚೇರಿಯ ಪೋಸ್ಟ್ ಫೋರಂ ಎಂ ಡಿ ಜಿ ಪಿ ಎಸ್ ಜಿ ಪಿ ಸದಸ್ಯರಾದ ಎ ಅಬ್ದುಲ್ ನಬಿ ಅವರು ಮಾತನಾಡಿ ಭಾರತದ ಸರ್ವ ಇಲಾಖೆಗಳಿಗಿಂತ ಪ್ರಾಮಾಣಿಕ ನಿಸ್ವಾರ್ಥದಿಂದ ಸಲ್ಲಿಸುತ್ತಿರುವ ಸೇವೆ ಏಕೈಕ ಇಲಾಖೆ ಎಂದರೆ ಅದು ಪೋಸ್ಟ್ ಡಿಪಾರ್ಟ್ಮೆಂಟ್ ಸಿರುಗುಪ್ಪ ನಗರದ ಅಂಚೆ ಕಚೇರಿ ಸ್ವಚ್ಛವಾಗಿ ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದು ಸಿಬ್ಬಂದಿಯವರ ಸೇವೆ ಯನ್ನು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಮಾತನಾಡುತ್ತಾ ಪಿಂಚಣಿ ದಾರರಿಗೆ ಓಏಪಿಪಿಎಚ್ ಪಿ ಡಬ್ಲ್ಯೂಪಿ ಪಿಂಚಣಿ ಪಾವತಿಗಳು ಮತ್ತು ರೈಲ್ವೆ ಟಿಕೆಟ್ ಬುಕಿಂಗ್ ಕೌಂಟರ್ ಕೆಲಸಕ್ಕಾಗಿ ಶ್ರಮಿಸುತ್ತಿರುವ ಅಂಚೆ ಇಲಾಖೆಯ ಸಿಬ್ಬಂದಿ ಅತ್ಯಂತ ಮತ್ತು ಅಂಚೆ ಇಲಾಖೆಯು ಹಳೆಯ ಇಲಾಖೆಯಾಗಿದೆ ಅಂಚೆ ಪತ್ರಗಳು ಸಂದೇಶಗಳನ್ನು ರವಾನಿಸುವ ಕೆಲಸದಿಂದ ಇಂದು ಡಿಜಿಟಲ್ ಹಣಕಾಸು ವ್ಯವಹಾರ ನಿರ್ವಹಿಸುವ ಅಭಿವೃದ್ಧಿ ಹೊಂದಿರುವ ಪಾನ್ ಕಾರ್ಡ್ ವಿತರಣೆ ಉಳಿತಾಯ ಯೋಜನೆ ಠೇವಣಿ ಸೇವೆ ಡಿಜಿಟಲ್ ಬ್ಯಾಂಕಿಂಗ್ ಸೇವೆ ಆಧಾರ್ ಕಾರ್ಡ್ ಸೇವೆ ಜಾಗತಿಕವಾಗಿ ಉನ್ನತ ಸೇವೆಗಳನ್ನು ನೀಡುತ್ತಿದೆ ಅಂಚೆ ಇಲಾಖೆ ಸಿಬ್ಬಂದಿ ಗ್ರಾಹಕ ರೋಡನೆ ವ್ಯವಹರಿಸುವಾಗ ತಾಳ್ಮೆ ಗೌರವದಿಂದ ವರ್ತಿಸುತ್ತಿದೆ ಇದು ಎಲ್ಲಾ ಇಲಾಖೆಗಳಲ್ಲಿ ಕಾಣು ಸಿಗುವುದಿಲ್ಲ ಎಂದರು.

ಮತ್ತೊಬ್ಬ ಸದಸ್ಯ ಜೈ ಸಿಂಗ್ ಅಲ್ವರಿ ಅವರು ಸಿಬ್ಬಂದಿ ವರ್ಗದವರ ಮೆಚ್ಚುಗೆ ವ್ಯಕ್ತಪಡಿಸಿದರು ಎಂ ಹನುಮಂತರೆಡ್ಡಿ ಸ್ವಾಗತ ಬೈಸಿದರು.

ಸಾಮಾಜಿಕ ಕಾರ್ಯಕರ್ತ ಎ ಮೊಹಮ್ಮದ್ ನೌಷಾದ್ ಅಲಿ ಅಂಚೆ ಕಚೇರಿಯ ಸಿಬ್ಬಂದಿ ವರ್ಗದವರಿದ್ದರು.

Leave a Reply

Your email address will not be published. Required fields are marked *

error: Content is protected !!