ಮದ್ಯವ್ಯಸನ ತ್ಯಾಜ್ಯ ವ್ಯಾಜ್ಯದಿಂದ ಮುಕ್ತರಾಗಿರಿ : ಜನಾರ್ಧನ ಹುಲಗಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ. ೦೯- ಮದ್ಯವ್ಯಸನ ˌತ್ಯಾಜ್ಯ ˌವ್ಯಾಜ್ಯದಿಂದ ಮುಕ್ತರಾಗಿ ಸಮಾಜದಲ್ಲಿ ಗೌರವವನ್ನು ಸಂಪಾದಿಸಬೇಕು ಎಂದು ಜಿಲ್ಲಾಜನಜಾಗ್ರತಿ ಸಮಿತಿ ಅಧ್ಯಕ್ಷ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷ ಜನಾರ್ಧನ ಹುಲಗಿ ಹೇಳಿದರು.
ಅವರು ತಾಲೂಕಿನ ಹಿರೇಮ್ಯಾಗೇರಿ ಗ್ರಾಮದ ಸಮುದಾಯ ಭವನದಲ್ಲಿ1753 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಎಲ್ಲರೂ ಕೆಟ್ಟಚಟಗಳನ್ನು ಅಳವಡಿಸಿಕೊಂಡು ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಆದರೆ ಧರ್ಮಸ್ಥಳ ಸಂಸ್ಥೆಯವರು ಮದ್ಯದ ಚಟಕ್ಕೆ ಬಲಿಯಾದವರನ್ನು ಬಿಡಿಸಿ ಒಳ್ಳೆ ಬದುಕನ್ನು ಕಟ್ಟಿಕೊಳ್ಳುವಲ್ಲಿ ಸಹಕಾರಿ ಆಗುತ್ತಿರುವದನ್ನು ಗಮನಿಸಿದರೆ ಅವರ ಸಾಮಾಜಿಕ ಕಳಕಳಿ ಎಂತಹದ್ದು ಎಂಬುವದನ್ನು ತೋರಿಸುತ್ತದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನುವಹಿಸಿದ್ದ ಕುದರಿಮೋತಿ ಯ ವಿಜಯಮಾಹಂತಸ್ವಾಮೀಜಿಗಳು ಮಾತನಾಡಿ ಧರ್ಮಸ್ಥಳ ಸಂಸ್ಥೆ ಜನಪರ ಕಾಳಜಿಯನ್ನು ಹೊಂದಿದೆ ಎಂದರು,ಪ್ರಾದೇಶಿಕ ನಿರ್ದೇಶಕರಾದ ಬಿ.ಗಣೇಶ ರವರು ಮಾತನಾಡಿ ಯಲಬುರ್ಗಾ ತಾಲೂಕಿನಲ್ಲಿ ರುವ ನಮ್ಮ ಸಂಸ್ಥೆ ಜಿಲ್ಲೆಗೆ ಮಾದರಿಯಾಗಿದೆ ಎಂದರು.
ಜಿ.ಪಂ.ಮಾಜಿ ಸದಸ್ಸೆ ಶಕುಂತಲಾ ಪಾಟೀಲˌ ಜಿಲ್ಲಾಜನಜಾಗ್ರತಿ ಸಮಿತಿ ಉಪಾಧ್ಯಕ್ಷ ಸಂಗಣ್ಣ ಟೆಂಗಿನಕಾಯಿ ˌ ಆನಂದ ಉಳ್ಳಾಗಡ್ಡಿˌ ನಾಗೇಶ ಇನ್ನೀತರರು ಮಾತನಾಡಿದರು, ಸುಮಾರು 62 ಜನರು ಮದ್ಯಬಿಡುವಲ್ಲಿ ಪ್ರೇರಿಪಿತರಾಗಿ ಸಭೆಯಲ್ಲಿ ಭಾಗವಹಿಸಿದ್ದರು ಅವರೇಲ್ಲರ ಪರವಾಗಿ ಖಾಜಸಾಬ ದಫೇದಾರ ಮಾತನಾಡಿ ಕುಡಿತದ ಚಟಇದ್ದಾಗ 10 ರೂಪಾಯಿಗೆ ಕಂಡಕಂಡವರಲ್ಲಿ ಕೈ ಚಾಚುತ್ತಿದ್ದೆ ಈಗ ಕುಡಿತಬಿಟ್ಟು 25 ಲಕ್ಷರೂ ವೆಚ್ಚಮಾಡಿ ಮನೆಕಟ್ಟಿಸಿದ್ದೇನೆ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಗೌರವಕ್ಕೆ ಪಾತ್ರನಾಗಿದ್ದೇನೆ ಅಲ್ಲದೇ ಹತ್ತಾರು ಜನರಿಗೆ ಕೆಲಸ ಕೊಡುವ ಮಾಲಿಕನಾಗಿದ್ದೇನೆ . ಕೈಮುಗಿದು ಕೆಳುತ್ತೇನೆ ಎಲ್ಲರೂ ಕುಡಿತಬಿಟ್ಟು ಧರ್ಮಸ್ಥಳದ ಅಜ್ಜನ ಆಶೀರ್ವಾದದಿಂದ ಒಳ್ಳೆಯವರಾಗಬೇಕು ಎಂದರು.
ಅಧ್ಯಕ್ಷತೆ ಗುರಪ್ಪ ಗುರಿಕಾರ ವಹಿಸಿದ್ದರು.
ಜಿಲ್ಲಾ ಜನಜಾಗ್ರತಿ ಸಮಿತಿ ಸದಸ್ಯರಾದ ಕರಿಬಸಸಯ್ಯ ಬಿನ್ನಾಳ ˌಶರಣಬಸಪ್ಪ ದಾನಕೈ !ವೀರಣ್ಣ ನಿಂಗೋಜಿ ˌಹನುಮಂತಪ್ಪ ಬೇರಗಿ ! ಮರಿತಿಮ್ಮಪ್ಪ ˌ ಮಹಾಂತೇಶ ಗಾಣಗೇರ ಯೋಜನಾಧಿಕಾರಿ ಟಿ.ಸತೀಶ ˌಹಂಚ್ಯಾಳಪ್ಪ ಪೂಜಾರ ಸಿದ್ಧಾರೂಢ ˌ ವ್ಯವಸ್ಥಾಪಕರಾದ ವೆಂಕಟೇಶˌ ಶರಣಪ್ಪ ಆರೇರˌ ನಿಂಗಪ್ಪ ಕೆಂಪಣ್ಣವರ ಇನ್ನೀತರರು ಉಪಸ್ಥಿತರಿದ್ದರು. ಈಶ್ವರ ನಿರೂಪಿಸಿದರು.ಸತೀಶ ಗಾಂವಕರ್ ಸ್ವಾಗತಿಸಿದರುಜ್ಞಾನವಿಕಾಸ ಸಮನ್ವಯಾಧಿಕಾರಿ ಗೀತಾ ಲೋಕರೆ ಪ್ರಾರ್ಥಿಸಿದರು
