WhatsApp Image 2024-06-05 at 3.04.47 PM

ರಾಜಶೇಖರ್ ಗೆಲುವಿಗೆ ಶಾಸಕ ಬಿ.ಎಂ.ನಾಗರಾಜ್ ಅಭಿನಂದನೆ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 5- ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಜಯಗಳಿಸಿದ ರಾಜಶೇಖರ್ ಹಿಟ್ನಾಳ ಅವರ ನಿವಾಸಕ್ಕೆ ಸಿರುಗುಪ್ಪ ಶಾಸಕ ಬಿ ಎಂ ನಾಗರಾಜ ಅವರು ರಾಜಶೇಖರ್ ಹಿಟ್ನಾಳ್ ಅವರಿಗೆ ಚುನಾವಣೆಯಲ್ಲಿ ದೊರೆತಿರುವ ಗೌರವಕ್ಕೆ ಹೃತ್ಪೂರ್ವಕವಾಗಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿಯೇ ಸಿರುಗುಪ್ಪ ವಿಧಾನಸಭಾ ಕ್ಷೇತ್ರದಿಂದ 21,461 ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವಿಗೆ ಕಾರಣರಾದ ಸಿರುಗುಪ್ಪ ಕ್ಷೇತ್ರದ ಮತದಾರ ಬಾಂಧವರಿಗೂ ಹಾಗೂ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ ಎಂ ನಾಗರಾಜ ಅವರಿಗೂ ಮುಖಂಡರಿಗೂ ಕಾರ್ಯಕರ್ತರಿಗೂ ರಾಜಶೇಖರ್ ಹಿಟ್ನಾಳ ಅವರು ಧನ್ಯವಾದ ತಿಳಿಸಿ ತಿಳಿಸಿದರು ಈ ಸಂದರ್ಭದಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ ಸಹಕಾರಿ ಧುರೀಣ ಚೊಕ್ಕ ಬಸವನ ಗೌಡ ಬಿ ಎಂ ಸತೀಶ್ ಬಿ ಜಿ ಮಂಜುನಾಥ ರೆಡ್ಡಿ ವೈ ರಾಮಸ್ವಾಮಿ ಶಿಕ್ಷಣ ಪ್ರೇಮಿ ಕಾಂಗ್ರೆಸ್ ಮುಖಂಡ ಸೈಯದ್ ಮೋಹಿದೀನ್ ಖಾದ್ರಿ ಕೊಡಲೇ ಮಲ್ಲಿಕಾರ್ಜುನ ವೆಂಕಟೇಶ್ ನಾಯಕ್ ಗೊರವಾರ ಶ್ರೀನಿವಾಸ ಮಿಂತಿ ಟಿ. ಮೊಹಮ್ಮದ್ ಶಫಿ ಮಂಜುನಾಥ ಸೂರ್ಯಪ್ರಕಾಶ್ ಸುರೇಶ್ ರೆಡ್ಡಿ ನಗರಸಭಾ ಸದಸ್ಯರಾದ ಬಿ.ವೆಂಕಟೇಶ್ ಹೆಚ್ ಗಣೇಶ್ ಮುಲ್ಲಾ ಕಲೀಮುಲ್ಲಾ ಕೋದಂಡರಾಮ ಯುವ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಮುದುಕಪ್ಪ ಸಣ್ಣ ವೀರೇಶ್ ಪವನ್ ದೇಸಾಯಿ ವಕೀಲ್ ಅಮೀರ್ ಭಾಷಾ ಕೋಟಿ ರೆಡ್ಡಿ ಮೋದಿನ್ ಅಬ್ದುಲ್ ನಬಿ ಅನೇಕ ಮುಖಂಡರು ಇದ್ದರು.

Leave a Reply

Your email address will not be published. Required fields are marked *

error: Content is protected !!