ಬರಗಾಲ ಎದುರಿಸುತ್ತಿರುವ ರೈತರಿಗೆ ಬರೆ, ರೈತರ ನೀರಿನ ಸಮಸ್ಯೆಗಳ ಸಮಲೋಚನೆ
ಕರುನಾಡ ಬೆಳಗು ಸುದ್ದಿ
ವಿಜಯನಗರ,13- ಹೊಸಪೇಟೆ ತಾಲೂಕಿನ ವೆಂಕಟಾಪುರ ಗ್ರಾಮದ ಸುತ್ತಮುತ್ತಲಿರುವ ರೈತರಿಗೆ ನೀರಿನ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರೀರಾಮಲಿಂಗ ದೇವಸ್ಥಾನದಲ್ಲಿ ರೈತರ ಸಮಾಲೋಚನ ಸಭೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಶರಣಪ್ಪ ದೊಡ್ಮನೆ ಇವರ ನೇತೃತ್ವದಲ್ಲಿ ನಡೆಯಿತು.
ಈಗಾಗಲೇ ರೈತರು ಬರದ ಬರ ಸಿಡಿಲಿನಿಂದ ತತ್ತರಿಸಿದ ಬೆನ್ನಲ್ಲೇ ಈ ಭಾಗದ ಅಧಿಕಾರಿಗಳ ನಿರ್ಲಕ್ಷದಿಂದ ಪ್ರಮುಖ ಬೆಳೆಗಳಾದ ಕಬ್ಬು, ಬಾಳೆ, ಇನ್ನು ಮೂರು ತಿಂಗಳಲ್ಕ್ಲಿ ಕಟಾವಿಗೆ ಬರುತ್ತವೆ ಇಂತಹ ಸಂದರ್ಭದಲ್ಲಿ ಕಾಲುವೆಯ ಕಾಮಗಾರಿಯ ಕುಂಟು ನೆಪವೊಡ್ಡಿ ರೈತರಿಗೆ ಜೀವನಾಡಿಯಾಗಿರುವ ವಿಜಯನಗರ ಕಾಲುವೆ (ತುರ್ತು) ಗೆ ನೀರು ಬಿಡದೆ ಇರುವುದು ರೈತರಿಗೆ ನೋವಿನ ಮೇಲೆ ಬರೆ ಎಳೆದಂತಾಗಿದೆ. ಎಂದು ಅವರು ಹೇಳಿದರು.
ಈ ಸಮಸ್ಯೆಗಳ ಬಗ್ಗೆ ಈಗಾಗಲೇ ಇಲ್ಲಿನ ನೀರಾವರಿ ಇಲಾಖೆಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಜೊತೆ ದೂರವಾಣಿಯ ಮೂಲಕ ಮಾತನಾಡಿದ್ದೇನೆ. ನಾಳೆ ಎಸ್ ಇ ಅವರಿಗೆ ಭೇಟಿ ಮಾಡಿ ನೀರಿನ ಸಮಸ್ಯೆಗಳ ಪರಿಹಾರದ ಬಗ್ಗೆ ವಿಜಯನಗರ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಸಮಾಲೋಚನ ನಡೆಸಲು ನಿರ್ಧರಿಸಿದ್ದೇವೆ. ತುರ್ತು ಕಾಲುವೆಗೆ ನೀರು ಬಿಡಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇವೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಬಿಎಂ ಹುಲುಗಪ್ಪ ಮಾತನಾಡಿ ಈ ಭಾಗದ ರೈತರಿಗೆ ಬಹು ಮುಖ್ಯವಾಗಿ ಸರ್ಕಾರ ಏತ ನೀರಾವರಿ ಮಾಡಿಕೊಡಬೇಕು. ಮತ್ತು ಕೃಷ್ಣಭಾಗ್ಯ ಜಲ ನಿಗಮದಿಂದ ಈ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು. ನಮಗೆ ಸಿಎಂ ಸಿದ್ದರಾಮಯ್ಯ ನೇತೃದ ಸರ್ಕಾರದ ಮೇಲೆ ನಂಬಿಕೆ ಇದೆ ಅವರು ರೈತರ ಪರ ಇದ್ದಾರೆ ಎಂದು ಮಾತಾಡಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಬಿ ಬಸವರಾಜ್, ಮಹಿಳಾ ಘಟಕ ಅಧ್ಯಕ್ಷೆ ಬಾನು ಬಿ, ಹುಲುಗಪ್ಪ, ನಾಗರಾಜ್ ಗೌಡ, ಲಕ್ಷ್ಮಣ, ಜಯರಾಮ,ರಾಜೇಶ್, ಕಟ್ಟೆಎರ್ರಿಸ್ವಾಮಿ ಮತ್ತು ರೈತರು ಇದ್ದರು.
