ವಿದ್ಯಾರ್ಥಿಗಳು ಭ್ರಮೆ ಯಿಂದ ಹೊರ ಬನ್ನಿ
: ಡಿ ಸಿ ಎಂ ಎಸ್ ದಿವಾಕರ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ)ಫೆ.19: ಅವರು ಪರಿಕ್ಷಾರ್ಥಿಗಳಿಗೆ ಸ್ಪೂರ್ಥಿ ತುಂಬುವ ಮಾತಿನಲ್ಲಿ ವಿದ್ಯೆ ಎನ್ನುವುದು ಯಾರಪ್ಪನ ಸ್ವತ್ತಲ್ಲ, ಅಥವಾ ಯಾವುದೇ ಪ್ರಭಾವಕ್ಕೆ, ಹಣಕ್ಕೆ ಸಿಗುವಂತದ್ದು ಅಲ್ಲ, ಹಲವಾರು ವಿದ್ಯಾರ್ಥಿಗಳು ಅವರ ಜೀವನದಲ್ಲಿ ಭ್ರಮೆಯಿಂದ ಬದುಕುತ್ತಿರುತ್ತಾರೆ. ಆ ಭ್ರಮೆಯಿಂದ ಹೊರ ಬಂದು ಸತ್ಯವನ್ನು ಅರಿತು ನಿರ್ದಿಷ್ಟವಾಗಿ ಕಠಿಣ ಶ್ರಮದಿಂದ ತಮ್ಮ ಗುರಿಯನ್ನು ಮುಟ್ಟಬೇಕು ಎಂದು ಜಿಲ್ಲಾಧಿಕಾರಿ ಎಂಎಸ್ ದಿವಾಕರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾಡಳಿತ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಮತ್ತು ಪದವೀಧರ ವಸತಿ ನಿಲಯ ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತ ಇತರೆ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಕುರಿತು ಕಾರ್ಯಗಾರವು ನಗರದ ಜಿಲ್ಲಾ ಕ್ರೀಡಾಂಗಣದ ಒಳಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿತ್ತು . ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಭ್ರಮೆ ಮತ್ತು ಸತ್ಯವನ್ನು ವಿಮರ್ಶೆ ಮಾಡಬೇಕು, ಒಳ್ಳೆ ಬಟ್ಟೆ ಹಾಕಿಕೊಂಡು , ನಮ್ಮೊಂದಿಗೆ ಮೂರ್ನಾಲ್ಕು ಸ್ನೇಹಿತೆಯರು ಮತ್ತು ಸ್ನೇಹಿತರಿದ್ದರೆ ನಮ್ಮನ್ನು ನೋಡಿ ಜನ ನಂಬುತ್ತಾರೆ ಉನ್ನತ ಸ್ಥಾನದಲ್ಲಿ ನಮ್ಮನ್ನು ನೋಡುತ್ತಾರೆ ಎನ್ನುವ ಭ್ರಮೆ ಅವರಲ್ಲಿರುತ್ತದೆ. ಇಂತಹ ಭ್ರಮೆಯಿಂದ ಹೊರ ಬರಬೇಕು.
ಸ್ಪರ್ದೇ ಎಂದಾಗ ನಿಮ್ಮಲ್ಲಿ ತಾಳ್ಮೆ ಇರಬೇಕಿದೆ ಎಂದು ವಿದ್ಯಾರ್ಥಿಗಳ ತಾಳ್ಮೆಬಗ್ಗೆ ಪ್ರಶ್ನಿಸಿದರು, ನಮ್ಮ ಜಿಲ್ಲೆಗಳು ಹಿಂದುಳಿದ ಜಿಲ್ಲೆಗಳಾಗಿವೆ ಇಲ್ಲಿ ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ವಿದ್ಯಾರ್ಥಿಗಳು ಹೋಗಲು ಹಿಂಜರಿಯುತ್ತಾರೆ , ಬೆಂಗಳೂರಲ್ಲಿ ಎಲ್ಲಾ ವ್ಯವಸ್ಥೆ ಇದೆ , ಅಲ್ಲಿ ಎಷ್ಟು ವಿದ್ಯಾರ್ಥಿಗಳು ಐಎಎಸ್ ಬರೀತಾರೆ ಎಂದು ವಿಧ್ಯಾರ್ಥಿಗಳಿಗೆ ಪ್ರಶ್ನಿಸಿದರು. ನೀವು ಸತ್ಯ ಮತ್ತು ಭ್ರಮೆಯ ಮದ್ಯೆ ಜೀವಿಸ ಬೇಡಿ , ಸರಿಯಾದ ಸಮಯದಲ್ಲಿ ಮಾರ್ಗದರ್ಶಕರನ್ನು ಕಂಡು ಕೊಂಡು, ಅವರ ಮಾರ್ಗದರ್ಶನದಂತೆ ನಡೆದು ಕೊಳ್ಳಿ ಇಲ್ಲವಾದರೆ ನೀವು ಜೀವನವೆಲ್ಲಾ ಭ್ರಮೆಯಲ್ಲಿ ಬದುಕ ಬೇಕಾದೀತು, ಸತ್ಯ ಎಂದರೆ ತಂದೆ ತಾಯಿ, ಗುರುಗಳು , ಹಿರಿಯರು ಇವರ ಮಾರ್ಗದರ್ಶನದಲ್ಲಿ ನಡೆಯಲು ಕಲಿಯಿರಿ ಎನ್ನುತ್ತಾ ತಂದೆತಾಯಿಗಳು ತಮ್ಮ ಅನುಭವ ಗಳಿಂದ ನಿಮ್ಮನ್ನು ಕಾಲ ಕಾಲಕ್ಕೆ ಎಚ್ಚರಿಸುತಿರುತ್ತಾರೆ , ಅವರನ್ನು ಗಡೆಗಣಿಸಿ ನಡೆದರೆ ನಿಮಗೆ ಯಶಸ್ಸು ಎನ್ನುವುದು ಮರೀಚಿಕೆ ಯಾಗಲಿದೆ ಇದೇ ಸತ್ಯ ಎಂದು ಎಚ್ಚರಿಸಿದರು.
ಯಾವುದೇ ಸಿನಿಮಾ ನಟ ನಟಿಯರನ್ನು ಹಿಂಬಾಲಿಸಿಕೊಂಡು ಅಬಿಮಾನಿಗಳೆಂದು ಅವರನ್ನು ಮೆರೆಸುತ್ತಾ ಸಮಯ ವ್ಯರ್ಥ ಮಾಡಿ ಜೀವನ ಹಾಳುಮಾಡಿಕೊಳ್ಳುಬಾರದು. ಸಿನೆಮಾವನ್ನು ಕೇವಲ ಮನೋರಂಜನೆಗಾಗಿ ಮಾತ್ರ ನೋಡಬೇಕು. ಈಗ ಕುಟುಂಭಗಳಲ್ಲಿ ಭಾವನಾತ್ಮಕ ಸಂಭಂದಗಳು ಮಾಯವಾಗುತ್ತಿವೆ . ಕೇವಲ ಆರು ವರ್ಷಗಳು ನೀವು ಕಠಿಣ ಶ್ರಮ ಪಟ್ಟರೆ ಜೀವನದ ತುಂಬ ಸಂತೋಷದಿಂದ ಇರಬಹುದು, ಸ್ಪರ್ಧಾತ್ಮಕ ಪರಿಕ್ಷೆಗಳನ್ನು ಒಂದು ಲಕ್ಷ ವಿದ್ಯಾರ್ಥಿಗಳು ಬರೆಯಬಹುದು ,ಆದರೆ ಅಂತ್ಯದಲ್ಲಿ ಒಂದುಸಾವಿರ ವಿದ್ಯಾರ್ಥಿಗಳು ಮಾತ್ರ ಖಣದಲ್ಲಿ ಉಳಿದು,
ಅವರಲ್ಲಿ ನೂರ ನಲವತ್ತು ವಿದ್ಯಾರ್ಥಿಗಳು ಮಾತ್ರ ಆಯ್ಕೆ ಯಾಗುವ ಸಂಭವ ಇರುತ್ತದೆ , ಹೀಗೆ ನಾಲ್ಕು-ಐದು ಸಲ ಸ್ಪರ್ದೇಗೆ ಇಳಿದವರು, ಕೊನೆಗೆ ಯಶಸ್ಸು ಕಾಣದೆ , ವಿದ್ಯಾರ್ಥಿಗಳಿಗೆ ತರಭೇತುದಾರರಾಗಿ , ಉಳಿದು ಬಿಡುತ್ತಾರೆಂದು , ಕೋಚಿಂಗ್ ಸೆಂಟರ್ಗಳನ್ನು ನಡೆಸುವವರಬಗ್ಗೆ ವಿವರಿಸಿದರು. ಸ್ಪರ್ದಾತ್ಮ ಪರಿಕ್ಷೆಗಳಿಗೆ ತಯಾರಿ ನಡೆಸುವವರು, ನೀವು ಯಾವುದನ್ನು ಓದಬೇಕು, ಯಾವುದನ್ನು ಕೈಬಿಡಬೇಕು ಎಂದು ತಿಳಿಸುತ್ತಾರೆ, ಸ್ಮರ್ದಾತ್ಮಕ ಪರಿಕ್ಷೆ ಬೆರೆದ ಎಲ್ಲಾ ವಿದ್ಯಾರ್ಥಿಗಳಲ್ಲಿ, ಸಮಾನ್ಯ ಜ್ಞಾನ ಹೆಚ್ಚಾಗಿರುತ್ತದೆ, ಯವುದನ್ನು ಟೀಕಿಸಬೇಕು ಎಂಬ ಪರಿಜ್ಞಾನ ಇರುತ್ತದೆ , ನೀವು ಯಾವುದನ್ನೇ ಆಗಲೀ ವಿದಾರ್ಥಿ ದೆಸೆಯಲ್ಲಿ ಟೀಕಿಸಲು ಹೋಗಬೇಡಿ, ಹಾಗೆ ಮಾಡಲುಇಚ್ಚಿದರೆ ನೀವು ಐವತ್ತು ವರ್ಷಗಳ ನಂತರ ಟೀಕಿಸಲು ಪ್ರಾರಂಭಿಸಿ, ಸಂವಿಧಾನದ ಬಗ್ಗೆ ತಿಳಿದು ಕೊಂಡಿದ್ದರೆ ಉತ್ತಮ ಪ್ರಜೆಗಳಾಗುತ್ತೀರಿ, ಏನೂ ಆಗದಿದ್ದರೆ ಉತ್ತಮ ನಾಗರೀಕ ರಾಗುತ್ತೀರಿ ಎಕೆಂದರೆ, ಆ ಸಮಯಕ್ಕಾಗಲೇ ನಿಮ್ಮ ಬುದ್ದಿ ಪಕ್ವ ವಾಗಿರುತ್ತದೆ ,ಟೀಕೆ ಮಾಡುವ ಯೋಚನಾ ಶಕ್ತಿ ಬೆಳೆದಿರುತ್ತದೆ.
ಆದ್ದರಿಂದ ಆಡಳಿತವನ್ನು ಟೀಕೆಮಾಡುವ ಗೋಜಿಗೆ ಹೋಗದಿರಲು ಅವರು ವಿದ್ಯಾರ್ಥಿಗಳನ್ನು ಎಚ್ಚರಿಸಿದರು. ಸ್ಪರ್ದಾತ್ಮ್ಮಕ ಪರಿಕ್ಷೆಗಳಿಗೆ ಕಠಿಣ ಪರಿಶ್ರಮವೊಂದೇ ಸಾದನ , ನಿಮ್ಮ ಎದುರಾಳಿಯ ನ್ಯೂನ್ಯತೆಗಳ ಬಗ್ಗೆ ಚಿಂತಿಸದೆ ಅವರ ಶಕ್ತಿಯಬಗ್ಗೆ ಚಿಂತಿಸಿ ನಿಮ್ಮ ಗುರಿಬಗ್ಗೆ ಲಕ್ಷವಿದ್ದರೆ ಗೆಲುವು ಖಚಿತ ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿತುಂಬಿದರು.ಇದೇ ವೇದಿಕೆಯಲ್ಲಿ ಜಿಲ್ಲಾ ಎಸ್ಪಿ ಶ್ರೀಹರಿಬಾಬು ತಮ್ಮಭಾಲ್ಯದ ಅನುಭವಗಳು ಹಾಗು ತಾವು ಹೇಗೆ ಸ್ಪರ್ದಾತ್ಮಕ ಪರಿಕ್ಷೆಗಳನ್ನು ಬರೆದು ಹತಾಶರಾದಾಗ ಓದಗಿ ಬಂದ ಅದೃಷ್ಠ ವನ್ನು ವಿವರಿಸಿ , ಶ್ರಮದ ಜೊತೆಗೆ ಅದೃಷ್ಠಕೂಡಾ ಇರಬೇಕೆಂದು , ಹೇಳುತ್ತಾ, ವಿದ್ಯಾರ್ಥಿದಿಶೆಯಲ್ಲಿ ಪೋಕ್ಸೋ ಕಾಯ್ದೆಯಡಿ ಬರದಂತೆ ಜಾಗೃತರಾಗಿರಲು ಎಚ್ಚರಿಕೆ ನೀಡಿದರು.
ಎಸ್ಪಿ ಶ್ರೀಹರಿಬಾಬು ಒಂದು ಘಂಟೆಗಳಕಾಲ ಸ್ಪರ್ಧಾತ್ಮಕ ಪರೀಕ್ಷೆ ಹೇಗೆ ಮಾಡಬೇಕೆನ್ನುವುದರ ಕುರಿತು ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿ ಕಾಣಲು ಮತ್ತು ಸ್ಪರ್ಧಾತ್ಮ ಪರೀಕ್ಷೆಗಳನ್ನು ಎದುರಿಸಲು ಮೊದಲು ಒಂದುಕಡೆ ಸುಮಾರು ಒತ್ತುಗಳ ಕಾಲ ಕುರುವುದನ್ನು ರೂಡಿಸಿಕೊಳ್ಳಬೇಕು. ಹಾಗೇ ಮಾಡುವುದರಿಂದ ನಿಮ್ಮನ್ನು ಓದಲು ಉತ್ತೇಜನೆ ಕೊಡುತ್ತದೆ. ಓದುವ ಮೊದಲು ಸಂಭಂದಿಸಿದ ಮೆಟಿರಿಯಲ್ ಗಳನ್ನು ರೆಡಿಮಾಡಿಕೊಂಡು ಪ್ರಾರಂಭಿಸಬೇಕು ಎಂದು ಅವರ ಅನುಭವದ ಕಿವಿಮಾತುಗಳನ್ನು ಹೇಳಿದರು.
ಶಾಷು ಮೋದಿನ್ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ವಿಜಯನಗರ ಜಿಲ್ಲೆ, ಮಂಜುನಾಥ ಸಹಾಯಕ ಪ್ರಾಧ್ಯಾಪಕರು ಸಾಧನ ಆಕಾಡೆಮಿ ಶಿಕಾರಿಪುರ, ನಂದೀಶ ಬಿ ಶೆಟ್ಟರ್ ಜೀವನ ಕೌಶಲ್ಯ ತರಭೇತುದಾರರು ರಾಣೇಬೆನ್ನೂರು ಭಾಗವಹಿಸಿದ್ದರು.


