ವ್ಯಕ್ತಿ ಕಾಣೆ ಪತ್ತೆಗೆ ಸಹಕರಿಸಲು ಮನವಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 12- ಕೊಪ್ಪಳ ಸಮೀಪದ ಭಾಗ್ಯನಗರದ ಜನತಾ ಕಾಲೋನಿಯ ನಿವಾಸಿ 38 ವರ್ಷದ ಮೌಲಾಸಾಬ ತಂದೆ ಲಾಲಸಾಬ ಯರಡೋಣ ಎಂಬ ವ್ಯಕ್ತಿಯು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ ಠಾಣೆಯ ಠಾಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದದಾರೆ.
ವ್ಯಕ್ತಿಯು ಇದೇ ಜುಲೈ 10ರಂದು ಬೆಳಿಗ್ಗೆ 10-20 ಗಂಟೆಗೆ ಕೊಪ್ಪಳ ನಗರದಲ್ಲಿನ ಎಲ್.ಐ.ಸಿ ಕಚೇರಿಗೆ ಪಾಲಿಸಿ ಹಣ ತುಂಬಿ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿ ವಾಪಸ ಮನೆಗೆ ಬಾರದೆ ಕಾಣೆಯಾಗಿದ್ದಾರೆ ಎಂದು ವ್ಯಕ್ತಿಯ ಪತ್ನಿ ಜುಬೇದ ಬೇಗಂ ಅವರು ದೂರು ನೀಡಿದ್ದು, ಕೊಪ್ಪಳ ನಗರ ಪೊಲೀಸ್ ಠಾಣೆಯ ಗುನ್ನೆ ನಂ: 90/2024 ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ ವಿವರ: ಕಾಣೆಯಾದ ವ್ಯಕ್ತಿಯು 5.5 ಅಡಿ, ಸಾದಾಗಪ್ಪು ಮೈ ಬಣ್ಣ, ಸದೃಢ ಮೈಕಟ್ಟು, ದುಂಡು ಮುಖ ಹೊಂದಿದ್ದು, ಬಲಗೈ ತೋಳ ಮೇಲೆ ಸುತ್ತಲತೆಯ ಕಪ್ಪು ಕಲೆ ಇದೆ. ತಲೆಯಲ್ಲಿ ಸಣ್ಣದಾಗಿ ಕಪ್ಪು-ಬಿಳಿ ಮೀಸೆ ಮತ್ತು ಕೂದಲು ಹೊಂದಿರುತ್ತಾನೆ. ಕಾಣೆಯಾದಾಗ ಬದಾಮಿ ಬಣ್ಣದ ತುಂಬು ತೋಳಿನ ಅಂಗಿ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಕನ್ನಡ, ತಲುಗು, ಹಿಂದಿ ಭಾಷೆ ಮಾತನಾಡುತ್ತಾನೆ.
ಈ ವ್ಯಕ್ತಿಯು ಯಾರಿಗಾದರೂ ಕಂಡಲ್ಲಿ ಅಥವಾ ಮಾಹಿತಿ ದೊರೆತಲ್ಲಿ ಕೊಪ್ಪಳ ಕಂಟ್ರೋಲ್ ರೂಂ:ನಂ 08539-230100 ಮತ್ತು 230222, ಕೊಪ್ಪಳ ನಗರ ಪೊಲೀಸ ಠಾಣೆ ಪೊಲೀಸ ಇನ್ಸಪೆಕ್ಟರ್ ಮೊ.ಸಂ: 9480803745, ನಗರ ಠಾಣೆಯ ಪೊಲೀಸ ಸಬ್ ಇನ್ಸಪೆಕ್ಟರ್ [ಕಾ&ಸು] ಮೊ.ನಂ 9449484086 ಮತ್ತು ನಗರ ಪೊಲೀಸ ಠಾಣೆಯ ದೂರವಾಣಿ ನಂ: 08539-220333 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.
