WhatsApp Image 2024-06-06 at 11.52.03 AM

ಸಚಿವ ಬಿ.ನಾಗೇಂದ್ರ ರ ರಾಜೀನಾಮೆ ಸಲ್ಲದು : ಎಂ.ಜಿ ಕನಕ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 6- ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಅಗ್ರಹ ಮಾಡುತ್ತಿದೆ. ಆದರೆ ಇದರಲ್ಲಿ ಮಾನ್ಯ ಸಚಿವರ ಪಾತ್ರ ಇಲ್ಲದಿರುವುದರಿಂದ ಅವರು ರಾಜೀನಾಮೆ ನೀಡಬಾರದು ಎಂದು ಕಾಂಗ್ರೆಸ್ ಯುವ ಮುಖಂಡ ಎಂ.ಜಿ.ಕನಕ ಅವರು ಒತ್ತಾಯ ಮಾಡಿದ್ದಾರೆ.

ಇಂದು ಬಳ್ಳಾರಿ ನಗರದಲ್ಲಿ ಮಾತನಾಡಿ ಅವರು ಸಚಿವರು ರಾಜೀನಾಮೆ ನೀಡಿದರೆ, ಬಳ್ಳಾರಿಯಲ್ಲಿ ನಾಯಕತ್ವ ಕೊರತೆ ಉಂಟಾಗುತ್ತದೆ, ಜೊತೆಗೆ ಬಳ್ಳಾರಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಿಲ್ಲುತ್ತವೆ. ಹಾಗೇ ಮುಂದೆ ಬರುವ ಜಿಲ್ಲಾ ಪಂಚಾಯತ್ ಚುನಾವಣೆ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಭಾರಿ ಹೊಡೆತ ಬಿಳುವ ಸಾಧ್ಯತೆ ಇರುವುದರಿಂದ ಮಾನ್ಯ ಸಚಿವ ಬಿ.ನಾಗೇಂದ್ರ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾಡದು ಎಂದರು.

ಸಚಿವರ ರಾಜೀನಾಮೆಯಿಂದ ಬಿಜೆಪಿಗರಿಗೆ ಅನುಕೂಲವಾಗುತ್ತೆ. ಮತ್ತೆ ಅವರ ದುರಾಡಳಿತ ಹೆಚ್ಚಾಗುತ್ತದೆ ಹಾಗಾಗಿ ಮಾನ್ಯ ಸಚಿವ ಬಿ.ನಾಗೇಂದ್ರ ಅವರು ರಾಜೀನಾಮೆ ನೀಡಬಾರದು ಎಂದು ಎಂ.ಜಿ.ಕನಕ ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!