ಸಡಗರದಿಂದ ಬಕ್ರೀದ್ ಹಬ್ಬ ಆಚರಣೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 17- ಮುಸ್ಲಿಂ ಸಮಾಜದ ಪವಿತ್ರವಾದ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಹಬ್ಬವನ್ನು ಇಂದು ನಗರದಲ್ಲಿ ಮುಸ್ಲಿಂ ಸೋದರರು ಸಡಗರದಿಂದ ಆಚರಿಸಿದರು. ನಗರದ ಈಗ ಮೈದಾನ ಮತ್ತು ನಗರದ ಅನೇಕ ಮಸೀದಿಗಳಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇಶದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ನಾಡಿನ ಒಳತಿಗಾಗಿ ವಿಶೇಷ ಪ್ರಾರ್ಥನೆ ಮಾಡಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ಹೊಸ ಹುಡುಗಿ ತೊಡಗಿ ತೊಟ್ಟ ಸಮುದಾಯದ ಮಕ್ಕಳು ಮಹಿಳೆಯರು ಹಿರಿಯರಾದಿಯಾಗಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಾಮೂಹಿಕ ಪ್ರಾರ್ಥನೆಯಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾಧ್ಯಮದ ಜೊತೆಗೆ ಮಾತನಾಡುತ್ತಾ ಪ್ರವಾದಿ ಇಬ್ರಾಹಿಂ ಅವರ ತ್ಯಾಗ ಬಲಿದಾನಗಳ ನೆನಪಿನಲ್ಲಿ ಆಚರಿಸುವ ಹಬ್ಬವೇ ಈದುಲ್ ಆದ್ ಹಾ ಭಾರತದಲ್ಲಿ ಈ ಬಕ್ರೀದ್ ಎಂದು ಪ್ರಸಿದ್ಧಿ ಪಡೆದುಕೊಂಡಿದೆ ತಿಳಿಸಿದರು.
ಅದೇ ರೀತಿಯಾಗಿ ಕಾಂಗ್ರೆಸ್ ಬಿಜೆಪಿ ಮುಖಂಡರು ಮುಸ್ಲಿಂ ಸಮುದಾಯದ ಜನರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು ತಿಳಿಸಿದರು.
ಈ ಸಂದರ್ಭದಲ್ಲಿ ವಖ್ಫ್ ಬೋರ್ಡಿನ, ಅಧ್ಯಕ್ಷ ಹುಮನ್ ಖಾನ್, ಪಾಲಿಕೆ ಸದಸ್ಯರಾದ ಪ್ರಪಂಚನ್ ಕುಮಾರ್, ನೂರು ಮಹಾಮದ್, ಡಿ ಅಯಾಜ್ ಅಹ್ಮದ್, ಪಾಲಿಕೆಯ ನಾಮಿನೇಟೆಡ್ ಕಾರ್ಪೊರೇಟರ್ ಅರ್ಷದ್ ನೂರ್ ಭಾಷಾ ಸೇರಿದಂತೆ ಸಾವಿರಾರು ಮಂದಿ ಮುಸಲ್ಮಾನರ ಸೋದರರು ಪಾಲ್ಗೊಂಡಿದ್ದರು.
