WhatsApp Image 2024-03-19 at 4.32.53 PM

ಸಡಗರದಿಂದ ಸಾಗಿದ ದುರ್ಗಮ್ಮ ಸಿಡಿಬಂಡಿ ರಥೋತ್ಸವ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,19- ನಗರ ಆರಾಧ್ಯ ದೇವತೆಯಾದ ಆದಿಶಕ್ತಿ ಕನಕದುರ್ಗಮ್ಮ ಸಿಡಿಬಂಡಿ ರಥೋತ್ಸವ, ಮಂಗಳವಾರ ಸಂಜೆ ಸಾವಿರಾರು ಭಕ್ತಾದಿಗಳ ಸಮಕ್ಷದಲ್ಲಿ ಸಡಗರದಿಂದ ನಡೆಯಿತು.

ಪ್ರತಿವರ್ಷದಂತೆ ಮುಂಜಾನೆ ದೇವಸ್ಥಾನದಲ್ಲಿ ಅಮ್ಮನವರಿಗೆ ಅಭಿಷೇಕ ಪಂಚಾಮೃತ ಅಭಿಷೇಕ ವಿಶೇಷ ಅಭಿಷೇಕಗಳು ನಡೆಸಿದ ನಂತರ, ಅರ್ಚಕರು ಬಂಗಾರು ಆಭರಣಗಳು ಮತ್ತು ನಾನಾ ವಿಧವಾದ ಪರಿಮಳ ಪತ್ರಗಳಿಂದ ಅಲಂಕರಿಸಿದ್ದರು. ಸಿಡಿ ಬಂಡಿಯನ್ನು ಎಳೆಯಲು ಬಂದ ಎತ್ತುಗಳಿಗೆ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.

ಮುತ್ತೈದೆ ಮಹಿಳೆಯರಿಂದ ಕುಂಬೋತ್ಸವ ನಡೆಯಿತು. ಪ್ರತಿವರ್ಷದಂತೆ ಸಿಡಿಬಂಡಿ ರಥೋತ್ಸವಕ್ಕೆ ಕರ್ನಾಟಕ ಆಂಧ್ರಪ್ರದೇಶ ಅನಾಭಾಗದ ಜನರು ಪಾಲ್ಗೊಂಡರು. ಒಂದು ಕಡೆ ಸಿಡಿ ಬಿಸಿಲು ಹೊಡೆಯುತ್ತಿದ್ದರು ಲೆಕ್ಕ ಮಾಡದೆ ಭಕ್ತಾದಿಗಳು ಮಧ್ಯಾಹ್ನದಿಂದಲೇ ದೇವಸ್ಥಾನಕ್ಕೆ ಬರಲು ಪ್ರಾರಂಭವಾಯಿತು.

ಗ್ರಾಮೀಣ ಪ್ರಾಂತ್ಯದಿಂದ ಸವಾರಿ ಬಂಡಿಗಳಲ್ಲಿ ಬಂದ ರೈತರು ತಮ್ಮ ಬಂಡಿಗಳಿಗೆ ಮತ್ತು ಎತ್ತುಗಳಿಗೆ ಮಾಡಿದ ಅಲಂಕಾರ ನೋಡುವರ ಮನಸ್ಸು ಸಳಿಯಿತು.

ಇನ್ನು ನಗರದ ಸಂಘ ಸಂಸ್ಥೆಗಳು ಮತ್ತು ಮುಜರಾಯಿ ಇಲಾಖೆ ಬಂದ ಭಕ್ತಾದಿಗಳಿಗೆ ಅನ್ನ ದಾಸೋಹ ಮತ್ತು ದರ್ಶನಕ್ಕೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಯಿತು. ನಿನ್ನೆ ರಾತ್ರಿಯ ವಿಶೇಷ ಪೂಜೆ ನಂತರ ಸ್ವರ್ಣ ಮುಖ ಕೌಚದಲ್ಲಿ ದುರ್ಗಮ್ಮ ವಿಗ್ರಹದ ದರ್ಶನ ನಡೆಯುತ್ತಿದ್ದು ಭಕ್ತರು ಸಾಲಾಗಿ ಬಂದು ದರ್ಶನ ಪಡೆದರು.

ದೇವಸ್ಥಾನ ಆವರಣಕ್ಕೆ ನೆನ್ನೆ ರಾತ್ರಿ ಬಂದ ಸಿಡಿಬಂಡಿ ಎತ್ತುಗಳ ಜೊತೆಗೆ ಮೂರು ಸಲ ಪ್ರದಕ್ಷಣೆ ಹಾಕಿದ ನಂತರ ಸಾವಿರಾರು ಬಂದು ಭಕ್ತಾದಿಗಳು ಜೈದುರ್ಗಮ್ಮ, ಬೋಲೋ ಕನಕ ದುರ್ಗಮ್ಮ ಮಹಾದೇವಿ ಕೋ ಅಂತ ಕೂಗಿದರು.

ದೇವಸ್ಥಾನವನ್ನು ಭೂ ಮತ್ತು ವಿದ್ಯುತ್ ಅಲಂಕಾರದಿಂದ ಮಾಡಲಾದ ಅಲಂಕಾರಣೆ ಭಕ್ತಾದಿಗಳು ಕಣ್ತುಂಬ ವೀಕ್ಷಿಸಿದರು.

ಸಿಡಿಬಂಡಿಗೆ ತೆಂಗಿನ ಕಾಯಿ ಅರ್ಪಿಸಿ ಬಾಳೆಹಣ್ಣು ಉತ್ತುತ್ತಿ, ಜೀವಂತ ಕೋಳಿ ಎಸೆದು ತಮ್ಮ ಭಕ್ತಿ ಸಮರ್ಪಿಸಿದರು.

ದುರ್ಗಮ್ಮ ಸಿಡಿ ಅಂಗವಾಗಿ ದೇವಸ್ಥಾನ ಆವರಣದಲ್ಲಿ ಭಕ್ತಾದಿಗಳಗಾಗಿ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ, ಸಹಯೋಗದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ನಗರದ ಮುಖಂಡರು ಮತ್ತು ನಾನಾ ಭಾಗದ ಭಕ್ತಾದಿಗಳು ಅಮ್ಮನವರ ದರ್ಶನವನ್ನು ಪಡೆಯಲು ಸಾಲು ಕಟ್ಟಿದರು.

Leave a Reply

Your email address will not be published. Required fields are marked *

error: Content is protected !!