ಸಡಗರ ಸಂಭ್ರಮದ ದೀಪಾವಳಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 12- ಸಡಗರ ಸಂಭ್ರಮದಿಂದ ಜಿಲ್ಲೆಯಾದ್ಯಂತ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.
ರವಿವಾರದಂದು ಬೆಳಿಗ್ಗೆ ಯಿಂದ ಜನತೆ ಹಬ್ಬದ ಸಂದರ್ಭದಲ್ಲಿ ಮುಳಗಿದ್ದರು.
ಅಮವಾಸ್ಯೆ ಹಿನ್ನೆಲೆಯಲ್ಲಿ ಮಾರುಕಟ್ಟೆ ಹಾಗೂ ಮನೆಗಳಲ್ಲಿ ಲಕ್ಷ್ಮಿ ಪೂಜೆ ಮಾಡುವ ಮೂಲಕ ಜನತೆ ಭಕ್ತಿ ಭಾವದಲ್ಲಿ ಹಬ್ಬ ಆಚರಿಸಿದರು.
ಜೋರು ; ದೀಪಾವಳಿ ಹಬ್ಬಕ್ಕೆ ವಿವಿಧ ಹೂವುಗಳ ಹಾಗೂ ಹಣು ಕಾಯಿಗಳ ಖರೀದಿ ಜೋರಾಗಿ ನಡೆದಿತ್ತು.
ಪಟ್ಟಣದ ತುಂಬೆಲ್ಲ ಚಂಡು ಹೂ, ಅಡಿಕೆ ಹೂ, ರೇಷ್ಮೆ ಹೂ ಗಳು ಹಾಗೂ ಬಾಳೆಗೊನೆ, ಕಬ್ಬು , ತೆಂಗಿನ ಗರಿ, ಬಾಳೆಹಣ್ಣು, ಸೇಬು, ಸಿತಾಪತಾಲ, ಮೋಸಂಬಿ, ದ್ರಾಕ್ಷಿ, ಪ್ಯಾರಲ ಹಣು ಹಣ್ಣುಗಳ ಖರಿದಿ ಪಟ್ಟಣದ ತುಂಬೆಲ್ಲ ಜೋರಾಗಿ ಭಾನುವಾರ ನಡೆಯಿತು.
ವಿವಿಧ ಗ್ರಾಮಗಳಿಂದ ಬಂದಿದ್ದ ರೈತರನ್ನು ವ್ಯಾಪಾರ ಹೇಗಿದೆ ಎಂದು ಕೇಳಿದಾಗ ಬೆಳೆದ ಬೆಳೆಗೆ ಉತ್ತಮವಾದ ಬೆಲೆಗೆ ಜನರು ದೀಪಾವಳಿ ಹಬ್ಬವನ್ನು ಆಚರಿಸಲು ಖುಷಿಯಿಂದ ಖರೀದಿ ಮಾಡಲು ಬರುತ್ತಿದ್ದಾರೆ.ವ್ಯಾಪಾರ ಉತ್ತಮವಾಗಿ ಸಾಗಿದೆ ಎಂದು ವ್ಯಾಪಾರಸ್ಥರು ತಮ್ಮ ಖುಷಿಯನ್ನು ವ್ಯಕ್ತಪಡಿಸಿದರು.


