WhatsApp Image 2024-02-16 at 6.50.24 PM

ಸರಸ್ವತಿ ಪೂಜೆ,ವಿಷಯವಾರು ವಸ್ತು ಪ್ರದರ್ಶನ ಮತ್ತು ಮಕ್ಕಳ ಸಂತೆ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,16- ನಂದಿ ನಗರದ ಪ್ರಾಥಮಿಕ ಶಾಲೆಯಲ್ಲಿ ಇಂದುಮ ಸರಸ್ವತಿ ಪೂಜೆ,ವಿಷಯವಾರು ವಸ್ತು ಪ್ರದರ್ಶನ ಮತ್ತು ಮಕ್ಕಳ ಸಂತೆ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕೆ ವಿಶ್ವನಾಥ ಮಹಾಂತಯ್ಯನ ಮಠ ಶಿಕ್ಷಣ ಪ್ರೇಮಿಗಳು ಕೊಪ್ಪಳ ರವರು ಉದ್ಘಾಟಿಸಿ ಕಾರ್ಯಕ್ರಮದ ಚಾಲನೆಯನ್ನು ಮಾಡಿದರು.

ಕಾರ್ಯಕ್ರಮದ ವಿಶೇಷ ಅವ್ಹಾನಿತರಾಗಿ ಶ್ರೀಮತಿ ಹೇಮಾವತಿ ಚನ್ನಪ್ಪ ಬಳ್ಳಾರಿ, ಅಧ್ಯಕ್ಷರು ಶ್ರೀ ಸಿದ್ದರಾಮಯ್ಯ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್ ಕೊಪ್ಪಳ, ಶ್ರೀ ರಾಮು ಪೂಜಾರ ರಾಜ್ಯ ಪ್ರಶಸ್ತಿ ಪುರಸ್ಕೃತರು ಕಲ್ಯಾಣ ಕರ್ನಾಟಕ ಮಾಧ್ಯಮ ಪ್ರತಿನಿಧಿ, ಶ್ರೀ ಯಲ್ಲಪ್ಪ ಬನ್ನಿಮಟ್ಟಿ ಸಮೂಹ ಸಂಪನ್ಮೂಲ ವ್ಯಕ್ತಿಗಳು ಪೂರ್ವ ಕ್ಲಸ್ಟರ್ ಕೊಪ್ಪಳ, ಶ್ರೀ ಬಸವರಾಜ್ ಆರ್ ಬಿ ಸಮೂಹ ಸಂಪನ್ಮೂಲ ವ್ಯಕ್ತಿಗಳು ಕೊಪ್ಪಳ, ಶ್ರೀ ರಾಘವೇಂದ್ರ ಉಪಾಧ್ಯಾಯ ಕಾರ್ಯದರ್ಶಿಗಳು ಜ್ಞಾನಭಾರತಿ ವಿದ್ಯಾಸಂಸ್ಥೆ ಕಿನ್ನಾಳ, ಶ್ರೀ ಯಲ್ಲಪ್ಪ ಡೇರಿಮನಿ, ಸಹ ಶಿಕ್ಷಕರು ಶ್ರೀ.ಗ. ಸಂ.ಪ್ರೌಢಶಾಲೆ ಕೊಪ್ಪಳ, ಶ್ರೀ ಪ್ರಶಾಂತ ಡಂಗೂರಮಠ, ಶಿಕ್ಷಣ ಪ್ರೇಮಿಗಳು ಇನ್ನು ಅನೇಕ ಮುಖ್ಯ ಅತಿಥಿಗಳು ಕಾರ್ಯಕ್ರಮದಲ್ಲಿ ನಗರದ ಪ್ರಮುಖ ಜನರು ಕಾರ್ಯಕ್ರಮವನ್ನು ವೀಕ್ಷಿಸಿ ಮಕ್ಕಳ ಪ್ರತಿಭೆಯನ್ನು ಕಂಡು ಸ್ವಚ್ಛ ಮನಸ್ಸಿನಿಂದ ಆಶೀರ್ವದಿಸಿದರು.

ಕಾರ್ಯಕ್ರಮವನ್ನು ಕುರಿತು ಶ್ರೀ ವಿಶ್ವನಾಥ ಮತ್ತು ಶ್ರೀಮತಿ ಹೇಮಾವತಿ ಚನ್ನಪ್ಪ ಬಳ್ಳಾರಿ ರವರು ಶಾಲೆ ಮತ್ತು ಕಾರ್ಯಕ್ರಮ ಕುರಿತು ಮಾತನಾಡಿದರು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಹಸೀನಾ ರವರು ಮಾಡಿದರು

Leave a Reply

Your email address will not be published. Required fields are marked *

error: Content is protected !!