ಸುರಕ್ಷಿತವಾಗಿ ವಾಹನ ಚಲಾಯಿಸಿ ಇನ್ನೊಬ್ಬರನ್ನು ಸುರಕ್ಷಿತವಾಗಿರಲು ಬಿಡಿ : ಇನ್ಸ್ಪೆಕ್ಟರ್ ಶ್ರೀನಿವಾಸ್ ಮೇಟಿ
ಕರುನಾಡ ಬೆಳಗು ಸುದ್ದಿ
ವಿಜಯನಗರ,13- ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ 2024,ವನ್ನು ವಿಜಯನಗರ ಜಿಲ್ಲಾ ಪೊಲೀಸ್ ಹೊಸಪೇಟೆ ಉಪವಿಭಾಗ, ಸಂಚಾರಿ ಪೊಲೀಸ್ ಠಾಣೆ ಹೊಸಪೇಟೆ, ಹಾಗೂ ವಾಹನ ಚಾಲಕರ ಸಂಘಗಳೊಂದಿಗೆ ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೊಸಪೇಟೆ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀನಿವಾಸ್ ಮೇಟಿ ರಸ್ತೆ ಸುರಕ್ಷತೆ ಬಗ್ಗೆ ಕುರಿತು ಮಾತನಾಡಿದ ಅವರು, ಕುಡಿದು ರಸ್ತೆಯಲ್ಲಿ ವಾಹನ ಚಲಾಯಿಸಬೇಡಿ, ವಾಹನದ ಪೂರಕವಾದ ದಾಖಲೆಗಳನ್ನು ಸರಿಯಾದ ಸಮಯಕ್ಕೆ ರಿನಿವಲ್ ಮಾಡಿಕೊಳ್ಳಿ, ಹೆಲ್ಮೆಟ್, ಸೀಟ್ ಬೆಲ್ಟ್ ಇಲ್ಲದೆ ವಾಹನ ಚಲಾಯಿಸಬೇಡಿ. ರಸ್ತೆ ನಿಯಮಗಳನ್ನು ಪಾಲಿಸಿ, ನೀವು ಸುರಕ್ಷಿತವಾಗಿ ವಾಹನ ಚಲಾಯಿಸಿ ಇನ್ನೊಬ್ಬರನ್ನು ಸುರಕ್ಷಿತವಾಗಿರಲು ಬಿಡಿ. ನಿಮಗಾಗಿ ಮನೆಯಲ್ಲಿ ನಿಮ್ಮನ್ನು ಅವಲಂಬಿತವಾಗಿರುವ ಕುಟುಂಬಗಳು ಕಾಯುತ್ತಿರುತ್ತವೆ. ಕುಟುಂಬವನ್ನು ಗಮನದಲ್ಲಿಟ್ಟುಕೊಂಡು ವಾಹನ ಚಲಾಯಿಸಿ ಎಂದರು.
ಈ ಸಂದರ್ಭದಲ್ಲಿ ಪ್ರಜಾವಾಣಿ ಪತ್ರಿಕೆಯ ರಸ್ತೆ ಸಂಚಾರದ ಮತ್ತು ನಿಯಮಗಳ ಜಾಗೃತಿಇರುವ ಭಾವ ಚಿತ್ರ, ಹಾಗೂ ಚಿಹ್ನೆ ಹೊಂದಿರುವ 2024ರ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಆಡಿಶನಲ್ ಎಸ್ ಪಿ ಸಲೀಮ್ ಪಾಶ, ಪ್ರಜಾವಾಣಿ ಜಿಲ್ಲಾ ವರದಿಗಾರರಾದ ಬಾಲಕೃಷ್ಣ, ವಿಜಯನಗರ ಜಿಲ್ಲಾ ಲಾರಿಮಾಲೀಕರ ಸಂಘದ ಜಿಲ್ಲಾಧ್ಯಕ್ಷರು ಮಣಿ, ಪ್ರ. ಕಾರ್ಯದರ್ಶಿ ಗುಜ್ಜಲ್ ಗಣೇಶ್, ಸಿ ಕೃಷ್ಣ, ದೇವರ ಮನೆ ವೆಂಕಟೇಶ್. ಸಂತೋಷ್ ಮತ್ತು ಹಲವಾರು ಚಾಲಕರ ಸಂಘದ ಸದಸ್ಯರು, ವಾಹನ ಸವಾರರು ಭಾಗವಹಿಸಿದ್ದರು.
