ವಿವೇಕಾನಂದರ ತತ್ವಗಳನ್ನು ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು : ಜಿಲ್ಲಾಧಿಕಾರಿ
ಕರುನಾಡ ಬೆಳಗು ಸುದ್ದಿ
ವಿಜಯನಗರ,13- ಭಾರತದ ಅತ್ಯಂತ ಪ್ರಸಿದ್ಧ ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಸ್ವಾಮಿ ವಿವೇಕಾನಂದರು ಒಬ್ಬರು, ಇಂಥವರ ತತ್ವ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಿ, ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕೆಂದು ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.
ಅವರು ರಾಷ್ಟ್ರೀಯ ಸೇವಾಯೋಜನೆ , ಯೂತ್ ರೆಡ್ ಕ್ರಾಸ್ ಘಟಕ ಹಾಗು ಐಕ್ಯುಎಸಿ, ಎನ್ಸಿಸಿ ರೇಂಜರ್ ಅಂಡ್ ರೋರ್ಸ್ ಸಹಯೋಗದೊಂದಿಗೆ ಶುಕ್ರವಾರ ವಿಜಯನಗರ ಮಹಾವಿದ್ಯಾಲಯದ ಸುವರ್ಣ ಭವನದಲ್ಲಿ 162ನೇ ಸ್ವಾಮಿ ವಿವೇಕಾನಂದ ಜಯಂತಿ ಹಾಗು ಈಷ್ಟ್ರೀಯ ಯುವದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶಾರದಾ ಮಠದ ಮಾತಾ ಪ್ರಮೋದ ಮಯಿಯವರು ಸ್ವಾಮಿ ವಿವೇಕಾನಂದರ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಸುಂಡಿ ಬಿ ನಾಗರಾಜ್ ಗೌಡ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಭಾರತದ ಇಂದಿನ ಯುವ ಪೀಳಿಗೆ ಸ್ವಾಮಿ ವಿವೇಕಾನಂದರ ಬೋಧನೆಗಳನ್ನು ತಮ್ಮ ಜೀವನದಲ್ಲಿ ಬೆಳೆಸಲು ಮತ್ತು ಉತ್ತಮ ನಾಗರಿಕರಾಗಲು ಪ್ರಯತ್ನಿಸಬೇಕೆಂದರು. ಭಾರತ ರೆಡ್ ಕ್ರಾಸ್ ಕಾರ್ಯದರ್ಶಿಯಾದ ಅನ್ನಪೂರ್ಣಮ್ಮನವರು ಪ್ರಾಸ್ತವಿಕ ಮಾತನಾಡಿದರು. ಹಾಗು ಪೊಲೀಸ್ ಪೇದೆ ಶೇಖರ್ ಗೌಡರವರು ಸಂಚಾರಿ ನಿಯಮಗಳ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಶ್ರೀ ಸುಭಾಷ್ ಟಿ ಹಾಗೂ ಎನ್ ಎಸ್ ಎಸ್ ಅಧಿಕಾರಿಗಳಾದ ಡಾ.ವೀರೇಶ್ ಟಿ ಎಂ, ರವಿಕಿರಣ್ ಡಿ ಭಾರತ್, ರೆಡ್ ಕ್ರಾಸ್ ಅಧಿಕಾರಿಯಾದ ರವಿಶಂಕರ್ , ಶ್ರೀನಿವಾಸ್ ಮತ್ತು ಎನ್ಸಿಸಿ ಅಧಿಕಾರಿಗಳಾದ ಪ್ರಭುಸ್ವಾಮಿ ಟಿ.ಎಂ, ರೇಂಜರ್ ಅಂಡ್ ರೋರ್ಸ್ ಅಧಿಕಾರಿ ಶಿವಮಲ್ಲಿಕಾರ್ಜುನ ಇತರರಿದ್ದರು.
