WhatsApp Image 2024-02-11 at 10.40.27 AM

ಆಂಧ್ರ ಗಡಿ ಕನ್ನಡ ಸಾಂಸ್ಕೃತಿಕ ಉತ್ಸವ ಶಿಶಿರ ಸಂಭ್ರಮ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಶ್ರೀ ಪ್ರಶಸ್ತಿ ಪ್ರಧಾನ

ಕರುನಾಡ ಬೆಳಗು ಸುದ್ದಿ

 

ಸಿರುಗುಪ್ಪ,11- ಗಡಿ ಭಾಗದಲ್ಲಿ ಕನ್ನಡ ಭಾಷೆ ಉಳಿಯಲು ಗಡಿ ಭಾಗದ ಕನ್ನಡಿಗರು ಕಾರಣರಾಗಿದ್ದಾರೆ ಎಂದು ಆದೋನಿ ನಗರದ ಕಲ್ಲು ಮಠದ ಗುರು ಸಿದ್ದ ಸ್ವಾಮಿಜಿ ಹೇಳಿದರು.

ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆ ಆದೋನಿ ನಗರದ ಶ್ರೀ ಮಹೇಶ್ವರಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಸರ್ಕಾರ ಶ್ರೀ ಎಲೆ ಮಲ್ಲೇಶಪ್ಪನವರ ವೇದಿಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಕನ್ನಡ ಸಂಘ ಆದವಾನಿ ಇವರ ಸಹಭಾಗಿತ್ವದಲ್ಲಿ ಭಾರತ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಶಿಶಿರ ಸಂಭ್ರಮ ಆಂಧ್ರ ಗಡಿ ಕನ್ನಡ ಸಾಂಸ್ಕೃತಿಕ ಉತ್ಸವ ಹಮ್ಮಿಕೊಂಡ ಎಸ್ ಎಸ್ ಎಲ್ ಸಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಆಂಧ್ರಪ್ರದೇಶ ಗಡಿ ಭಾಗದ ಕನ್ನಡಿಗರ ಅನೇಕ ಸಮಸ್ಯೆಗಳಿಗೆ ಕರ್ನಾಟಕ ಸರ್ಕಾರ ಸೂಕ್ತವಾಗಿ ಸ್ಪಂದಿಸಿ ಅವರ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾಗಿದೆ ಉದ್ಯೋಗ ಶಿಕ್ಷಣದಲ್ಲಿ ಗಡಿಭಾಗದ ಕನ್ನಡಿಗರಿಗೆ ಮೀಸಲಾತಿಯನ್ನು ನೀಡಬೇಕು ಎಂದು ಒತ್ತಾಯ ಪಡಿಸಿದರು.

2022 -23 ನೇ ಸಾಲಿನ 10ನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಪ್ರಥಮ ವಿದ್ಯಾರ್ಥಿಗೆ 12 ಸಾವಿರ ರೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗೆ 11ಸಾವಿರ ರೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗೆ 10ಸಾವಿರ ರೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ವೀರೇಂದ್ರ ಭಟ್, ಪುರಸಭಾ ಅಧ್ಯಕ್ಷ ಶಾಂತ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ ಸಂತೋಷ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಸಾಹಿತ್ಯ ಪರಿಷತ್ ಕಾವಲು ಜಾಗೃತಿ ಸಮಿತಿ ಸದಸ್ಯ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ, ಮುಖಂಡರಾದ ಯೇಸು, ರಾಮಲಿಂಗಪ್ಪ, ಶರಣಬಸಪ್ಪ, ಶ್ರೀರಾಮು, ಕೃಷ್ಣಮೂರ್ತಿ ಗೌಡ ದೇಸಾಯಿ, ಚಂದ್ರಣ್ಣ ಶಾಲಾ ಮಕ್ಕಳು ಇದ್ದರು.

Leave a Reply

Your email address will not be published. Required fields are marked *

error: Content is protected !!