385c226e-0ff0-41af-b570-074120880634

ಎಲ್ಲರ ರಕ್ತವು ಒಂದೆ —ಡಾ,ಶಿವಕುಮಾರ ದಿವಟರ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ15 – 175 ದೇಶಗಳಲ್ಲಿ ರೆಡ್ ಕ್ರಾಸ ತನ್ನ ಸೇವೆಯನ್ನು ಮಾಡುತ್ತಿದೆ. ಕೊಪ್ಪಳ ಜಿಲ್ಲೆಯೂ ರಾಜ್ಯಪ್ರಶಸ್ತಿಯನ್ನು ಸತತವಾಗಿ ಐದು ಭಾರಿ ಪಡೆದಿದೆ. ನಮ್ಮ ಜಿಲ್ಲೆಯ ಜನರು ಮತ್ತೋಬ್ಬರ ಜೀವನ ಉಳಿಸಲು ರಕ್ತದಾನ ಮಾಡುತ್ತಿರುವುದು ಶ್ಲಾಘನೀಯ. ಎಲ್ಲರ ರಕ್ತವುಕೆಂಪಾಗಿದೆ . ಜಾತಿಯನ್ನುನಾವು ಸ್ರಷ್ಟಿಮಾಡಿಕೊಂಡಿದ್ದೇವೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಾಯಿಸ್ ಚೇರಮನ್ ಡಾ! ಶಿವಕುಮಾರ ದಿವಟರ ಹೇಳಿದರುˌ
ಅವರು   ಪಟ್ಟಣದ ನಿಂಗೋಜಿ ಬಿ.ಇಡಿ.ಕಾಲೇಜಿನಲ್ಲಿ ಟ್ರಸ್ಟಿನ ಅಧ್ಯಕ್ಷ ಹಾಗೂ ನ್ಯಾಯವಾದಿಗಳಾದ ಎಸ್.ಎ.ನಿಂಗೋಜಿ ರವರ 53 ನೇ ಹುಟ್ಟುಹಬ್ಬದ ನಿಮಿತ್ಯ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಮನುಷ್ಯನನ್ನು ಬದುಕಿಸುವ ಶಕ್ತಿ ರಕ್ತದಾನದಿಂದ ಸಾಧ್ಯ ಎಂದರು.
ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಶಿವಶರಣಪ್ಪ ಬಳಿಗಾರಜ ದೇವೆಂದ್ರಪ್ಪ ಹಿಟ್ನಾಳ ˌ ರವಿ ನಿಂಗೋಜಿ ಡಾ! ವೀರಣ್ಣ ನಿಂಗೋಜಿ ಮಾತನಾಡಿದರು.

ಪ್ರಾ. ವೀರಬಧ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹಾಗೂ ಟ್ರಸ್ಟಿಗಳಾದ ವೀರಪ್ಪ ನಿಂಗೋಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸುಮಾರು 30 ಜನರು ರಕ್ತದಾನ ಮಾಡಿದರು. ಟ್ರಸ್ಟಿ ಹಾಗೂ ಗದುಗಿನ ಪಿ.ಪಿ.ಜಿ.ಕಾಲೇಜಿನ ಸಹಪ್ರಾಧ್ಯಪಾಕ ಡಾ!ವಿ.ಎ.ನಿಂಗೋಜಿ ˌ ಪ್ರಾ.ವೀರಬಧ್ರಪ್ಪ ˌ ಡಾ!ಶಿವಕುಮಾರ ದಿವಟರˌ ಗ್ರಾ.ಪ್ಂ. ಸದಸ್ಯ ಮರ್ಧಾನಸಾಬ ಮುಲ್ಲಾ ˌರವರು ರಕ್ತದಾನ ಮಾಡಿದವರಲ್ಲಿ ಪ್ರಮುಖರಾಗಿದ್ದರು. ರಕ್ತದಾನ ಮಾಡಿದ ಎಲ್ಲಾ 30 ಜನರನ್ನು ಗೌರವಿಸಲಾಯಿತು.ಶಿಕ್ಷಕ ಪ್ರಶಾಂತ ನಿರೂಪಿಸಿದರು, ಫ್ರೊ.ವೀರೇಶ ಪತ್ತಾರ ಸ್ವಾಗತಿಸಿದರು. ಫ್ರೋ.ಎಂ.ಎನ್. ಮಾಸಗಟ್ಟಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!