WhatsApp Image 2024-03-09 at 4.57.27 PM

ಜಾತಿಗಣತಿಯನ್ನು ಬಿಡುಗಡೆ ಮಾಡಲು ಅಗ್ರಹ  : ಕುಬೇರ ದಲ್ಲಾಲಿ

ಕರುನಾಡ ಬೆಳಗು ಸುದ್ದಿ

ವಿಜಯನಗರ,9- ಈ ಹಿಂದೆ ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳು ಲಭಿಸುತ್ತಿದ್ದವು ಜಿ.ಪಂಗೆ ಕನಿಷ್ಟ  8 ರಿಂದ 10 ಸ್ಥಾನಗಳು ಮೀಸಲಿರುತ್ತಿದ್ದವು. ಆದರೆ ಕ್ರಮೇಣ ಜಿಲ್ಲೆಗೆ 1 ಅಥವಾ 2 ಸ್ಥಾನಗಳಿಗೆ ಇಳಿದಿದೆ ಸಾಮಾನ್ಯ ಕ್ಷೇತ್ರಗಳಿಗೆ ಒತ್ತು ನೀಡಲಾಗಿದೆ, ಇದರಿಂದ ಒಬಿಸಿ ಮತ್ತು ಎಸ್ಸಿ ಎಷ್ಟಿಗಳಿಗೆ ರಾಜಕೀಯವಾಗಿ ದೊಡ್ಡ ಅನ್ಯಾಯವಾಗುತ್ತಿದೆ ಎಂದು ಹುಡಾ ಮಾಜಿ ಅಧ್ಯಕ್ಷ ಆರ್.ಕೊಟ್ರೇಶ್ ಬೇಸರ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕುರುಬರ ಸಂಘದ ಆವರಣದಲ್ಲಿ ಅಹಿಂದ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಪಾಪಿನಾಯಯಕನಹಳ್ಳಿ ಅಹಿಂದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು.

ಅಹಿಂದ ಸಮುದಾಯಗಳು ಹೆಚ್ಚಿನ ಸಾಲಭ್ಯ ಪಡೆದುಕೊಳ್ಳಲು ಹೋರಾಟದ ಮೂಲಕ ಹಕ್ಕುಗಳನ್ನು ಪಡೆಯಬೇಕು. ಅಹಿಂದ ಸಂಘಟನೆ ತಾಲೂಕಿನಲ್ಲಿ ಅಷ್ಟಾಗಿ ಸಂಘಟನೆಯಾಗಿದ್ದಿಲ್ಲ. ಕುಬೇರ ಅವರು ಅಧ್ಯಕ್ಷರಾದ ಬಳಿಕ ಸಂಘಟನೆಗೆ ಬಲ ತುಂಬಿದ್ದಾರೆ ಎಂದು ಶ್ಲಾಘಿಸಿದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ಎಚ್.ಎಸ್.ರಾಜು ಮಾತನಾಡಿ ಅಹಿಂದ ಎಂದರೆ ಹಿಂದುಳಿದ ಎಲ್ಲಾ ವರ್ಗಗಳು ಸೇರುತ್ತವೆ.ನಿಮ್ಮ ಒಂದು ಓಟು ಅತ್ಯಂತ ಮಹತ್ವದ್ದಾಗಿದೆ. ಹಾಗಾಗಿ ಮತವನ್ನು ಮಾರಿಕೊಳ್ಳದೆ ದೇಶದ ಉಜ್ವಲ ಭವಿಷ್ಯಕ್ಕಾಗಿ ಅಭಿವೃದ್ಧಿಗಾಗಿ ಮತ್ತು ನಿಮ್ಮ ರಕ್ಷಣೆಗಾಗಿ ಚುನಾವಣಾ ಸಂದರ್ಭದಲ್ಲಿ ಒಳ್ಳೆ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಸಂಘಟನೆ ಅಂತ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಕೆಲಸಮಾಡಬೇಕಾಗುತ್ತದೆ. ತಾವೆಲ್ಲರೂ ಒಗ್ಗಟ್ಟಿನಿಂದ ಈ ಸಂಘಟನೆಯಲ್ಲಿ ಭಾಗಿಯಾಗಿ ಎಂದರು.

ಹಾಲುಮತ ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ರವಿಕುಮಾರ್ ಸಂಘಟನೆಕಟ್ಟಲು ಮತ್ತು ಅಭಿವೃದ್ಧಿ ಕುರಿತು ಮಾತನಾಡಿದರು.

ಅಹಿಂದ ತಾಲೂಕು ಅಧ್ಯಕ್ಷ ದಲ್ಲಾಲಿ ಕುಬೇರ ಮಾತನಾಡಿ, ಕಳೆದ 8 ವರ್ಷಗಳಿಂದ ಅಹಿಂದ ವರ್ಗಗಳಿಗೆ ಏಳಿಗೆಗೆ  ಶ್ರಮಿಸಲಾಗುತ್ತಿದೆ.

ರಾಜ್ಯದ ಎಲ್ಲಾ ಶೋಷಿತರ ಪರವಾಗಿ ಹೋರಾಟ ಮಾಡಲು ಹಾಗೂ ನಾಡಿನ ಮುನ್ನಡೆಗಾಗಿ ಯುವ ಜನರನ್ನು ಸಂಘಟಿತರನ್ನಾಗಿಸುವ ಉದ್ದೇಶದಿಂದ ‘ಯುವ ಅಹಿಂದ’ ವೇದಿಕೆಯನ್ನು ಹುಟ್ಟು ಹಾಕಲಾಗುವುದು  ಸರಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸುವಲ್ಲಿ ನಿಸ್ವಾರ್ಥ ಸೇವೆ, ಹಿಂದುಳಿದ, ಅಸಂಖ್ಯಾತ, ದಲಿತ ಹಾಗೂ ಇತರೆ ದುರ್ಬಲ ಸಮುದಾಯಗಳಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಜಾಗೃತಿಗಾಗಿ ಈ ಸಂಘಟನೆ ಕಾರ್ಯನಿರ್ವಹಿಸಲಿದೆ ಜಾತಿಭೇದ ಮರೆತು ಎಲ್ಲರೂ ಸಮಾನರೆಂದು ಬದುಕಬೇಕು ಸೌಲಭ್ಯಗಳಿಂದ ವಂಚಿತರಾದಾಗ ಒಗ್ಗಟ್ಟಾಗಿ ಹೋರಾಟದ ಮೂಲಕ ಪಡೆದುಕೊಳ್ಳಬೇಕು ಎಂದರು.

ಶಾಸಕ ಗವಿಯಪ್ಪನವರು ನಿವೇಶನ, ಪಟ್ಟಾ ಇಲ್ಲದವರಿಗೆ ಪಟ್ಟಾ ಮಾಡಿಸಿ ಕೊಡಲು ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಮುಂದುವರೆಯುತ್ತದೆ. ಜಾತಿಗಣತಿಯನ್ನು ಬಿಡುಗಡೆಗೂ ಮುನ್ನವೇ ಕೆಲವು ಮೇಲ್ವರ್ಗಗಳು ವಿರೋಧಿಸುವುದು ಸರಿಯಲ್ಲ. ಸಿಎಂ‌ ಸಿದ್ದರಾಮಯ್ಯನವರು ಸಾಮಾಜಿಕ‌ ನ್ಯಾಯದಲ್ಲಿ ನಂಬಿಕೆ ಇಟ್ಟವರು. ಅವರು ಕೂಡಲೇ ಜಾತಿಗಣತಿಯನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಬಳಿಕ ಹುಡಾ ಮಾಜಿ ಅಧ್ಯಕ್ಷ‌ ಆರ್.ಕೊಟ್ರೇಶ ಅವರಿಗೆ ಬೃಹತ್ ಹೂವಿನಹಾರ ಹಾಕಿ ಗೌರವಿಸಲಾಯಿತು.

ಇದೇ ವೇಳೆ ಪಾಪಿನಾಯಕನಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಪಂಪಾಪತಿ ಇವರಿಗೆ ಆದೇಶ ಪತ್ರ ನೀಡಲಾಯಿತು.

ಈ ಸಂಧರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಆರ್.ಚೇತನರಾಜ್, ಹಿರಿಯ ಪತ್ರಕರ್ತ ವಿ.ಗಾಳೆಪ್ಪ, ಗ್ರಾ.ಪಂ.ಸದಸ್ಯ ಅಯ್ಯಪ್ಪ, ಕಾರಿಗನೂರು ಭಾಷಾ, ಬಿಸಾಟಿ ತಾಯಪ್ಪ, ಕೆ.ದೇವರಾಜ, ಕೇಶವ, ದಮ್ಮೂರು ಮಂಜುನಾಥ, ಆಟೋ ನಾಗರಾಜ, ಎಸ್.ನಾಗರಾಜ, ದಿಲ್ ಷದ್, ಲಕ್ಷ್ಮಿದೇವಿ, ಎಂ.ಗಣೇಶ, ಲಕ್ಷ್ಮಿಪತಿ, ಆನಂದ, ನೂರ್ ಬಾಷಾ, ಪಂಪಾಪತಿ, ನಾಗರಾಜ ಇದ್ದರು.

Leave a Reply

Your email address will not be published. Required fields are marked *

error: Content is protected !!