ಕೃಷಿ ಪರಿಕಾರಗಳ ಮರಾಟಗಾರರ ಮುಂಗಾರು ಪೂರ್ವಭಾವಿ ಸಭೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 17- ಜಿಲ್ಲಾ ಪಂಚಾಯತ್ ಬಳ್ಳಾರಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಹಯೋಗದಲ್ಲಿ ಸಿರುಗುಪ್ಪ ತಾಲೂಕ ಪಂಚಾಯತ್ ಸಭಾಭವನದಲ್ಲಿ ತಾಲೂಕು ಕೃಷಿ ಪರಿಕರ ರಸಗೊಬ್ಬರ ಬೀಜ ಕೀಟನಾಶಕ ಮಾರಾಟಗಾರರ ಮುಂಗಾರು 2024 – 25ನೇ ಪೂರ್ವಭಾವಿ ಸಭೆ ಜರುಗಿತು.
ರೈತರಿಗೆ ಕಡ್ಡಾಯವಾಗಿ ಖರೀದಿಸಿದ ಕೃಷಿ ಸಾಮಗ್ರಿಗಳಿಗೆ ರಶೀದಿ ನೀಡಲು ಹಾಗೂ ರಶೀದಿಯ ಮೇಲೆ ಸಂಬಂಧ ಪಟ್ಟ ರೈತರ ಸಹಿ ಪಡೆಯಲು ಸೂಚಿಸಲಾಯಿತು ಸರ್ಕಾರ ನಿಗದಿ ಪಡಿಸಿದ ದರದಲ್ಲೆ ಮಾರಾಟ ಮಾಡಲು ತಿಳಿಸಲಾಯಿತು.
ಅವಧಿ ಮುಗಿದ ಕೀಟ ನಾಶಕಗಳನ್ನು ಮಾರಾಟ ಮಾಡಬಾರದು ಹಾಗೂ ರಸಗೊಬ್ಬರ ಅಂಗಡಿಗಳಲ್ಲಿ ರಸ ಗೊಬ್ಬರ ಬಿಟ್ಟರೆ ಬೇರೆ ಯಾವುದೇ ಸಾಮಾಗ್ರಿಗಳನ್ನು ಮಾರಾಟ ಮಾಡಬಾರದು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ರೈತರಿಗೆ ಬಿತ್ತನೆ ಬೀಜ ಹಾಗೂ ಕಳಪೆ ರಸ ಗೊಬ್ಬರಗಳನ್ನು ವಿತರಣೆ ಮಾಡಬಾರದು ಅಂತಹ ಮಾರಾಟಗಾರರು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಗೌಪ್ಯವಾಗಿ ರಸಗೊಬ್ಬರಗಳನ್ನು ಸಂಗ್ರಹಿಸಿ ತಾತ್ಕಾಲಿಕ ಅಭಾವ ಸೃಷ್ಟಿಸಿ ಹೆಚ್ಚಿನ ದರಗಳಲ್ಲಿ ರಸಗೊಬ್ಬರಗಳನ್ನು ಮಾರಾಟ ಮಾಡದಿರಲು ಎಚ್ಚರಿಕೆ ನೀಡುತ್ತಾ ಬಿತ್ತನೆ ಬೀಜ ಮಾರಾಟಗಾರರಿಗೆ ಒತ್ತಾಯಪೂರ್ವಕವಾಗಿ ಒಂದೇ ಸಂಸ್ಥೆಯ ಬೀಜ ಮಾರಾಟ ಮಾಡದಿರಲು ರೈತರ ಆಯ್ಕೆಗೆ ಅನುಗುಣವಾಗಿ ಬಿತ್ತನೆ ಬೀಜ ಮಾರಾಟ ಮಾಡಲು ತಿಳಿಸಿ ಯಾವುದೇ ರೀತಿಯ ಬೀಜ ಅಭಾವ ಸೃಷ್ಟಿಸದಿರಲು ಹಾಗೂ ನಿಯಮಗಳನ್ನು ಅನುಸರಿಸದಿದ್ದಲ್ಲಿ ಕಾಯ್ದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಬಳ್ಳಾರಿ ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕ ತಿರುಮಲೇಶ್ ಅವರು ತಿಳಿಸಿದರು.
ತಾಲೂಕು ಜಂಟಿ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್, ಕೃಷಿ ಅಧಿಕಾರಿಗಳಾದ ನಿಸಾರ್ ಗರ್ಜಪ್ಪ, ಸಮಾಜ ಸುಧಾರಕ ಅಬ್ದುಲ್ ನಬಿ, ಕೃಷಿ ಮಾರಾಟಗಾರರ ಸಂಘದ ಅಧ್ಯಕ್ಷ ಮಾದವಯ್ಯ, ಕೃಷಿ ಪರಿಕಾರಗಳ ಮರಾಟಗಾರರು ಮತ್ತಿತರರು ಇದ್ದರು.
