IMG-20240524-WA0016

ಗವಿಮಠದಲ್ಲಿ ಅಕ್ಷರಾಭ್ಯಾಸ, ಆಯ್ಯಾಚಾರ (ಲಿಂಗದೀಕ್ಷೆ) ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 24- ನಗರದ ಸಂಸ್ಥಾನ ಗವಿಮಠದಲ್ಲಿ ಇಂದು ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮವು ಸರಸ್ವತಿ ಪೂಜಾ ಸಮಾರಂಭದೊAದಿಗೆ ಪ್ರಾರಂಭವಾಯಿತು.

ಇಂದು ಬೆಳಿಗ್ಗೆ 9.00 ಗಂಟೆಯಿAದ ಮಧ್ಯಾಹ್ನ 1.30 ರವರೆಗೆ ಗವಿಮಠದ ದಾಸೋಹ ಭವನದ ಮೇಲುಗಡೆ ಅಕ್ಷರಾಭ್ಯಾಸ ಕಾರ್ಯಕ್ರಮ ಜರುಗಿತು.

ಬೆಳಿಗ್ಗೆಯಿಂದಲೆ ಸಾವಿರಾರು ಭಕ್ತರು ತಮ್ಮ ಮಕ್ಕಳೊಂದಿಗೆ ಶ್ರೀಮಠಕ್ಕೆ ಆಗಮಿಸಿ ಕತೃ ಗದ್ದುಗೆಯ ದರ್ಶನ ಪಡೆದರು. ಪೂಜ್ಯ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಅಕ್ಷರಾಭ್ಯಾಸಕ್ಕೆ ಆಗಮಿಸಿದ ಎಲ್ಲ ಮಕ್ಕಳಿಗೆ ತಮ್ಮ ಅಮೃತ ಹಸ್ತದಿಂದ ಪಾಟಿ, ನೋಟಬುಕ್ ಮೇಲೆ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಕೊಪ್ಪಳ ಜಿಲ್ಲೆಯಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಸಹಸ್ರ ಸಂಖ್ಯೆಯಲ್ಲಿ ಭಕ್ತರು ತಮ್ಮ ಮಕ್ಕಳೊಂದಿಗೆ ಆಗಮಿಸಿದ್ದರು.

ಆಯ್ಯಾಚಾರ (ಲಿಂಗದೀಕ್ಷೆ) ಕಾರ್ಯಕ್ರಮ : ಸಂಸ್ಥಾನ ಗವಿಮಠದಲ್ಲಿ ಇಂದು ಬೆಳಿಗ್ಗೆ ಆಯ್ಯಾಚಾರ (ಲಿಂಗದೀಕ್ಷೆ) ಕಾರ್ಯಕ್ರಮ ಜರುಗಿತು.

ಬೆಳಗಿನ ಜಾವ ಗವಿಸಿದ್ಧೇಶ್ವರ ಕತೃ ಗದ್ದುಗೆಗೆ ಅಭಿಷೇಕದ ಮೂಲಕ ಪ್ರಾರಂಭವಾಯಿತು. ಮೈನಳ್ಳಿ-ಬಿಕನಳ್ಳಿ ಹಿರೇಮಠದ ಪೂಜ್ಯರಾದ ಷ.ಬ್ರ. ಸಿದ್ಧಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಆಯ್ಯಾಚಾರ (ಲಿಂಗದೀಕ್ಷೆ) ಕಾರ್ಯಕ್ರಮಕ್ಕೆ ನೊಂದಣಿಯಾದ ೧೦೮ ಜಂಗಮ ವಟುಗಳಿಗೆ ಇಷ್ಟಲಿಂಗಧಾರಣೆ ಮಾಡಿ ಪಂಚಾಕ್ಷರಿ ಮಹಾಮಂತ್ರವನ್ನು ಬೋಧನೆ ಮಾಡಿಲಾಯಿತು.

ನಂತರ ಆಶೀರ್ವಚನ ನೀಡಿದ ಪೂಜ್ಯರು ಜಂಗಮ ವಟುಗಳಿಗೆ ಪೂಜಾ ವಿಧಿ ವಿಧಾನಗಳ ಮತ್ತು ಅನುಷ್ಠಾನದ ಹಾಗೂ ಅದರ ಮಹತ್ವದ ಕುರಿತು ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗವಿಮಠದ ಪೂಜ್ಯರಾದ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಜಂಗಮ ವಟುಗಳಿಗೆ ಆಶೀರ್ವದಿಸಿ ಆಶೀರ್ವಚನ ನೀಡಿದರು.

ನಂತರ ಮಠದಲ್ಲಿ ಜಂಗಮ ವಟುಗಳಿಗೆ ಪ್ರಸಾದ ವಿನಿಯೋಗ ಕಾರ್ಯಕ್ರಮ ನೇರವೆರಿಸಲಾಯಿತು ಎಂದು ಗವಿಮಠದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!