ಗೌರವದಿಂದ ರಾಜೀನಾಮೆ ನೀಡಿ ಮಾದರಿಯಾಗಿದ್ದಾರೆ : ವೆಂಕಟೇಶ್ ಹೆಗಡೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 7- ಎಸ್ ಟಿ ನಿಗಮದ ಹಗರಣಕ್ಕೂ, ಇವರಿಗೂ ಸಂಬಂಧ ಇಲ್ಲದಿದ್ದರೂ, ಆರೋಪಗಳ ಮೇರಿಗೆ ಸಚಿವ ಸ್ಥಾನವನ್ನು ಬಿಟ್ಟುಕೊಟ್ಟು ಗೌರವವನ್ನು ಪ್ರದರ್ಶಿಸಿದ ಮಾಜಿ ಸಚಿವ ಬಿ ನಾಗೇಂದ್ರ ಪಕ್ಷದ ಶಿಸ್ತಿನ ಸಿಪಾಯಿ ಎಂದು, ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರರು ಹಾಗೂ ಕೆಪಿಸಿಸಿ ರಾಜ್ಯ ಸಂಯೋಜಕರು ಪ್ರಚಾರ ಸಮಿತಿಯಾದ ವೆಂಕಟೇಶ್ ಹೆಗಡೆ ಅಭಿಪ್ರಾಯಪಟ್ಟರು.
ವಿನಾಕಾರಣ ಬಿಜೆಪಿ ನಾಯಕರು ನಾಗೇಂದ್ರ ಮತ್ತು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಒಂದು ವೇಳೆ ಪ್ರಕರಣ ಮುಚ್ಚಿಹಾಕುವ ಅಥವಾ ಯಾರನ್ನಾದರೂ ರಕ್ಷಿಸುವ ಉದ್ದೇಶ ಇದ್ದಿದ್ದರೆ ಪ್ರಕರಣದ ವಿಚಾರಣೆ ವಿಶೇಷ ತನಕ ತಂಡ ರಚನೆ ಮಾಡುವ ಅವಶ್ಯಕತೆ ಇರುತ್ತಿದ್ದಿಲ್ಲ ಎಂದು ಸ್ಪಷ್ಟನೆ ನೀಡಿದರು.
ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಗೇಂದ್ರ ಅವರ ರಾಜೀನಾಮೆಯನ್ನು ಕೇಳಿಲ್ಲ, ಯಾವ ರೀತಿಯ ಒತ್ತಡವನ್ನು ಹೇರಿಲ್ಲ, ನಮ್ಮ ಪಕ್ಷ, ಭ್ರಷ್ಟಾಚಾರವನ್ನು ಸಹಿಸಲ್ಲ ಎಂದು, ವಿಚಾರಣೆ ನಂತರ ಈ ಪ್ರಕರಣದಲ್ಲಿ ನಿರ್ದೋಷಿ ಆಗಿ ನಾಗೇಂದ್ರ ಅವರು ಹೊರ ಬರುತ್ತಾರೆ ಎಂದು ಮತ್ತು ಸಚಿವ ಸ್ಥಾನವನ್ನು ಕೈ ಹಿಡಿಯುತ್ತಾರೆ ಎಂದು ಹೇಳಿದರು.
ಬಿಜೆಪಿ ನಾಯಕರು ತಮ್ಮ ಆಡಳಿತ ಅವಧಿಯಲ್ಲಿ ಏನೇನು ಹಗರಣ ಮಾಡಿದ್ದಾರೆ ಎಂಬುದನ್ನು ಖುದ್ದು ಅವರದ್ದೇ ಪಕ್ಷದಲ್ಲಿ ಇದ್ದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರು ಆಡಿಯೋ ತುಣಕಿನ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಇಂತಹ ಹಗರಣ ಮಾಡಿದ ಮಹನೀಯರು ಇಂದು ನಮ್ಮ ಸರ್ಕಾರವನ್ನು ಟೀಕೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಇನ್ನಾದರೂ ಇಂಥ ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ಒಂದು ಜವಾಬ್ದಾರಿಯುತ ಪಕ್ಷವಾಗಿ ಬಿಜೆಪಿ ನಡೆದುಕೊಳ್ಳಬೇಕು ಎಂದು ಹಿತ ನೋಡಿದರು.
