ಮುಖ್ಯಮಂತ್ರಿ ಡಿ ದೇವರಾಜ ಅರಸ್ ಅವರ 42ನೇ ಪುಣ್ಯ ಸ್ಮರಣೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 7- ಕರ್ನಾಟಕ ಸರ್ಕಾರ ತಾಲೂಕ ಆಡಳಿತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಿಸಿಎಂ ವಸತಿ ನಿಲಯದ ಆವರಣದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ 42ನೇ ಪುಣ್ಯ ಸ್ಮರಣೆ ಅಂಗವಾಗಿ ದೇವರಾಜ್ ಅರಸ್ ಅವರ ಪ್ರತಿಮೆಗೆ ಹೂ ಮಾಲೆ ಪುಷ್ಪ ಅರ್ಪಿಸಿ ನಮನ ಸಲ್ಲಿಸಿ ಗೌರವಿಸಲಾಯಿತು.
ಮುಖ್ಯ ಮಂತ್ರಿ ದೇವರಾಜ ಅರಸರ ಅಧಿಕಾರ ಅವಧಿಯಲ್ಲಿ ಅಧಿಕಾರ ವಂಚಿತ ಸಮುದಾಯಗಳನ್ನು ಗುರುತಿಸಿ ಅಧಿಕಾರ ನೀಡುವ ಕೆಲಸವಾಯಿತು ದೇವರಾಜ ಅರಸು ಅವರ ಕಾರ್ಯಕ್ರಮಗಳ ಅನುಕೂಲ ಪಡೆದ ಯುವಕರು ಶಿಕ್ಷಣ ಅಧಿಕಾರ ಪಡೆದು ಮುಖ್ಯ ವಾಹಿನಿಯಲ್ಲಿ ಬೆಳೆಯುವಂತಾಯಿತು.
ದೇವರಾಜ ಅರಸು ಅವರು ಹಾವನೂರ ಆಯೋಗದ ವರದಿಯನ್ನು ಜಾರಿಗೊಳಿಸಿ ಕರ್ನಾಟಕ ರಾಜ್ಯದಲ್ಲಿ ಕ್ರಾಂತಿ ಮಾಡಿದರು ಅಲ್ಪಸಂಖ್ಯಾತರ ಹಿಂದುಳಿದ ವರ್ಗ ದಲಿತ ಎಲ್ಲಾ ವರ್ಗಗಳ ಬದುಕಿಗೆ ಬೆಳಕಾದರು ಉಳುವವನೇ ಒಡೆಯ ಸಂಪೂರ್ಣವಾಗಿ ಜಾರಿಗೆ ತಂದು ಬಡ ರೈತರಿಗೆ ನೆರವಾದರು ದೇವರಾಜ ಅರಸು ಒಬ್ಬ ಸರಳ ವಿನಯ ಬದ್ಧತೆಯ ಮುತ್ಸದ್ದಿ ರಾಜಕಾರಣಿಯಾಗಿದ್ದರು ಅದಕ್ಕಾಗಿ ನಾವೆಲ್ಲ ಮಾತನಾಡಿದರೆ ಒಳ್ಳೆಯ ಮಾತನ್ನು ಮಾತನ್ನೇ ಆಡಾಬೇಕು ಇಲ್ಲವಾದರೆ ಮೌನವಾಗಿರಬೇಕು ಭಯಾ ಭಕ್ತಿ ಧೈರ್ಯದಿಂದ ಶಾಂತಿಯಿಂದ ಕೆಡಕು ಅಳಿಸಿ ಒಳ್ಳೆಯದನ್ನೇ ಮಾಡಬೇಕು ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ರಾಷ್ಟ್ರೀಯ ಸಾಕ್ಷರತಾ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಸದಸ್ಯರು ಸಮಾಜ ಸುಧಾರಕ ಎ ಅಬ್ದುಲ್ ನಬಿ ಅವರು ನುಡಿದರು.
