WhatsApp Image 2024-04-16 at 10.48.49 AM

ಗ್ಯಾರಂಟಿ ಯೋಜನೆಗಳೇ ರಾಜಶೇಖರ ಹಿಟ್ನಾಳ್ ಗೆಲುವಿಗೆ ಶ್ರೀರಕ್ಷೆ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 16- ಕೇಂದ್ರ ಸರ್ಕಾರ ಹೇಳಿಕೊಳ್ಳುವಷ್ಟು ಯಾವುದೇ ಸಾಧನೆ ಮಾಡದೆ ವಿನಾಕಾರಣ ಟೀಕೆಗಳು ಮಾಡುವುದೇ ದೊಡ್ಡ ಸಾಧನೆ ಎಂದು ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ಹೇಳಿದರು.

ಸಿರುಗುಪ್ಪ ನಗರದಲ್ಲಿ ಕೊಪ್ಪಳ ಲೋಕಸಭಾ ಚುನಾವಣೆ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಅಭಿಮಾನಿಗಳು ಈ ಬಾರಿಯ ಲೋಕಸಭಾ ಚುನಾವಣೆ 5 ಗ್ಯಾರಂಟಿ ಯೋಜನೆಗಳೇ ಕೈ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರ ಗೆಲುವಿಗೆ ಶ್ರೀರಕ್ಷೆ ಎಂದರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಗಳು ಬಿಜೆಪಿಗೆ ಕೈ ಕಟ್ಟಿ ಹಾಕಿದೆ ಲೋಕಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ ಬಿಜೆಪಿ ಸರ್ಕಾರ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಚುನಾವಣೆ ಬಹಳ ಮಹತ್ವವಾಗಿದ್ದು ಕಾಂಗ್ರೆಸ್ಸಿನ ಕಾರ್ಯಕರ್ತರು ಮುಖಂಡರು ಅಭಿಮಾನಿಗಳು ನಿಷ್ಠೆಯಿಂದ ಪ್ರಾಮಾಣಿಕವಾಗಿ ರಾಜಶೇಖರ ಹಿಟ್ನಾಳ್ ಅವರ ಗೆಲವಿಗೆ ಕೆಲಸ ಮಾಡಬೇಕಿದೆ ಎಂದರು.

ಬಡ ಜನರಿಗೆ ಹೇಳಿಕೊಳ್ಳುವಷ್ಟು ಯೋಜನೆಗಳು ಜಾರಿಗೆ ತರದೆ ಬಿಜೆಪಿ ಕಾಂಗ್ರೆಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದ ನೇತೃತ್ವದಲ್ಲಿ 25 ಗ್ಯಾರಂಟಿ ಯೋಜನೆಗಳು ಘೋಷಿಸಿದೆ ರಾಹುಲ್ ಗಾಂಧಿಯವರ ಕೈ ಬಲ ಪಡಿಸಬೇಕು ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಕಾಂಗ್ರೆಸ್ ಪಕ್ಷಕ್ಕೆ ಸಿದ್ಧಾಂತ ತತ್ವ ಇದೆ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುವುದು ಖಚಿತ ಲೋಕಸಭಾ ಚುನಾವಣೆ ರಾಜ್ಯದಲ್ಲಿ 20 ಕ್ಕೂ ಅಧಿಕ ಸೀಟುಗಳು ಗೆಲ್ಲುವುದು ವಿಶ್ವಾಸ ಹೊಂದಿದ್ದೇವೆ ಎಂದರು.

ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ ರಾಜಶೇಖರ ಹಿಟ್ನಾಳ ಅವರು ಮಾತನಾಡಿ ಸ್ವಾತಂತ್ರ್ಯ ತಂದು ಕೊಟ್ಟಂತಹ ಕಾಂಗ್ರೆಸ್ ಪಕ್ಷ ಬಡವರಿಗೆ ಅನೇಕ ಯೋಜನೆಗಳು ರೂಪಿಸಿವೆ ಲೋಕಸಭಾ ಚುನಾವಣೆ ವ್ಯಾಪ್ತಿಯಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ ಈ ಬಾರಿ ನನ್ನನ್ನು ಬಹುಮತದಿಂದ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿ ಕಾಂಗ್ರೆಸ್ಸಿಗೆ ಮತ ಚಲಾಯಿಸಿ ಎಂದು ಮತದಾರರಲ್ಲಿ ಕಾರ್ಯಕರ್ತರಲ್ಲಿ ಮುಖಂಡರಲ್ಲಿ ಅಭಿಮಾನಿಗಳಲ್ಲಿ ಮತ ಚಲಾಯಿಸಿ ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷ ಬಡವರ ಪರ ಇದೆ ಎನ್ನುವುದೇ ಗ್ಯಾರಂಟಿ ಯೋಜನೆಗಳೇ ಸಾಕ್ಷಿ ಎಂದರು.

ಈ ಸಂದರ್ಭದಲ್ಲಿ ಸಿರುಗುಪ್ಪ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ, ತಾಲೂಕ ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಎಂ ಮಾರುತಿ ವರಪ್ರಸಾದ್ ರೆಡ್ಡಿ, ಕಾಂಗ್ರೆಸ್ ಮುಖಂಡರಾದ ಬಿ ಎಂ ಸತೀಶ್ ಕೊಡ್ಲೆ, ಮಲ್ಲಿಕಾರ್ಜುನ ,ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ರಾಮಸ್ವಾಮಿ ಸಾಹುಕಾರ, ಸೈಯದ್ ಮೋಹಿದ್ದೀನ್ ಖಾದ್ರಿ, ಗೊರವರ ಶ್ರೀನಿವಾಸ, ನಗರಸಭಾ ಸದಸ್ಯ ಹೆಚ್ ಗಣೇಶ್ ಹಂಡಿ, ಹಾಶಿಮ್ ಚೌದ್ರಿ ,ಖಾಜಾಸಾಬ್ ಚಿಟಗಿ, ಹುಸೇನ್ ಸಾಬ್ ಮುಲ್ಲಾ, ರೋಫ್ ಸಾಬ್, ಮೀರಾ ಹುಸೇನ್, ಎಂ ನಜೀರ್, ಎ ರಬ್ಬಾನಿ, ಬ್ಯಾಟರಿ ಸಲ್ವಾತ್, ಟಿಪ್ಪು ಸುಲ್ತಾನ್ ಸಂಘದ ಇಬ್ರಾಹಿಂಪುರ್ ಹಮೀದ್, ಎನ್ಎಸ್ ಸಲೀಂ ಮುಲ್ಲಾ, ಕಲೀಮ್ ಮುಲ್ಲಾ, ದಾದಾ ಖಲಂದರ್, ಅಮೀರ್ ಬಾಷಾ, ಚಾರ್ಮಿನಾರ್ ಹಾಜಿ, ಹೋಟೆಲ್ ಗಫೂರ್ ಮೋದಿನ್ ಆರ್ಕಾಟ್ ಅಬ್ದುಲ್, ಹಮೀದ್ ಸಾಬ್, ಬಿ ಅಫ್ಜಲ್ ಹುಸೇನ್ ರಾವಿ ಹಾಳ್, ಹುಸೇನ್ ಪೀರ, ಜಿ ಎಸ್ ಮಿಂತಿ, ಟಿ ಮೊಹಮ್ಮದ್ ಶಫಿ, ಗ್ರಾಮಸ್ಥರು ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಕಾಂಗ್ರೆಸ್ ಪರ ಮನೆ ಮನೆ ತೆರಳಿ ರಾಜಶೇಖರ ಹಿಟ್ನಾಳ್ ಅವರನ್ನು 50ಸಾವಿರ ಬಹುಮತದಿಂದ ಗೆಲ್ಲಿಸಬೇಕೆಂದು ಪ್ರಚಾರ ಕಾರ್ಯದಲ್ಲಿ ಮನವಿ ಮಾಡುತ್ತಿದ್ದರು .

Leave a Reply

Your email address will not be published. Required fields are marked *

error: Content is protected !!