ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಆಯ್ಕೆ
ಕರುನಾಡ ಬೆಳಗು ಸುದ್ದಿ
ಕುಕನೂರು19-ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕಕ್ಷ್ಮೀ ಮತ್ತು ಯುವನಿಧಿ ಅನುಷ್ಠಾನ ಸಮಿತಿಗೆ ಪದಾಧಿಕಾರಿಗಳನ್ನು ಅಧಿಕಾರಿಗಳು ಆಯ್ಕೆ ಮಾಡಿದರು.
ಸಂಗಪ್ಪ ಗುತ್ತಿ(ಅಧ್ಯಕ್ಷ), ಸದಸ್ಯರಾಗಿ ರಾಜೇಶ ಕಾಳಿ, ಸುರೇಶ ಮ್ಯಾಗಳೇಸಿ, ಮಾಲತೇಶ ಮುಧೋಳ, ಮಹಾದೇವಿ ಮಾಳೆಕೊಪ್ಪ, ಸುಮಂಗಲಾ ಕೀರ್ತಿಗೌಡರ್, ಸಂತೋಷ ಮೆಣಸಿನಕಾಯಿ, ಮಹೇಶ ಯರಾಶಿ, ಮಹ್ಮದ್ ಸಿರಾಜುದ್ದಿನ್, ಅಮೇಶ ತಲ್ಲೂರು. ಶ್ರೀಧರ ದೇಸಾಯಿ, ಬಸವರಾಜ ಮಠದ್. ಭೀಮಣ್ಣ ಕುಂಡಿ, ಪ್ರಕಾಶ ಕಮತರ್, ವಜೀರಸಾಬ ತಳಕಲ್ ಆಯ್ಕೆಯಾದರು.
ಕುಕನೂರು ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಸಂಗಪ್ಪ ಗುತ್ತಿ ಆಯ್ಕೆಯಾದರು. ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ಅವರು ಆದೇಶಪತ್ರವನ್ನು ವಿತರಿಸಿದರು.
