ನಮ್ಮ ಜೀವನ ಭದ್ರತೆಗೆ ಅಂಚೆ ಕಚೇರಿಯಲ್ಲಿ ಹಣವನ್ನು ವಿವಿಧ ಉಳಿತಾಯ ಖಾತೆಯಲ್ಲಿ ತೊಡಗಿಸಲು ಮುಕ್ತ ಅವಕಾಶವಿದೆ
ಕರುನಾಡ ಬೆಳಗು ಸುದ್ದಿ
ಕುಕನೂರ,17- ಜೀವನ ಸುರಕ್ಷತೆಗಾಗಿ ಕುಟುಂಬದ ಭದ್ರ ಸ್ಥಿತಿ ನಿರ್ಮಿಸಲು ಗ್ರಾಮಾಂತರ ಪ್ರದೇಶದಲ್ಲಿನ ಪೋಸ್ಟಲ್ ಇಲಾಖೆಯ ಶಾಖಾ ಕಾರ್ಯಾಲಯಗಳಲ್ಲಿ ಸ್ಥಳೀಯ ಅಂಚೆ ಇಲಾಖೆಯ ಸಂಪರ್ಕ ಪಡೆದು ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರ ಸಲಹೆ ಸೂಚನೆ ಪಡೆದರು.
ವಿವಿಧ ಉಳಿತಾಯ ಖಾತೆಗಳಲ್ಲಿ ಹಣ ಡಿಫಾಜಿಟ್ ಮಾಡಿದರೆ ಇದರಿಂದ ಜೀವನಕ್ಕೆ ಏನಾದರೂ ಅಪಘಾತ ಸಂಭವಿಸಿ ಮರಣ ಹೊಂದಿದರೆ ಅವರ ಕುಟುಂಬದ ವಾರಸುದಾರರಿಗೆ ಕೇಂದ್ರ ಸರಕಾರದ ನಿಯಮದಂತೆ ಸಮರ್ಪಕ ಪರಿಹಾರ ಧನ ಪಡೆಯುವುದೆಂದು ಕೊಪ್ಪಳ ಜಿಲ್ಲೆಯ ಅಂಚೆ ಇಲಾಖೆಯ ಹಿರಿಯ ಅಧಿಕಾರಿ ಜಗದೀಶ ಛಲವಾದಿ ಇವರು ಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸಕ್ರಪ್ಪ ಮಂಗಳಪ್ಪ ಚಿನ್ನೂರ ಇವರ ಅಧ್ಯಕ್ಷತೆ ಯಲ್ಲಿ ಜರುಗಿದ ಗ್ರಾಮದ ಹಿರಿಯರˌ ಗ್ರಾಮ ಪಂಚಾಯತಿ ಸದಸ್ಯರˌ ಸಿಬ್ಬಂದಿ ವರ್ಗದವರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇವರು ಇಲಾಖೆಯ ಉಪಯುಕ್ತ ಯೋಜನೆ ವಿವರಣೆ ನೀಡಿದರು.
ಕೊಪ್ಪಳ ಲೋಕಸಭಾ ಸದಸ್ಯ ಸಂಗಣ್ಣ ಕರಡಿ ಇವರು ತಮ್ಮ ಎರಡು ಅವಧಿಯ ಸದಸ್ಯತ್ವದ ಕಾಲದಲ್ಲಿ ಇಲಾಖೆಯ ಸಮಗ್ರ ಬೆಳವಣಿಗಿಗೆ ಶ್ರಮಿಸಿದ ವಿವರವನ್ನು ತಿಳಿಸುತ್ತಾ ಜಿಲ್ಲಾ ಸ್ಥಳಕ್ಕೆ ಮುಖ್ಯ ಕಚೇರಿ ಮಂಜುರಾತಿ ಪಡೆದು ತಂದ ಇವರ 52006 ಅಕೌಂಟ್ ಗಳನ್ನು ಪ್ರಾರಂಭಿಸಲು ಮುತುವರ್ಜಿ ವಹಿಸಿ ಶ್ರಮಿಸಿದ ಇವರು ಹದಿಮೂರುವರೆ ಲಕ್ಷದ ಹಣದ ಡೆಫಾಜಿಟ್ ನ್ನು ವಿವಿಧ ಶ್ರೀಮಂತರು ಉದ್ಯಮಿದಾರರಿಗೆ ಮನವಲಿಸಿ ಕಟ್ಟಿಸಿದ್ದನ್ನು ಇಲಾಖೆಯ ಪರ ಹೆಮ್ಮೆಯಿಂದ ಹೇಳಿ ಅವರ ಸೇವೆಗೆ ಧನ್ಯತೆ ತಿಳಿಸಿದರು.
ತಳಕಲ್ ಗ್ರಾಮದಲ್ಲಿ ಸಬ್ ಪೋಸ್ಟ್ ಆಗಲು ಕಾರಣಕರ್ತರಾದ ಇವರು ಡಿವಿಜಿನಲ್ ರಾಜ್ಯ ಕೇಂದ್ರದ ಹಿರಿಯ ಅಧಿಕಾರಿಗಳ ಸಂಪರ್ಕದಲ್ಲಿರುವ ಇವರ ಕ್ರಿಯಾಶೀಲತೆ ಅಭಿವೃದ್ಧಿಪರ ಇವರ ಕಳಕಳಿ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು ಮಂಗಳೂರಲ್ಲಿ ಎಸ್.ಓ. ಆಫೀಸ್ ಪ್ರಾರಂಭಿಸಲು 5000 ಅಕೌಂಟ್ಸ್ ಗಳನ್ನು ತೆರೆಯಲು ವಿನಂತಿಸಿದ ಇವರು ತಮ್ಮ ಇಲಾಖೆಯ ಸಿಬ್ಬಂದಿಯವರು ನಿರಂತರ ಕಾರ್ಯೊನ್ಮುಖರಾಗುವರೆಂದು ಹೇಳಿದ ಇವರು ನಾಳೆಯಿಂದಲೇ ಈ ಕಾರ್ಯದ ಚಟುವಟಿಕೆಗಳು ಪ್ರಾರಂಭವಾಗಲು ಸೂಕ್ತ ಸಲಹೆ ಸೂಚನೆ ನೀಡಲು ನಿಮ್ಮೂರಿಗೆ ನಿತ್ಯ ಬರುವರೆಂದು ತಿಳಿಸಿದರು.
ಹಿರಿಯ ಪತ್ರಕರ್ತ ಕೊಟ್ರಪ್ಪ ತೋಟದ ಮುತ್ತಾಳˌ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನೀಲಂ ಚಳಗೇರಿ ಮಾತನಾಡಿ ಸರ್ವ ರೀತಿಯ ಸಹಕಾರಕ್ಕೆ ಗ್ರಾಮಸ್ಥರು ಕೈಗೂಡಿಸಲು ವಿನಂತಿಸಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ್ಯೆ ಅನ್ನಪೂರ್ಣ ಸುರೇಶ ಮ್ಯಾಗಳೇಶಿ, ಸರ್ವ ಸದಸ್ಯರು, ರೇವಣಸಿದ್ದಯ್ಯ ಅರಳಲೆಹಿರೇಮಠ, ಎಂ.ಬಿ.ಅಳವಂಡಿ, ಎ.ಸಿ.ಕಾಲಿಮಿರ್ಚಿ, ವಿಶ್ವನಾಥ ಮರಿಬಸಪ್ಪನವರ, ಈರಣ್ಣ ಎಮ್ಮಿ, ಮಂಜುನಾಥ ಬಂಡಿ, ಈರಣ್ಣ ಸುಂಕದ, ಶೇಖರಗೌಡ್ರ ಪೋಲೀಸಪಾಟೀಲ, ಗುರುರಾಜ ಇಲಕಲ್ ಮುತ್ತು ತಳವಾರ, ವೀರಣ್ಣ ಉಮಚಗಿ, ಭೀಮನಗೌಡ್ರ ಪೂಜಾರ, ರುದ್ರಗೌಡ್ರ ಪಾಟೀಲ, ಸುರೇಶ ಮ್ಯಾಗಳೇಶಿ, ನಾಗರಾಜ ದೇಸಾಯಿ, ಶಂಕರ ದೇಶಪಾಂಡೆ, ಗಟ್ಟೆಪ್ಪ ಉಮಚಗಿ, ಗುರುರಾಜ ದೇಶಪಾಂಡೆ, ಶಶಿ ಪೂಜಾರ, ಯಲ್ಲಪ್ಪ ಪೋಸ್ಟಲ್ ಇಲಾಖೆ ಮೊದಲಾದವರು ಭಾಗವಹಿಸಿದ್ದರು ಸ್ಥಳೀಯ ಪೋಸ್ಟ್ ಮಾಸ್ಟರ್ ರೋಹಿನಾ ಖಾಜಿ ಸ್ವಾಗತಿಸಿ ವಂದಿಸಿದರು.
