ದೇಸಿ ತರಬೇತಿ ಸಮಾರೋಪ ಸಮಾರಂಭ (1)

ದೇಸಿ ತರಬೇತಿ ಸಮಾರೋಪ ಸಮಾರಂಭ ತರಬೇತಿಯಲ್ಲಿನ ಅಂಶಗಳನ್ನು ಕಾರ್ಯರೂಪಕ್ಕೆ ತಂದು ರೈತರಿಗೆ ಅನುಕೂಲ ಕಲ್ಪಿಸಿ : ಡಿಸಿ ನಲಿನ್ ಅತುಲ್

ಕರುನಾಡ ಬೆಳಗು ಸುದ್ದಿ

ಕೊಪ್ಪಳ,13- ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೊಮಾ ಕೋರ್ಸ್ ಪೂರ್ಣಗೊಳಿಸಿದ ಎಲ್ಲ ತರಬೇತಾರ್ಥಿಗಳು ತರಬೇತಿಯಲ್ಲಿ ಕಲಿತ ಅಂಶಗಳನ್ನು ಕಾರ್ಯರೂಪಕ್ಕೆ ತಂದು ನಿಮ್ಮ ಸುತ್ತಲಿನ ರೈತರಿಗೆ ಅನುಕೂಲ ಕಲ್ಪಿಸಿಕೊಡಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಹೇಳಿದರು.

ಬುಧವಾರದಂದು ಜಿಲ್ಲಾ ಪಂಚಾಯತಿಯ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಹೈದರಾಬಾದ್, ಸಮೇತಿ(ಉತ್ತರ) ಕೃ.ವಿ.ವಿ. ಧಾರವಾಡ, ಕೃಷಿ ಇಲಾಖೆ ಕೊಪ್ಪಳ, ಕೃಷಿ ತಂತ್ರಜ್ಞರ ಸಂಸ್ಥೆ ಕೊಪ್ಪಳ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಗಂಗಾವತಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೊಮಾ ಕೋರ್ಸ್ ಪೂರ್ಣಗೊಳಿಸಿದ ಕೃಷಿ ಪರಿಕರ ಮಾರಾಟಗಾರರ ಟಿ.ಪಿ ಸಂಖ್ಯೆ 1963 ಹಾಗೂ 1964 ಬ್ಯಾಚುಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ಸುಮಾರು 2.82 ಲಕ್ಷ ಕೃಷಿ-ಇನ್‌ಪುಟ್ ಡೀಲರ್‌ಗಳಿದ್ದಾರೆ. ಅವರು ರೈತ ಸಮುದಾಯಕ್ಕೆ ಕೃಷಿ ಮಾಹಿತಿಯ ಪ್ರಧಾನ ಮೂಲವಾಗಿದ್ದಾರೆ. ಹೆಚ್ಚಿನ ರೈತರಿಗೆ ಮೊದಲ ಸಂಪರ್ಕ ಕೇಂದ್ರವೆಂದರೆ ಕೃಷಿ-ಇನ್‌ಪುಟ್ ಡೀಲರ್. ಕೃಷಿ ಕಾರ್ಯಾಚರಣೆಗೆ ಅಗತ್ಯವಿರುವ ವಿವಿಧ ಇನ್‌ಪುಟ್‌ಗಳನ್ನು ಖರೀದಿಸುವಾಗ ರೈತರು ಸ್ವಾಭಾವಿಕವಾಗಿ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಒಳಹರಿವಿನ ಬಳಕೆಯ ಬಗ್ಗೆ ಇನ್‌ಪುಟ್ ಡೀಲರ್‌ನಿಂದ ಮಾಹಿತಿ ಪಡೆಯಲು ಪ್ರಯತ್ನಿಸುತ್ತಾರೆ. ರೈತರಿಗೆ ನಿಮ್ಮ ಮೇಲೆ ನಂಬಿಕೆ ಇರುತ್ತದೆ. ಆದ್ದರಿಂದ ನೀವು ರೈತರು ಹಾಗೂ ಕೃಷಿ ಭೂಮಿಗೆ ಪೂರಕವಾಗಬಲ್ಲ ಸಲಹೆ, ಮಾಹಿತಿಗಳನ್ನು ರೈತರಿಗೆ ನೀಡಬೇಕು. ಈ ಕುರಿತು ತರಬೇತಿಯಲ್ಲಿ ಸಾಕಷ್ಟು ವಿಷಯಗಳನ್ನು ಕಲಿತಿರುತ್ತೀರಿ. ಅವುಗಳನ್ನು ಪ್ರಾಯೋಗಿಕವಾಗಿ ನಿಮ್ಮ ಅಂಗಡಿಗಳಲ್ಲಿ, ನಿಮ್ಮ ಬಳಿ ಬರುವ ರೈತರಿಗೆ ಸೂಕ್ತ ಮಾಹಿತಿ ನೀಡುವುದರ ಮೂಲಕ ರೈತರಿಗೆ ನೆರವಾಗಿ ಎಂದು ಜಿಲ್ಲಾಧಿಕಾರಿಗಳು ತರಬೇತಾರ್ಥಿಗಳಿಗೆ ತಿಳಿಸಿದರು.

ಇನ್‌ಪುಟ್ ಡೀಲರ್‌ಗಳನ್ನು ಅಗತ್ಯವಾದ ಜ್ಞಾನವನ್ನು ಒದಗಿಸುವುದರ ಮೂಲಕ ಪ್ಯಾರಾ-ವಿಸ್ತರಣಾ ವೃತ್ತಿಪರರಾಗಿ ರೂಪಿಸಬಹುದು. ಅವರು ವಿಸ್ತರಣಾ ಸೇವೆಗಳನ್ನು ವೃತ್ತಿಪರಗೊಳಿಸಬಹುದು ಮತ್ತು ಭಾರತೀಯ ಕೃಷಿಯಲ್ಲಿ ಮಾದರಿ ಬದಲಾವಣೆಯನ್ನು ತರಲು ಕೊಡುಗೆ ನೀಡಬಹುದು. ಈ ಹಿನ್ನೆಲೆಯಲ್ಲಿ ರಾಷ್ಟಿçÃಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ(ಮ್ಯಾನೇಜ್) ಒಂದು ವರ್ಷದ ಡಿಪ್ಲೊಮಾ ಕೋರ್ಸ್ ಎಂಬ ಶೀರ್ಷಿಕೆಯಡಿ ವಿನ್ಯಾಸಗೊಳಿಸಿದೆ. ಇದು ಸಜ್ಜುಗೊಳಿಸಲು ಸಂಬಂಧಿತ ಮತ್ತು ಸ್ಥಳ-ನಿರ್ದಿಷ್ಟ ಕೃಷಿ ಶಿಕ್ಷಣವನ್ನು ನೀಡುತ್ತದೆ. ಕ್ಷೇತ್ರ ಮಟ್ಟದಲ್ಲಿ ರೈತರು ಎದುರಿಸುತ್ತಿರುವ ದಿನನಿತ್ಯದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಮಾತನಾಡಿ, ಕೃಷಿ ಪರಿಕರ ಮಾರಾಟಗಾರರಿಗೆ ನೀಡಿರುವ ತರಬೇತಿಯು ಕ್ಷೇತ್ರಮಟ್ಟದಲ್ಲಿ ರೈತರೊಂದಿಗೆ ವ್ಯವಹರಿಸಲು, ರೈತರಿಗೆ ಸೂಕ್ತ ಮಾಹಿತಿಯನ್ನು ನೀಡಲು ಸಹಾಯಕವಾಗಿದೆ. ರೈತರು ನಿಮ್ಮ ಬಳಿ ಯಾವುದೇ ಕೃಷಿ ಪರಿಕರ ಖರೀದಿಗೆ ಬಂದಾಗ ಅವರೊಂದಿಗೆ ಗೌರವ ಹಾಗೂ ಸೌಜನ್ಯಯುತವಾಗಿ ವರ್ತಿಸಿ. ಅವರು ಬಯಸುವ ಪರಿಕರದ ಕುರಿತು, ಕೃಷಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಸೂಕ್ತ ಮಾಹಿತಿ ನೀಡಿ. ಸರ್ಕಾರ ಹಾಗೂ ರೈತರ ನಡುವೆ ನೀವು ಸೇತುವೆಯಂತೆ ಕಾರ್ಯನಿರ್ವಹಿಸಿ ಸರ್ಕಾರದ ಕೃಷಿ ಯೋಜನೆ, ಸೌಲಭ್ಯಗಳು ರೈತರಿಗೆ ದೊರೆಯುವಂತೆ ಮಾಡಬೇಕು. ಈಗ ಪಡೆದಿರುವ ತರಬೇತಿಯನ್ನು ಸಕಾರಾತ್ಮಕವಾಗಿ ಬಳಸಿಕೊಂಡು, ಗುಣಾತ್ಮಕ ವ್ಯವಹಾರಗಳಿಂದ ರೈತರಿಗೆ ಸಹಾಯ ಮಾಡಿ ಎಂದು ಹೇಳಿದರು.

ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್. ಅವರು ಮಾತನಾಡಿ, ಜಿಲ್ಲೆಯಲ್ಲಿ 593 ಇನ್‌ಪುಟ್ ಡೀಲರ್‌ಗಳು ಪರವಾನಿಗೆ ಹೊಂದಿದ್ದು, ಈಗಾಗಲೇ 40 ಅಭ್ಯರ್ಥಿಗಳನ್ನು ಹೊಂದಿರುವ 8ತರಬೇತಿಗಳನ್ನು ಆಯೋಜಿಸಿ 400 ಡೀಲರ್‌ಗಳಿಗೆ ತರಬೇತಿ ನೀಡಲಾಗಿದೆ. ಇಂದು 2 ಬ್ಯಾಚ್‌ಗಳ ತರಬೇತಿ ಪೂರ್ಣಗೊಂಡಿರುವ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸುವ ಮೂಲಕ ಈ ಬ್ಯಾಚ್‌ನ ತರಬೇತಿಯನ್ನು ಸಮಾರೋಪಗೊಳಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತರಬೇತಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ರಾಜ್ಯ ನೋಡಲ್ ಅಧಿಕಾರಿಗಳು(ದೇಸಿ) ಹಾಗೂ ಸಂಯೋಜಕರು ಸಮೇತಿ(ಉತ್ತರ) ಆದ ಡಾ.ಎಂ. ಗೋಪಾಲ ಅವರು ತರಬೇತಾರ್ಥಿಗಳಿಗೆ ಕಾರ್ಯನಿರ್ವಹಣೆಯ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.

ಈ ಸಂದರ್ಭ ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ರಾಘವೇಂದ್ರ ಎಲಿಗಾರ, ಕೊಪ್ಪಳ ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥರಾದ ಡಾ.ಎಂ.ವಿ. ರವಿ, ಉಪ ಕೃಷಿ ನಿರ್ದೇಶಕರಾದ ಸಹದೇವ ಯರಗೊಪ್ಪ, ಬೆಂಗಳೂರು ಕೃಷಿ ತಂತ್ರಜ್ಞರ ಸಂಸ್ಥೆಯ ಕಾರ್ಯದರ್ಶಿಗಳಾದ ವೀರಣ್ಣ ಕಮತರ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕರಷಿ ನಿರ್ದೇಶಕರಾದ ಡಾ.ಚಂದ್ರಕಾಂತ ನಾಡ ಗೌಡ, ದೇಸಿ ಫೆಸಿಲಿಟೇಟರ್ ಜಂಬಣ್ಣ, ಗಂಗಾವತಿ ಸಹಾಯಕ ಕೃಷಿ ನಿರ್ದೇಶಕರಾದ ಸಂತೋಷ ಪಟ್ಟದಕಲ್ ಸೇರಿದಂತೆ ತರಬೇತಾರ್ಥಿಗಳು, ಕೃಷಿ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!