ನಗರಸಭೆಯಲ್ಲಿ ಸಂವಿದಾನದ ಕಗ್ಗೊಲೆ ಸದಸ್ಯ ಖದೀರ್ ವ್ಯಕ್ತ ಅಧಿಕಾರಿ ಮೇಟಿ ಟಾರ್ಗೆಟ್
ಕರುನಾಡ ಬೆಳಗು ಸುದ್ದಿ
ವಿಜಯನಗರ,15- ನಗರಸಭೆಯಲ್ಲಿ ಸಂವಿಧಾನದ ಕೊಲೆಯಾಗುತ್ತಿದೆ,ಸಭೆಯಲ್ಲಿ ಆಗದ ನಿರ್ಣಯಗಳನ್ನು , ಒಪ್ಪಲಾಗಿದೆ ಎಂದು ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಠರಾವು ಬರೆದು ಕೊಳ್ಳುವುದು ಕಾನೂನು ಭಾಹೀರ ಕೃತ್ಯವಾಗಿದೆ ಆಂತಹ ಅಧಿಕಾರಿಯನ್ನು ಪತ್ತೆ ಹಚ್ಚಿ ಶೀಘ್ರವೇ ಕಾನೂನು ಕ್ರಮ ಕೈಗೊಳ್ಳಿ ಎಂದು ನಗರ ಸಭಾ ಸದಸ್ಯ ಖದೀರ್ ಏರು ದ್ವನಿಯಲ್ಲಿ ನೂತನ ಆಯುಕ್ತ ಶಿವಕುಮಾರ್ ರವರಿಗೆ ತಮ್ಮ ಪ್ರಸ್ತಾವನೆ ಸಲ್ಲಿಸಿದರು.
ಕೈ ಬಿಟ್ಟ ವಿಷಯಗಳನ್ನು ಓಪ್ಪಲಾಗಿದೆ ಎಂದು ಅದ್ಯಕ್ಷೆಯ ಸಹಿ ಪಡೆದು ನಿರ್ಣಯಗಳನ್ನು ಮಂಡಿಸುತ್ತಿರುವುದು ಸಂವಿದಾನದ ಕೊಲೆ ಅಲ್ಲದೆ ಇನ್ನೇನು ಎಂಬ ಪ್ರಶ್ನೆಗೆದ್ವನಿ ಗೂಡಿಸಿದ್ದು ಮಾಜಿ ಸ್ಥಾಯಿ ಸಮಿತಿ ಅದ್ಯಕ್ಷ ಜಂಬಯ್ಯ ಹಾಗು ಸದಸ್ಯ ಕೆ.ಗೌಸ್ , ಇಂತಹ ಎಷ್ಟೋ ಘಟನೆಗಳು ಕಣ್ಣು ತಪ್ಪಿಸಿ ನಡೆದು ಹೋಗಿದ್ದು, ಇದಕ್ಕೆ ರಾಜ್ಯದಲ್ಲಿಯೇ ನಗರಸಭೆಗೆ ಕೆಟ್ಟ ಹೆಸರು ಬಂದಿದೆ.
ಅಧಿಕಾರಿಗಳು ಹೀಗೆ ಮಾಡಿ ಕತಗಳು ಮಾಯವಾಗಿದ್ದು ಇನ್ನೂ ಮಾಸಿಲ್ಲ, ಆದಾಗ್ಯೂ ಈ ರೀತಿ ಸದಸ್ಯರ ಒಪ್ಪಿಗೆ ಪಡೆಯದ ವಿಷಯಗಳು ಅದು ಹೇಗೆ ಕೆಳ ಮಹಡಿಯಲ್ಲಿ ತಿದ್ದಲ್ಪಡುತ್ತಿವೆ ಎಂದು ಎಲ್ಲ ಸದಸ್ಯರು ದ್ವನಿಗೂಡಿಸಿದ ಪ್ರಸಂಗ ಇಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಜರುಗಿತು.
ನಗರ ಸಭೆ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ, ನಗರ ಸಭೆ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು. ಈ ಸಭೆಯಲ್ಲಿ ಹಲವಾರು ವಿಷಯಗಳು ಚರ್ಚೆಗೆ ಬಂದು ಕೆಲವು ಕಾಮಗಾರಿಗಳಿಗೆ ಅಸ್ತು ನೀಡಿ, ಇನ್ನೂ ಕೆಲವು ಕಾಮಗಾರಿಗಳನ್ನು ಮುಂದೂಡಲು ಮತ್ತು ಮರು ಟೆಂಡರ್ ಕರೆಯಲು ನಿರ್ಣಯಿಸಿದರು.
ಹಿಂದಿನ ಸಭೆಯಲ್ಲಿ ಕೇಳಿದ ಪ್ರಶ್ನೆ ಒಂದನ್ನು ಪ್ರಶ್ನಿಸಿದ ಸದಸ್ಯ ಎಲ್.ಎಸ್.ಆನಂದ್ ಹೊಸಪೇಟೆ ನಗರಸಭೆಗೆ ಸಂಭಂದಿಸಿದ ಎಷ್ಟು ಮಳಿಗೆಗಳು ಇವೆ , ಅವುಗಳಿಂದ ಎಷ್ಟು ಅನುದಾನ ನಗರಸಭೆಗೆ ಬರುತ್ತಿದೆ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ದೊರಕಿಲ್ಲ , ಅದನ್ನು ಉತ್ತರಿಸಿ ಮುಂದೆಹೋಗಿ ಎಂದ ಸದಸ್ಯಗೆ , ಕೊನೆಗೂ ಸರಿಯಾದ ಉತ್ತರ ದೊರಕಲಿಲ್ಲ.
ನಗರಸಭೆಯಿಂದ 1988ರಲ್ಲಿ 53 ಮಳಿಗೆಗಳು , 1997 ರಲ್ಲಿ 35 ಹಾಗು 2019ರಲ್ಲಿ 70 ಮಳಿಗೆಗಳು ಬಾಡಿಗೆ ನೀಡಿದ್ದು , ಅವುಗಳಿಗೆ ಭಾಡಿಗೆ ಹಾಗು ಕರಾರು ಪತ್ರಗಳು ಇಲ್ಲದೆ ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಇದ್ದು ಅವರು ನಗರಸಭೆಯಿಂದ ಪಡೆದು ಖಾಸಾಗಿ ಯವರಿಗೆ ಹೆಚ್ಚಿನ ಭಾಡಿಗೆ ಪಡೆಯುತ್ತಿರುವುದಲ್ಲದೆ , ಪತ್ರವ್ಯವಹಾರ ಮಾಡಿದರೆ ಕೋರ್ಟಗೆ ಹೋಗಿ ಕೇಸ್ ಹಾಕುವುದರಿಂದ ಇತ್ತ ಭಾಡಿಗೆ ಇಲ್ಲದೆ ನಗರಸಭೆಯ ಆದಾಯಕ್ಕೆ ದಕ್ಕೆ ತರುವ ಕೆಲಸ ಆಗುತ್ತಿದೆ ಇದಕ್ಕೆ ಖಡಿವಾಣ ಹಾಕಲು,ಪೋಲೀಸ್ ನೆರವಿನಿಂದ ಕರಾರು ಪತ್ರ ಇಲ್ಲದ ಮಳಿಗೆಗಳನ್ನು ಹದಿನೈದು ದಿನಗಳಲ್ಲಿ ತಮ್ಮ ವಶ ಪಡೆದು ಕೊಳ್ಳಲು ತೀವ್ರವಾಗಿ ಒತ್ತಾಯ ಮಾಡಲಾಯಿತು.
34ನೇ ವಾರ್ಡಿನ ಸದಸ್ಯಯಾದ ಲತಾ ಸಂತೋಷ ರವರು ನಗರಸಭೆಯ ಆಸ್ತಿಗಳು ಪ್ರಭಾವಿಗಳ ಪಾಲಾಗುತ್ತಿದ್ದು. ಸರ್ಕಾರದ ಆಸ್ತಿ, ಉದ್ಯಾನವನಗಳನ್ನು ಗುರುತಿಸಿ ತಂತಿ ಬೇಲಿ ಅಳವಡಿಸಿ, ನಗರ ಸಭೆ ವ್ಯಾಪ್ತಿಗೆ ತೆಗೆದುಕೊಂಡು ನಗರಸಭೆಯ ಹೆಸರಿನ ನಾಮಫಲಕ ಹಾಕಿ ವರದಿ ಕೊಡಲು ಎಂಟು ತಿಂಗಳ ಹಿಂದೆ ತಿಳಿಸಲಾಗಿತ್ತು ಇದುವರೆಗೂ ಯಾವುದೇ ಕೈಗೊಂಡಿಲ್ಲವೆಂದಾಗ, ಸಂಬಂಧಪಟ್ಟ ಸೆಕ್ಷನ್ ಅವರು ಇದುವರೆಗೂ 40 ಸ್ಥಳಗಳನ್ನು ಗುರುತಿಸಲಾಗಿದೆ ಮುಂದಿನ ದಿನಗಳಲ್ಲಿ ಬಿಲ್ ಕಲೆಕ್ಟರ್ ಸಹಾಯದೊಂದಿಗೆ ಹಂತ ಹಂತವಾಗಿ ಎಲ್ಲಾ ಸ್ಥಳಗಳನ್ನು ನಗರಸಭೆ ಸುಪರ್ದಿಗೆ ತೆಗೆದುಕೊಳ್ಳಲಾಗುವುದು ಎಂದರು.
ಶಾಸಕರ ಮನವಿಗೆ ಕಿಮ್ಮತ್ತಿಲ್ಲ: ವಿಷಯ 401ಕ್ಕೆ ಸಂಭಂಧಿಸಿದಂತೆ ಶಾಸಕ ಹೆಚ್.ಅರ್.ಗವಿಯಪ್ಪ ಅವರು ಮೀರ್ ಆಲಂ ಟಾಕೀಸ್ ರಸ್ತೆಯಲ್ಲಿ ಬಡವರಿಗೆ ಆಶ್ರಯವಾಗಲು ರಸ್ತೆ ಪಕ್ಕದಲ್ಲಿ ನಂದಿನಿ ಮಿಲ್ಕ ಪಾರ್ಲರ್ ಗೆ ಅನುಮತಿ ನೀಡುವ ಪ್ರಶ್ನೆಗೆ ಕೆಲ ಸದಸ್ಯರು ವಿರೋದ ವ್ಯಕ್ತ ಪಡಿಸಿದರೆ , ಕೆ.ಗೌಸ್ ಮತ್ತು ರಾಘವೇಂದ್ರ , ಶಾಸಕರು ಯಾವಾಗಲೋ ಒಂದು ಕೆಲಸ ಆಗುವಂತೆ ಕೇಳಿದ್ದಾರೆ ಅವರಿಗೆ ಗೌರವವಾಗಿ ನಾವು ಅನುಮತಿ ನಿರಾಕರಿಸ ಬಾರದು ಎಂಬ ಮಾತಿಗೆ , ಉತ್ತರವಾಗಿ ಪ್ರಶ್ನೆ ಅಪೂರ್ಣವಾಗಿ ಮುಂದೂಡಲಾಯಿತು.ಸದಸ್ಯರ ಮಾತಿಗೆ ಅಯುಕ್ತರು ಸಮಂಜಸ ಪ್ರತಿಕ್ರಿಯೆ ನೀಡಿದರು ,ಪ್ರಶ್ನೆಹದಿನೈದು ದಿನಗಳ ವರೆಗೆ ಮುಂದೂಡಲಾಯಿತು. ನಗರಸಭೆ ತರಕಾರಿ ಮಾರ್ಕೆಟ್ ಹತ್ತಿರ ಇರುವ ಮೀನು. ಮಾಂಸದ ಮಾರ್ಕೆಟ್ ಸುಮಾರು ಎಪ್ಪತೈದು ವರ್ಷಗಳ ಹಳೆಯದಾಗಿದ್ದು, ಅದನ್ನು ನೂತನವಾಗಿ ನಿರ್ಮಿಸಿ ದಲ್ಲಿ ನಗರಸಭೆಗೆ ಆದಾಯ ಬರುವುದರ ಜೊತೆಗೆ ನಗರ ಸ್ವಚ್ಚವಾಗಲಿದೆ ಎಂಬ ಎಂ.ಮುಮ್ತಾಜ್ ರವರ ಪ್ರಶ್ನೆಗೆ ಸಭೆ ಪೂರ್ಣ ಒಪ್ಪಿಗೆ ನೀಡಲಾಯಿತು.ಆದರೆ ನಗರದಲ್ಲಿ ಎಷ್ಟು ಉದ್ಯಾನ ವನಗಳಿವೆ ಅವುಗಳಿಗೆ ಬೇಲಿ ಹಾಕುವ ಪ್ರಶ್ನೆಗೆ ಸರಿಯಾದ ಉತ್ತರ ದೊರಕದೆ ಹೋಯಿತು. ಆದರೆ ಇಡೀ ಸಭೆ ಅಧಿಕಾರಿ ಮೇಟಿ ಮೇಲೆ ಸಂಶಯ ವ್ಯಕ್ತವಾಗಿದ್ದು ಎಷ್ಟು ಪರಿಣಾಮ ಕಾರಿಯಾಗಿನಡೆದಿದೆ ಎಂದು ಮುಂದಿನ ದಿನಗಳಲ್ಲಿ ಕಂಡು ಬರಲಿದೆ. ಸಾಮಾನ್ಯ ಸಭೆಯಲ್ಲಿ ಅದ್ಯಕ್ಷೆ ಲತಾ ನೇತೃತ್ವದಲ್ಲಿ ನಡೆಯಿತು. ಸ್ಥಾಯಿಸಮಿತಿ ಅದ್ಯಕ್ಷ ಸಂತೋಷ ಹಾಗು ಅಯುಕ್ತ ಶಿವಕುಮಾರ್ ಉಪಸ್ಥಿರಿದ್ದರು.
ಅಯುಕ್ತರು ಕಚೇರಿಯಲ್ಲಿ ತಡರಾತ್ರಿ ಎರಡು ಗಂಟೆಯವರೆಗೂ ಕೆಲಸ ನಿರ್ವಹಿಸುತ್ತರುವುದು ಕಂಡು ಬಂದಿದ್ದು, ಇವರ ಸೇವೆಯನ್ನು ಸದಸ್ಯರು ಮುಕ್ತ ಕಂಠದಿಂದ ಶ್ಲಾಘಿಸಿದರು.
