WhatsApp Image 2024-02-15 at 6.18.16 PM

ನೀರು ಮಾರಾಟ ಮಾಡುವ ಪ್ರಸಂಗ ಬರಬಹುದು ಎಂದು ಸಂತ ಶ್ರೀ ಸೇವಾಲಾಲ್ ಭವಿಷ್ಯ ನುಡಿದಿದ್ದರು

ಕರುನಾಡ ಬೆಳಗು ಸುದ್ದಿ

ವಿಜಯನಗರ,15- 18ನೇ ಶತಮಾನದಲ್ಲೇ ಸಂತ ಸೇವಾಲಾಲ್ ಮಹಾರಾಜರು, ಒಬ್ಬ ಭಕ್ತ ನೀರು ಕೇಳಿದಾಗ” ನಿಂತ ಜಾಗದಲ್ಲೇ ನೀರು ಉಕ್ಕುವಂತೆ ಮಾಡಿದ್ದರು. ಮುಂದಿನ ದಿನಗಳಲ್ಲಿ ನೀರು ಮಾರಾಟ ಮಾಡುವ ಪ್ರಸಂಗ ಬರಬ ಹುದು ಎಂದು ಭವಿಷ್ಯ ನುಡಿದಿದ್ದರು. ಅವರ ಭವಿಷ್ಯದ ವಾಣಿಯಂತೆ ಇಂದು ಬಾಟಲಿನಲ್ಲಿ ನೀರು ಹಣಕ್ಕೆ ಮಾರಾಟವಾಗುತ್ತಿದೆ ಎಂದು ಬಂಜಾರ ಸಮಾಜದ ವಿಜಯನಗರ ಜಿಲ್ಲಾಧ್ಯಕ್ಷ ಆರ್.ರಾಮಜೀನಾಯ್ಕ್ ಮಾತನಾಡಿ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಸಂತ ಶ್ರೀ ಸೇವಾಲಾಲ್ ಮಹಾರಾಜರ 285 ನೇ ಜಯಂತಿಯನ್ನು ಆಚರಣೆ ಮಾಡಲಾಯಿತು. ಈ ವೇಳೆ ಮಾತನಾಡಿದ ಅವರು ಸಂತ ಸೇವಾಲಾಲ್ ಮಹಾರಾಜರು ಮದ್ಯಪಾನವನ್ನು ವಿರೋಧಿಸುವುದರ ಜೊತೆಗೆ ಅಹಿಂಸೆ ಮಾರ್ಗದ ಮೂಲಕ ಸಮಾಜವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಶ್ರಮಿಸಿದ್ದರು. ಸಂತ ಸೇವಾಲಾಲ್ ರ ವಾಣಿಯಂತೆ ” ಜಾನ್ ಜೋ, ಚಾಣ್ ಜೋ, ಮಾನ್ ಜೋ,” ಎಂದರೆ ನೀನು ಮೊದಲು ತಿಳಿದುಕೋ, ಅದನ್ನು ಅರ್ಥ ಮಾಡಿಕೋ ಮತ್ತು ನಿನ್ನ ಜೀವನದಲ್ಲಿ ಅದನ್ನು ಅಳವಡಿಸಿಕೋ ” ಎಂಬ ಮಾತನ್ನು ಹೇಳಿದ್ದರು. ಅವರ ಮಾತಿನಂತೆ ನಾವು ಅವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ ಎಂದರು.

ದೆಹಲಿಯಲ್ಲಿ ಹಳೇ ಸಂಸತ್ತು ಭವನ ಬಂಜಾರ ಸಮುದಾಯಕ್ಕೆ ಸೇರಿದ್ದು, ಈ ಹಿನ್ನೆಲೆಯಲ್ಲಿ ಸಮಾಜದ ಸ್ಮರಣಾರ್ಥವಾಗಿ ಲಕ್ಕೀಶಾ ಬಂಜಾರ ಅವರ ಪ್ರತಿಮೆಯನ್ನು ನೂತನ ಸಂಸತ್ತು ಭವನದ ಮುಂದೆ ಅನಾವರಣಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

ಎಲ್. ವಾಲ್ಯಾನಾಯ್ಕ್ ಬಂಜಾರ್ ಗಾಯಕರು. ಶ್ರೀ ಸೇವಾಲಾಲ್ ಮಹಾರಾಜರ ಹಿನ್ನೆಲೆ ಕುರಿತು ಪ್ರಾಸ್ತಾವಿಕ ನುಡಿಯಲ್ಲಿ ವಿವರಿಸಿದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಪರ ಜಿಲ್ಲಾಧಿಕಾರಿ ಅನುರಾಧ. ಜಿ ರವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸಿಇಒ ಸದಾಶಿವ ಪ್ರಭು, ಕಾರ್ಯಕ್ರಮದ ಉಸ್ತುವಾರಿಯನ್ನು ಜಿಲ್ಲಾ ಉಪ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿದ್ದಲಿಂಗೇಶ ರಂಗಣ್ಣವರ ವಹಿಸಿದ್ದರು.

ಈ ಸಂದರ್ಭದಲ್ಲಿ ಬಂಜಾರ ಸಮಾಜದ ಮುಖಂಡರಾದ ನಾರಾಯಣ್ ನಾಯಕ್ ವಕೀಲರು. ಭೀಮಾನಾಯಕ್, ಚಂದ್ರನಾಯಕ್ ತೇಜಸ್ವಿ ನಾಯಕ್, ನಾರಾಯಣ್ ನಾಯಕ್, ಸೋಮ್ಲಾನಾಯಕ್ ಲಾಲ್ಯನಾಯಕ್, ಪೂಜಾರಿ ಡಾಕ್ಯನಾಯಕ್. ರಾಮನಾಯಕ್ ಹನುಮನಾಯಕ್ ಸೋಮ್ಲಾ ನಾಯಕ್.. ಹೇಮ್ಲಾ ನಾಯಕ್ ಸೇರಿದಂತೆ ಜಿಲ್ಲಾಡಳಿತ ಕಚೇರಿಯ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!