ಪಂಚೇಂದ್ರಿಯೇಗಳ ನಿಗ್ರಹವೇ ರಂಜಾನ್ ಉಪವಾಸದ ತಿರುಳು : ಕೆ. ರಾಜಶೇಖರ ಹಿಟ್ನಾಳ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 1- ಪವಿತ್ರ ರಂಜಾನ್ ಮಾಸದ ಅಂಗವಾಗಿ ನಗರದ ವಿವಿಧ ಜಾಮಾ ಮಸೀದಿಗಳ ಇಪ್ತಿಯಾರ ಸೌರ್ಹಾದತೆಯಲ್ಲಿ ಪಾಲ್ಗೊಂಡು ಹಣ್ಣು ಹಂಪಲಗಳನ್ನು ನೀಡಿ ಧರ್ಮ ಗುರುಗಳ ಆರ್ಶಿವಚನ ಪಡೆದುಕೊಂಡು ಬಳಿಕ ಮಾತನಾಡಿದ ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ರವರು ಮುಸ್ಲಿಂ ಧರ್ಮದ ಪ್ರಕಾರ ರಂಜಾನ್ ಉಪವಾಸ ಆಚರಣೆಯು ಕಡ್ಡಾಯವಾಗಿ ಪಾಲನೆಯಾಗಿದ್ದು ಇದನ್ನು ಆಚರನೆ ಮಾಡುವ ವ್ಯಕ್ತಿಯು ಕೇವಲ ಉಪವಾಸದಿಂದ ಇರದೇ ತನ್ನ ಕಣ್ಣು ನಾಲಿಗೆ ಕಿವಿಯಿಂದ ಒಳ್ಳೆಯ ಮಾತುಗಳನ್ನು ಆಡುವುದು ಯಾವುದೇ ಕೆಟ್ಟ ಶಬ್ದಗಳನ್ನು ಕೇಳದೆ ಕಣ್ಣುಗಳನ್ನು ಕೆಟ್ಟ ದೃಶ್ಯಗಳಿಂದ ನಿಗ್ರಹಿಸುವುದೇ ರಂಜಾನ್ ಉಪವಾಸವಾಗಿದೆ.
ಬಡವರ ಉಪವಾಸದ ಅರಿವನ್ನು ಮೂಡಿಸುವುದು ಇದರ ಜೊತೆಗೆ ಸಮಾನತೆಯ ಸಾರುವ ಈ ಹಬ್ಬವು ಬಡವ ಬಲ್ಲಿಂದರನ್ನು ಅಪ್ಪಿಕೊಂಡು ಅವರಿಗೆ ಇಸ್ಲಾಂ ಧರ್ಮದ ಇನ್ನೊಂದು ಕಡ್ಡಾಯ ಪರಿಪಾಲನೆ “ಜಕ್ಕಾತ್” ರೂಪದಲ್ಲಿ ಅವರಿಗೆ ಹೊಸ ಬಟ್ಟೆ ಆಹಾರ ದಾನ್ಯ ಹಣವನ್ನು ನೀಡಿ ಶ್ರೀಮಂತರಂತೆಯೇ ಹಬ್ಬ ಆಚರಣೆ ಮಾಡುವಂತೆ ಬಡವರು ಹಾಗೂ ಶ್ರೀಮಂತರು ತಾರತಮ್ಯವಾಗದಂತೆ ಸೃಷ್ಟಿಕರ್ತನಿಗೆ ತೆಗೆ ಬಾಗುವುದೇ ಪವಿತ್ರ ರಂಜಾನ್ ಆಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಧರ್ಮ ಗುರುಗಳಾದ ಮುಪ್ತಿ ನಜೀರ ಅಹಮ್ಮದ್ ತಸ್ಕೀನ್ ಖಾದ್ರಿ, ಮಹಮ್ಮದ ನಾಸೀರ್ ಖಾದ್ರಿ, ಮಾಜಿ ಶಾಸಕರಾದ ಕೆ. ಬಸವರಾಜ ಹಿಟ್ನಾಳ, ಸಮಾಜದ ಮುಖಂಡರುಗಳಾದ ಬಾಷುಸಾಬ ಖತೀಪ್ ಅಜ್ಮದ್ ಪಟೇಲ್ ಕಾಟನ್ ಪಾಷ ಇಬ್ರಾಹಿಮ್ ಅಡ್ಡೆವಾಲೆ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ ಪಾಷ ಪಲ್ಟನ್ ಸದಸ್ಯರುಗಳಾದ ಅರುಣ ಅಪ್ಪುಶೆಟ್ಟಿ ಅಜಿಮ್ಮುದಿನ್ ಅತ್ತಾರ, ಅಂಜುಮನ್ ಸಂಸ್ಥೆ ಅಧ್ಯಕ್ಷ ಆಸೀಪ್ ಕರ್ಕಿಹಳ್ಳಿ, ಮಾನ್ವಿ ಪಾಷ ಹುಸೇನ ಪೀರಾ ಮುಜಾವರ, ಅಬ್ದುಲ್ ಅಜೀಜ್ ಸಲ್ಲಾವುದ್ದಿನ್ ಸಿದ್ದಿಕಿ, ಪಿರೋಜ್ ಭಕ್ತ್, ಖಾದ್ರಿ ಸಾಬ, ಸಜ್ಜಾ ಸಾಬ, ಜಾಪರ ಸಂಗಟಿ, ಎಮ್.ಡಿ ಜಹೀರ ಅಲಿ, ಯುವ ಮುಖಂಡ ಕೆ. ಸೋಮಶೇಖರ ಹಿಟ್ನಾಳ ಇನ್ನೂ ಅನೇಕ ಸಮಾಜದ ಮುಖಂಡರು ಉಪಸ್ಥಿತರಿದ್ದರು.
