WhatsApp Image 2024-02-17 at 9.07.55 AM

ಪ್ರಜಾ ವ್ಯತಿರೇಖ ಕಾಯ್ದೆಗಳು, ಕೂಡಲೇ ಹಿಂಪಡೆಯಲಿ : ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಮನವಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,17- ಕಳೆದ ವರ್ಷ 2023 ಕೇಂದ್ರ ಸರ್ಕಾರವು ರೈತರ ಕಾಯ್ದೆಗಳಾದ ವಿದ್ಯುತ್ ಕಾಯ್ದೆ ಅಡಿ, ಭೂಮಿ ಕಾಯ್ದೆ ಅಡಿ, ಎಪಿಎಂಸಿ ಕಾಯ್ದೆಯಡಿ ಖಾಸಗಿಕರಣವನ್ನು ಕೇಂದ್ರ ಸರ್ಕಾರವು ಈ ಕೂಡಲೇ ವಾಪಸ್ಸು ತೆಗೆದುಕೊಳ್ಳ ಬೇಕೆಂದು ಒತ್ತಾಯಿಸುತ್ತಾ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ವಿಭಾಗದ ನೇತೃತ್ವದಲ್ಲಿ ಪ್ರತಿಘಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರವನ್ನು ಕಳಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷರು, ಸಂಗನಕಲ್ಲು ಕೃಷ್ಣಪ್ಪ ಮಾತನಾಡುತ್ತಾ, ಕೇಂದ್ರ ರಾಜ್ಯ ಸರ್ಕಾರಗಳು ಇನ್ನೇ ಮುಂದಾದರೂ ಪ್ರಜಾ ವಿತರೇಕಿ ಕಾಯ್ದೆಗಳನ್ನು ಅನುಷ್ಠಾನಗೊಳಿಸುವುದನ್ನು, ಬಲವಂತವಾಗಿ ಜನರ ಮೇಲೆ ಕಾಯ್ದೆಗಳನ್ನು ಹೇರುವುದು ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಇನ್ನೂ ಕರ್ನಾಟಕದ ರೈತರನ್ನು ನವದೆಹಲಿಯಲ್ಲಿ ಪೊಲೀಸರು ಸುಮಾರು 70 ಮಂದಿ ರೈತನನ್ನು ಬಂಧಿಸಿರುವದು ಪ್ರಜಾ ಸ್ವಾಮಿಯ ಹೆದರಿಕೆ ವಿಧಾನ ಎಂದರು, ಕೂಡಲೇ ಸರ್ಕಾರವು ಅವರನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ರೈತ ಮುಖಂಡರಾದ, ಶಿವಶಂಕರ್, ಕೆ ಮಾರೆಣ್ಣ, ಬೇವಿನಹಳ್ಳಿ ಏರಿಸ್ವಾಮಿ, ಸಿಐಟಿಯು ಜಿಲ್ಲಾ ವಿಭಾಗದ ಅಧ್ಯಕ್ಷರು ಸತ್ಯಬಾಬು ಗಳ ಜೊತೆಗೆ ಹಲವಾರು ರೈತರು ಮತ್ತು ಕಾರ್ಮಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *

error: Content is protected !!