ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯಂದು ಸರ್ವಧರ್ಮ ಸಂಸತ್ತು : ಶಾಸಕ ಬಿ ಎಂ ನಾಗರಾಜ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,17- ಸರ್ಕಾರದ ಎಲ್ಲಾ ಕಚೇರಿಗಳಲ್ಲಿರುವ ಬಸವಣ್ಣ ಅವರ ಭಾವಚಿತ್ರದಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಮುದ್ರಿಸುವ ಜೊತೆಗೆ ಬಸವಾದಿ ಶರಣರ ಜೀವನ ಚರಿತ್ರೆ ಹಾಗೂ ವಚನ ಸಾಹಿತ್ಯ ಕುರಿತು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ವೈ ವಿದ್ಯಾಮಯ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಬಜೆಟ್ ನಲ್ಲಿ ಪ್ರಕಟಿಸಲಾಗಿದೆ ಎಂದು ಶಾಸಕ ಬಿಎಮ್ ನಾಗರಾಜ ಅವರು ಹೇಳಿದರು.
ನಗರದ ದೇವಲಾಪುರ ಕ್ರಾಸ್ ನಲ್ಲಿರುವ ವಿಶ್ವಗುರು ಬಸವಣ್ಣನವರ ಪ್ರತಿಮೆ ಭಾವಚಿತ್ರದ ಅನಾವರಣಕ್ಕೆ ಹೂ ಮಾಲೆ ಪುಷ್ಪ ಅರ್ಪಿಸಿ ಗೌರವಿಸಿ ಸ್ಮರಿಸಿ ನಮನ ಸಲ್ಲಿಸಿದರು ಕರ್ನಾಟಕ ಸರ್ಕಾರ ತಾಲೂಕ ಆಡಳಿತ ತಾಲೂಕ ಪಂಚಾಯತ್ ನಗರಸಭಾ ಸಹ ಭಾಗಿತ್ವದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಜಗಜ್ಯೋತಿ ಬಸವಣ್ಣನವರು ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಸರ್ವಜನ ಸಮಾಭಾವದ ತತ್ವಗಳ ಮೂಲಕ ಕಲ್ಯಾಣ ಸಮ ಸಮಾಜವನ್ನು ಕಟುವುದಕ್ಕೆ ಬೇಕಾದ ನೀತಿಯನ್ನು ಬೋಧಿಸಿರುವದು ನಮ್ಮ ಭಾರತ ದೇಶದ ಸಂವಿಧಾನದ ಆಶಯಗಳಿಗೆ ಅವರ ಚಿಂತನೆಗಳು ಸಾಂಸ್ಕೃತಿಕ ರಾಯಭಾರಿತ್ವಕ್ಕೆ ಸಮರ್ಥನೀಯವಾದ ನೆಲೆ ಒದಗಿಸಿರುವ ಮೇರೆಗೆ ರಾಜ್ಯ ಸರ್ಕಾರ ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ಬಸವ ಜಯಂತಿಯಂದು ಸರ್ವಧರ್ಮ ಸಂಸತ್ತು ಆಯೋಜನೆ ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ವಚನಗಳನ್ನು ವಿಶ್ವಕ್ಕೆ ಪರಿಚಯಿಸುವ ವಚನ ಸಂಗ್ರಹಾಲಯ ವಚನ ಮಂಟಪವನ್ನು ಗುಲ್ಬರ್ಗದಲ್ಲಿ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದ್ದಾರೆ.
ಎಲ್ಲಾ ಕಚೇರಿಗಳು ಅಂಗಡಿ ಮುಂಗಟುಗಳು ವಿವಿಧ ವಾಣಿಜ್ಯೋದ್ಯಮ ಸಂಸ್ಥೆಗಳ ನಾಮಫಲಕಗಳಲ್ಲಿ ಶೇಕಡ 60ರಷ್ಟು ಪ್ರಮಾಣದಷ್ಟು ಕನ್ನಡವನ್ನು ಕಡ್ಡಾಯವಾಗಿ ಅಳವಡಿಸಲು ಕನ್ನಡ ಭಾಷಾ ಸಮಗ್ರಾಭಿವೃದ್ಧಿ ಅಧಿನಿಯಮ ಜಾರಿಗೆ ತರಲಾಗುವುದು ಎಂದು ನುಡಿದರು ಮುಖ್ಯ ಭಾಷಣಕಾರರು ಉಪನ್ಯಾಸಕರಾದ ಶಿವಕುಮಾರ್ ಬಳಿಗಾರ್ ಅವರು ಬಸವಣ್ಣನವರ ಕುರಿತು ಅವರ ಜೀವನ ಚರಿತ್ರೆ ವಿವರಿಸಿ ಮಾತನಾಡಿದರು.
ತಹಸಿಲ್ದಾರ್ ಶಂಶೆ ಎ ಆಲಂ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ಎಸ್ ದಂಡಪ್ಪನವರ್, ಬಸವ ಬಳಗದ ಅಧ್ಯಕ್ಷ ಎನ್ಎಂ ಶಿವಪ್ರಕಾಶ್ ಅವರು ಮಾತನಾಡಿದರು.
ಬಸವ ಬಳಗದ ಬಸವ ಭೂಷಣ ಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನಗರಸಭಾ ಮಾಜಿ ಅಧ್ಯಕ್ಷರು ಎನ್ ಕರಿಬಸಪ್ಪ, ನಗರಸಭಾ ಪೌರಯುಕ್ತ ಎಚ್ಎನ್ ಗುರು ಪ್ರಸಾದ್ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರು, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ, ನಗರಸಭಾ ಸದಸ್ಯರಾದ ಎಚ್ ಗಣೇಶ್, ಬಿ ಎಂ ಅಪ್ಪಾಜಿ ನಾಯಕ್, ರಾಷ್ಟ್ರೀಯ ಸಾಕ್ಷರತಾ ಸಮಾಜ ಸುಧಾರಕ ಅಬ್ದುಲ್ ನಬಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಏ ಗಾದಿಲಿಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಜಿ ಪ್ರದೀಪ್ ಕುಮಾರ್, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಬಿ ರಾಜೇಶ್ವರಿ, ಒತೂರು ಪಂಪಾಪತಿ ಗೌಡ, ಮಲ್ಲಿಕಾರ್ಜುನ ಗೌಡ, ವಿರೂಪಾಕ್ಷಗೌಡ, ಪ್ರಭುಗೌಡ, ನಗರ ಸಭೆಯ ಅಮರೇಶಪ್ಪ, ರಾಜಾಭಕ್ಷಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಲಿಂಗರಾಜ ರೆಡ್ಡಿ, ಬಸವ ಬಳಗದ ಪದಾಧಿಕಾರಿಗಳು, ಮಹಿಳೆಯರು, ಸಾರ್ವಜನಿಕರು, ಲಿಂಗಾಯತ ಸಮುದಾಯದವರು ಇದ್ದರು.
