WhatsApp Image 2024-03-16 at 4.21.16 PM

ಪ್ರಧಾನಿ ನರೇಂದ್ರ ಮೋದಿ ಸಾಧನೆ ಮುಂದಿಟ್ಟು ಪ್ರಚಾರ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಬಸವರಾಜ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ,16- ತಾಲೂಕು ತೆಕ್ಕಲಕೋಟೆ ಮಾಜಿ ಶಾಸಕ ಎಂ ಎಸ್ ಸೋಮಲಿಂಗಪ್ಪ ಅವರ ನಿವಾಸದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಕೆ ಬಸವರಾಜ ಅವರು ಮುಖಂಡರ ಸಭೆ ನಡೆಸಿ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಾಧನೆ ಮುಂದಿಟ್ಟುಕೊಂಡು ಕ್ಷೇತ್ರದಲ್ಲಿ ಪ್ರಚಾರ ಮಾಡುವುದಾಗಿ ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಪಕ್ಷದ ಪ್ರತಿಯೊಬ್ಬರು ಶ್ರಮಿಸ ಬೇಕಿದೆ ಕೇಂದ್ರದ ಸಾಧನೆ ಬಗ್ಗೆ ಮನೆ ಮನೆಗೆ ತೆರಳಿ ಮಾಹಿತಿ ನೀಡಬೇಕು ಎಂದು ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಮಂಡಲ ಅಧ್ಯಕ್ಷ ಎಚ್ ಎಂ ಮಲ್ಲಿಕಾರ್ಜುನ ಸ್ವಾಮಿ ಕುಂಟನಾಳ್ ಮಾತನಾಡಿದರು.

ಪ್ರಧಾನ ಕಾರ್ಯದರ್ಶಿ ಕೆ. ಫಕೀರಯ್ಯ, ಪ್ರಮುಖರಾದ ಕೆ ಕೃಷ್ಣ, ಎಂ ಎಸ್ ಸಿದ್ದಪ್ಪ, ಎಂಎಸ್ ವೆಂಕಟಪ್ಪ ನಾಯಕ, ಡಿ ವೀರೇಶ, ಡಿ ನಡಿಕೆಪ್ಪ, ಮೊಹಮ್ಮದ್ ಅಲಿ, ಬಿಜಿ ಹುಲುಗಪ್ಪ, ಕಾಶಿಂ ವಲಿ, ಕುಮಾರಪ್ಪ, ಟಿ ಎಂ ಉಮೇಶ್, ಹೆಚ್ ರಾಮಮೂರ್ತಿ, ಜಿ ಚಿರಂಜೀವಿ ಇದ್ದರು.

ಮಾಜಿ ಶಾಸಕ ಸೋಮಲಿಂಗಪ್ಪ ಸರ್ವರನ್ನು ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!