ಮಂಗಳೂರಿನಲ್ಲಿ ವಿಷ್ಣುಸೇನಾ ಸಂಘಟನೆಯ 14ನೇ ವರ್ಷದ ವಾರ್ಷಿಕೋತ್ಸವ
ಕರುನಾಡ ಬೆಳಗು ಸುದ್ದಿ
ಕುಕನೂರು,16- ತಾಲೂಕಿನ ಮಂಗಳೂರು ಗ್ರಾಮದಲ್ಲಿ ವಿ.ಎಸ್.ಎಸ್ ವಿಷ್ಣುಸೇನಾ ಸಂಘಟನೆಯಿಂದ ಭಾನುವಾರ ಸಂಜೆ 5 ಗಂಟೆಗೆ 14ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಸಂಘಟನೇಯ ಜಿಲ್ಲಾಧ್ಯಕ್ಷ ಪ್ರಕಾಶ ಚಿನ್ನೂರು ತಿಳಿಸಿದರು.
ಮಂಗಳೂರು ಗ್ರಾಮದ ಆರಾಧ್ಯದೇವ ಶ್ರೀಮಂಗಳೇಶ್ವರ ಜಾತ್ರಾ ಮಹೋತ್ಸವ ಹಾಗೂ ವಿಷ್ಣು ಸೇನಾ ಸಂಘಟನೆಯ ೧೪ನೇ ವರ್ಷದ ವಾರ್ಷಿಕೊತ್ಸವ ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸಿಕೊಂಡು ಬರಲಾಗಿದೆ.
ಕಾರ್ಯಕ್ರಮದಲ್ಲಿ ಶ್ರೀಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಜಿಗಳು ಸಾನ್ನಿಧ್ಯವಹಿಸಲಿದ್ದಾರೆ. ಕಾರ್ಯಕ್ರಮವನ್ನು ಶಾಸಕರು, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹಾಗೂ ಹಾಲಪ್ಪ ಬಸಪ್ಪ ಆಚಾರ್ ಮಾಜಿ ಸಚಿವರು ಉದ್ಘಾಟಿಸಲಿದ್ದಾರೆ.
ನವೀನ ಗುಳಗಣ್ಣನವರ ಬಿಜೆಪಿ ಜಿಲ್ಲಾಧ್ಯಕ್ಷರು, ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಸವನಗೌಡ ತೊಂಡಿಹಾಳ ಹಾಗೂ ತಾ.ಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಜ್ಯೋತಿ ಬೆಳಗಿಸಲಿದ್ದಾರೆ. ಡಾ.ವಿಷ್ಣುವರ್ಧನ ಭಾವಚಿತ್ರಕ್ಕೆ ಆಸೀಫ್ ಡಾಲಯತ್ ಜಿಲ್ಲಾಧ್ಯಕ್ಷರು ಗುತ್ತಿಗೆದಾರರ ಸಂಘ ಕೊಪ್ಪಳ, ಶ್ರೀಧರ ಮೂರ್ತಿ(ವಿಷ್ಣುವರ್ಧನ್ ದತ್ತುಪುತ್ರ) ವಿ.ಎಸ್.ಎಸ್ ಟ್ರಸ್ಟ್ ಅಧ್ಯಕ್ಷರು ಬೆಂಗಳೂರು ಪುಷ್ಪನಮನ ಸಲ್ಲಿಸಲಿದ್ದಾರೆ.
ವಿಶೇಷ ಗೌರವ ಅತಿಥಿಗಳಾಗಿ ಡಾ: ಈಶ್ವರ ಸವಡಿ, ಪದ್ಮಶ್ರೀ ಡಾ.ಬಿ ಮಂಜಮ್ಮ ಜೋಗತಿ ಖ್ಯಾತ ನಿಕಟಪೂರ್ವ ಅಧ್ಯಕ್ಷರು ಜಾನಪದ ಅಕಾಡಮಿ. ಸ್ನೇಕ್ ಶ್ಯಾಮ ಖ್ಯಾತ ಉರಗ ತಜ್ಞರು ಮೈಸೂರು, ನೀತು ವನಜಾಕ್ಷಿ ಬಿಗ್‌ಬಾಸ್ ೧೦, ಮಾರುತೇಶ್ ಬಾಡಿ ಬಿಲ್ಡರ್, ಜಮುನಾ ಜೋಗತಿ ಸಮಾಜ ಸೇವಕರು, ನಕ್ಷತ್ರ ಮಂಗಳಮುಖಿ ಸಮಾಜ ಸೇವಕರು, ಪೂಜಾ ಮಂಗಳಮುಖಿ ಶಿಕ್ಷಕರು, ರಮ್ಯಾ ಮಂಗಳಮುಖಿ ವಿಶೇಷ ಸನ್ಮಾನ ಜರುಗಲಿದೆ.
ಗಂಗಾವತಿ ಪ್ರಾಣೇಶ, ನರಸಿಂಹ ಜೋಷಿ ಅವರಿಂದ ನಗೆ ಸಂಜೆ ಕಾರ್ಯಕ್ರಮ ಜರುಗಲಿದೆ. ಜೂನಿಯರ್ ಉಪೇಂದ್ರರಾಗಿ ಗವೀಶ್ ಕಾಣಸಿಕೊಳ್ಳಲಿದ್ದಾರೆ. ಸಂಘಟನೇಯ ರಾಜ್ಯಾಧ್ಯಕ್ಷ ರಾಜುಗೌಡ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಶ್ರೀನಿವಾಸ ಜೋಷಿ, ಗ್ರಾಮ ಘಟಕ ಪ್ರಧಾನಕಾರ್ಯದರ್ಶಿ ಶಿವರಾಜ ಹಲಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
