bf757585-ccd8-4d05-a098-dbc0d95b37bf

ಬೈರನಾಯಕನಹಳ್ಳಿ: ಸಂಪನ್ನಗೊಂಡ ಶ್ರೀ ಮಾರುತೇಶ್ವರ ಜಾತ್ರಾ

ಕರುನಾಡ ಬೆಳಗು ಸುದ್ದಿ

ಕುಕನೂರ19-ತಾಲೂಕಿನ ಬೈರನಾಯಕನಹಳ್ಳಿ ಗ್ರಾಮದ ಆರಾಧ್ಯ ದೈವ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ರವಿವಾರ ದಿವಸ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಿಗ್ಗೆ 4 ಗಂಟೆಗೆ ಶ್ರೀ ಮಾರುತೇಶ್ವರ ಉತ್ಸವ ಜರುಗಿತು.

ಬೆಳಿಗ್ಗೆ ಕಳಸಾರೋಹಣ, 5 ಗಂಟೆಗೆ ಶ್ರೀ ಮಾರುತೇಶ್ವರ ದೇವಸ್ಥಾನದಿಂದ ಡೊಳ್ಳು, ಭಜನೆ,ಕಳಸ, ಕನ್ನಡಿ, ಭಾಜಭಜಂತ್ರಿ ಸಕಲ ವಾದ್ಯಗಳಿಂದ ದೈವದವರ ಸಂಗಡ ಮೆರವಣಿಗೆಯಿಂದ ದೇವರ ಕೋಣೆಗೆ ತಲುಪಿತು, ಗಂಗೆ ಪೂಜೆ ಮತ್ತು 6:00 ಗಂಟೆಗೆ ಪಾಯಸ ಪವಾಡ ನಂತರ ಭಕ್ತಾದಿಗಳಿಂದ ಅಗ್ನಿಕುಂಡದಲ್ಲಿ ಅಗ್ನಿ ಪವಾಡ, 2 ಗಂಟೆ ಸುಮಾರಿಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮತ್ತು ಮುಂಗೈ ಆಟಗಳು ಜರುಗಿದವು.

ಸಾಯಂಕಾಲ 5:00 ಗಂಟೆಗೆ ನೆಲೆಜೇರಿ ಗ್ರಾಮದ ಭಕ್ತಾದಿಗಳಿಂದ ರಥದ ಹಗ್ಗ ಮತ್ತು ರುದ್ರಾಕ್ಷಿ ಸರವನ್ನು ತರಲಾಯಿತು ತದನಂತರ 6:00ಗೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ರಥವು ಭವ್ಯವಾಗಿ ಜರುಗಿ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *

error: Content is protected !!