ಸರ್ಕಾರಿ ಮುಸ್ಲಿಂ ಕ್ಷೇಮಾಭಿವೃದ್ಧಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಸಭೆ
ಕರುನಾಡ ಬೆಳಗು ಸುದ್ದಿ
ಕೂಡ್ಲಿಗಿ (ವಿಜಯನಗರ )ಫೆ.19 : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಹಾಗೂ ತಾಲೂಕ್ ಪದಾಧಿಕಾರಿಗಳ ಆಯ್ಕೆ ಹಾಗೂ ಸಂಘದ ಮುಂದಿನ ಕಾರ್ಯ ವೈಫಲ್ಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕೂಡ್ಲಿಗಿ ಶಾಸಕ ಡಾ. ಎನ್ ಟಿ ಶ್ರೀನಿವಾಸ್ ಅವರು ಸಭೆಗೆ ಹಾಜರಾಗಿ ನಿಮ್ಮ ಸಂಘದ ಜೊತೆಗೆ ನಾವಿದ್ದೀವಿ, ಮುಸ್ಲಿಂ ಸಮುದಾಯದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಒದಗಿಸಲು ಮುಂದಾದರೆ ಮಾತ್ರ ಸಮುದಾಯದ ಆರ್ಥಿಕ, ಸಾಮಾಜಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕ್ ಅಧ್ಯಕ್ಷರಾದ ದಾದಾ ಕಲಂದರ್ ಮಾತನಾಡಿದರು ಸಂಘವು ವಿಶ್ವಶಾಂತಿಯ ಹಾದಿಯಲ್ಲಿ ಮುಸ್ಲಿಂ ಸಮುದಾಯ ಮುಂದೆ ಬರಬೇಕಾದರೆ ಶಿಕ್ಷಣ ಬಹು ಮುಖ್ಯವಾಗಿದ್ದು, ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ಪೋಷಕರಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು ಶರೀಫ್ ಮಕರಬ್ಬಿ, ಉಪಾಧ್ಯಕ್ಷರಾದ ಜಿಲ್ಲಾನ್ ಬಾಷ್, ಖಜಾಂಚಿ ಅಲ್ಲಾಬಕ್ಷು ಕೂಡ್ಲಿಗಿ, ತಾಲೂಕು ಕಾರ್ಯದರ್ಶಿ ಸನಾವುಲ್ಲಾ, ಹಾಜಿ ಎಸ ಎಂ ಹೈದರ್, ತಾಲೂಕು ಖಜಾಂಚಿ ಯೋಗಿ ಕಾರ್ಯಕ್ರಮ ವಹಿಸಿದರು, ಮುನೀರ್ ಹೆಚ್ ಬಿ ಹಳ್ಳಿ, ಉಸ್ಮೆನ್ ತಾಲೂಕ ಅಧ್ಯಕ್ಷ ಹರಪನಹಳ್ಳಿ, ಜಿಲ್ಲಾ ಉಪಾಧ್ಯಕ್ಷರು ಪಾರೀ ದಾದಾದಿಬಿ, ಅದೂನುಲ್ಲಾ ತಾ.ಪಂ ಸಿಬ್ಬಂದಿ, ಖಾಸಿಂ ಅಲಿ ಎಚ್ ಬಿ ಹಳ್ಳಿ ಮಾಜಿ ಅಧ್ಯಕ್ಷರು, ಸಿ ಅಂಜಿನಪ್ಪ ಸೇರಿದಂತೆ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಹಾಗೂ ಎಲ್ಲಾ ತಾಲೂಕಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
