
ಭಾಗ್ಯನಗರ ಬಿಜೆಪಿಯಿಂದ ಸಂಭ್ರಮ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,೧೫- ಬಳಿಯ ಭಾಗ್ಯನಗರದ ಭಾಜಪ ಘಟಕದ ವತಿಯಿಂದ ನೂತನ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರವರು ಪ್ರಮಾಣ ವಚನ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಿಸಿದರು.
ಬುಧವಾರ ರಾತ್ರಿ ಭಾಗ್ಯನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಪಟಾಕಿ ಸಿಡಿಸಿ ,ಸಿಹಿ ಹಂಚಿ ಸಂತಸ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ಪಾನಗಂಟಿ. ಸುಬ್ಬಯ್ಯ ಸಲ್ಲ. ಡಾ. ಕೊಟ್ರೇಶ್ ಶೇಡ್ಮಿ, ರುಕಮಣ್ಣ ಶ್ಯಾವಿ, ನೀಲಕಂಠಪ್ಪ ಮೈಲಿ ಕೃಷ್ಣ ಮ್ಯಾಗಳಮನಿ ಸುರೇಶ್ ದರ್ಗದಕಟ್ಟಿ ವಿಜಯ ಪಾಟೀಲ್ ಚಂದ್ರಶೇಖರ್ ಅರಕೇರಿ ವಾಸುದೇವ್ ಮೇಘರಾಜ್ ಕೊಟ್ರೇಶ್ ಕವಲೂರು, ಮುಕುಂದ ಮನಗೋಳ ಚಂದ್ರು ಉಂಕಿ ಸುರೇಶ್ ಡಾಣೆ ಕುಮಾರಿ ಸರೋಜಾ ಬಾಕಳೆ ಪರಶುರಾಮ್ ನಾಯಕ್ ಸುರೇಶ್ ಡೊನಿ ಇನ್ನು ಮುಂತಾದವರು ಇದ್ದರು