ಭೀಮನೇನಿ ಕುಟುಂಬದವರಿಂದ ನೂತನ ಬುಡಾ ಅಧ್ಯಕ್ಷರಿಗೆ ಸನ್ಮಾನ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,9- ಇತ್ತೀಚಿಗೆ ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಜೆ.ಎಸ್.ಆಂಜನೇಯಲು ರವರಿಗೆ ಭೀಮನೇನಿ ಕುಟುಂಬದವರು ಹಾಗೂ ಹವಂಬಾವಿ ಸ್ನೇಹಿತರರು ಗೌರವ ಸನ್ಮಾನ ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಹಿರಿಯರಾದ ಭೀಮನೇನಿ ರಂಗಯ್ಯ ಮಾತನಾಡಿ ಅಂಜನೇಯಲು ಈ ಹಿಂದೆ ಬುಡಾ ಅಧ್ಯಕ್ಷರಾಗಿ ನಗರದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಗಳು ಇಂದಿಗೂ ನಾವು ನೋಡಬಹುದಾಗಿದೆ.ಅಂದು ನಗರದಲ್ಲಿ ಹೆಚ್ಚಿನ ಪಾರ್ಕ್ ಗಳಿಗೆ ಅದ್ಯತೆಯ ಜೊತೆ ರಸ್ತೆ ಬದಿ ಯಲ್ಲಿ ಸಸಿ ನಡೆಲು ಮುಂದಾಗಿದ್ದರು.ನಗರದ ಪಾರ್ಕಗಳಲ್ಲಿ ನಿಯಮಿತ ವ್ಯಾಯಾಮದ ಸಲಕರಣೆಗಳನ್ನು ಅಳವಡಿಸಿದ ಕೀರ್ತಿ ಸಹ ಇವರದಾಗಿದೆ ಎಂದರು.
ಸನ್ನಾನ ಸ್ವೀಕರಿಸಿ ಮಾತನಾಡಿದ ಜೆ.ಎಸ್. ಅಂಜನೇಯಲು ಪಕ್ಷ ಮೊತ್ತಮ್ಮೆ ನನಗೆ ನಗರಾಭಿವೃದ್ಧಿ ಮಾಡಲು ಅದೇಶ ನೀಡಿದೆ.ನಾನು ನನಗೆ ಕೊಟ್ಟ ಜವಾಬ್ಧಾರಿಯನ್ನು ಪಕ್ಷದ ಹೆಸರು ಉಳಿಸುವಂತಹ ಕಾರ್ಯಕ್ದಮ ಹಮ್ಮಿಕೊಳ್ಳುವುದಾಗಿ ತಿಳಿಸಿದಲ್ಲದೆ. ಭೀಮನೇನಿ ಕುಟುಂಬ ನನಗೆ ಬಾಲ್ಯದಿಂದಲ್ಲೂ ಆತ್ಮೀಯರಾಗಿದ್ದು ಅಂದಿನಿಂದ ಅವರ ರಾಜಕೀಯ ನಡೆಗಳನ್ನು ಕಲಿತಿರುವೆ ಎಂದರು.
ಸನ್ಮಾನ ಸಮಾರಂಭದಲ್ಲಿ ಮಹೇಂದ್ರ, ರಾಮಯ್ಯ, ಡಿ.ಚಿನ್ನಪ್ಪಯ್ಯ, ಹನುಮಪ್ಪ ಮಾಗಂಟಿ, ಶ್ರೀನಿವಾಸ ಕೋನಂಕಿ, ಶ್ರೀನಿವಾಸ ಸೋಮಪಲ್ಲಿ, ರಮೇಶ್ ಭೀಮನೇನಿ, ಪ್ರಸಾದ್, ಭಾಸ್ಕರ್, ಕಿಷ್ಟ್ರಯ್ಯ, ಅಲ್ಲಾಭಕ್ಷ, ಕೇಕ್ ವೆಂಕಟೇಶ್ವರ ರಾವ್, ಕೆ.ರಾಜಶೇಖರ, ದೆವೇಂದ್ರ ಸ್ವಾಮಿ ಇನ್ನಿತರ ಭಾಗವಹಿಸಿದ್ದರು.
