IMG-20231031-WA0018(1)

            ಕೊಪ್ಪಳ ಜಿಲ್ಲೆಯ  ಮಂಗಳೂರ 

ಬಹುದಿನಗಳ ಬೇಡಿಕೆ ರಸ್ತೆ ಅಗಲಿ ಕರಣಕ್ಕೆ ಚಾಲನೆ

ಕುಕನೂರು 31- ತಾಲೂಕಿನ ಮಂಗಳೂರು ಗ್ರಾಮದಲ್ಲಿ ರಸ್ತೆ ಅಗಲೀಕರಣದ ಬಹುದಿನಗಳ ಬೇಡಿಕೆಯಾಗಿದ್ದ ಅಂಬೇಡ್ಕರ್ ವೃತ್ತದಿಂದ ಗ್ರಾಮದ ಹಳೆಯ ಬಸ್ ನಿಲ್ದಾಣದವರೆಗಿನ ರಸ್ತೆ ಅಗಲೀಕರಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.
        ಗ್ರಾಮದಲ್ಲಿ ಪ್ರಮುಖ ರಸ್ತೆಯಾದ ಮಾರುಕಟ್ಟೆ ರಸ್ತೆಯನ್ನು ಅಗಲೀಕರಿಸಿ ಎಂದು ಬಹುದಿನಗಳ ಬೇಡಿಕೆಯನ್ನು ಗ್ರಾಮಸ್ಥರು, ಕನ್ನಡಪರ ಸಂಘಟನೆ, ದಲಿತ ಸಂಘರ್ಷ ಸಮಿತಿಗಳು ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದು ಸೋಮವಾರ ಬೇಡಿಕೆಯನ್ನು ತಿಳಿಸುವ ಉದ್ದೇಶದಿಂದ ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಲಾಯಿತು.
        ಮಂಗಳೂರು ಗ್ರಾಮದ ಪ್ರಮುಖರಸ್ತೆಯಾದ ಮಾರುಕಟ್ಟೆ ರಸ್ತೆ ತುಂಬಾ ಕಿರಿದಾಗಿದ್ದು ಎರಡು ವಾಹನಗಳು ಸಂಚರಿಸಲು ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ತುರ್ತು ಪರಿಸ್ಥಿತಿ ಗಳಂತಹ ಸಂದರ್ಭದಲ್ಲಿ ಗರ್ಭಿಣಿ ಸ್ತ್ರೀಯರು, ಗಾಯಾಳುಗಳನ್ನು ಈ ರಸ್ತೆಯಲ್ಲಿ ಪ್ರಯಾಣಿಸುವುದು ಆಯಾಸ ಪಡುವಂತ ಸಂದರ್ಭ ನಿರ್ಮಿಸುತ್ತಿದ್ದು ಪ್ರಯಾಣಕರು ಬೇಸತ್ತು ಹೋಗುತ್ತಿದ್ದರು.

     ಈಗ ರಸ್ತೆ ಅಗಲೀಕರಣ ಮಾಡುತ್ತಿರುವುದು ಗ್ರಾಮದ ಬಹುತೇಕ ಜನರಲ್ಲಿ ಮಂದಹಾಸ ಮೂಡುತ್ತಿದ್ದು ಮನೆಯ ಕಟಿಂಗ್ ಆಗುತ್ತಿರುವ ಗ್ರಾಮಸ್ಥರು ಮಾತ್ರ ವಿರೋಧ ವ್ಯಕ್ತಪಡಿಸುತ್ತಾರೆ. ಈ ರಸ್ತೆಯಲ್ಲಿರುವ 95ಕ್ಕೂ ಹೆಚ್ಚು ಮನೆಗಳು ರಸ್ತೆ ಅಗಲಿ ಕರಣದಿಂದ ಮನೆಯ ಕೆಳಭಾಗ ಕಟ್ ಆಗುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ 16 ಮನೆಯ ಮಾಲೀಕರು ಕೋರ್ಟ್ ಮೊರೆ ಹೋಗಿ ತಡೆ ಯಾಜ್ಞ್ನೆ ತಂದಿರುತ್ತಾರೆ ಉಳಿದ ಮನೆಗಳ ಕಡಿತಗೊಳಿಸಲು ಸ್ಥಳೀಯ ಆಡಳಿತವಾದ ಗ್ರಾಮ ಪಂಚಾಯತಿ ಕಾರ್ಯಾಲಯದ ಅಧ್ಯಕ್ಷರು ಹಾಗೂ ಗ್ರಾಮ ಅಭಿವೃದ್ಧಿ ಅಧಿಕಾರಿಯ ತಂಡ ಮುಂದಾದಾಗ ಕೆಲ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು ಸರಕಾರದ ಆದೇಶದೊಂದಿಗೆ ಪೊಲೀಸ್ ಇಲಾಖೆಯ ಸಹಾಯ ಪಡೆದು ರಸ್ತೆ ಅಗಲೀಕರಣ ಮಾಡಿದ ಸನ್ನಿವೇಶ ಮಂಗಳೂರು ಗ್ರಾಮದಲ್ಲಿ ನಿರ್ಮಾಣವಾಯಿತು.
          ಬಹು ದಿನಗಳಿಂದ ಸರ್ಕಾರವನ್ನು ಒತ್ತಾಯಿಸುತ್ತಿದ್ದ ಕನ್ನಡಪರ ಸಂಘಟನೆಯ ಹೋರಾಟಗಾರ ಮರಿಸ್ವಾಮಿ ಪೂಜಾರ ವರದಿಗಾರರೊಂದಿಗೆ ಮಾತನಾಡುತ್ತಾ ಗ್ರಾಮಸ್ಥರ ಬಹು ದಿನಗಳ ಬೇಡಿಕೆ ಸದ್ಯ ಈಡೇರುತ್ತಿದ್ದು ಸಂತಸವನ್ನು ತಂದಿದೆ ಗ್ರಾಮವನ್ನು ದಾಟಿಕೊಂಡು ಹೋಗಲು ಕೇವಲ ಒಂದೇ ರಸ್ತೆ ಇದ್ದು ಅದು ಕೂಡ ಈ ಕಟ್ಟಿನಿಂದ ಕೂಡಿತ್ತು.

      ರಸ್ತೆ ಅಗಲೀಕರಣದಿಂದ ನಿರಾಯಸವಾದ ಪ್ರಯಾಣವನ್ನು ಮಾಡಬಹುದಾಗಿತ್ತು ಗ್ರಾಮದ 80% ಹೆಚ್ಚು ಜನ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!