WhatsApp Image 2024-06-29 at 4.44.01 PM

ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಣೆ ವಿರೋಧಿ ದಿನ ಆಚರಣೆ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 29- ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಜೂನ್ 26 2024 ರ ಜಾಗೃತಿ ಕಾರ್ಯಕ್ರಮ ವನ್ನು ಸರಕಾರಿ ಪದವಿಪೂರ್ವ ಕಾಲೇಜು ತಾಲೂಕು ಕ್ರೀಡಾಂಗಣ ಸಿರುಗುಪ್ಪದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ ಬಿ ಈರಣ್ಣ ರವರು ಮಾತನಾಡಿ ಯುವಕರು ವಿವಿಧ ಕಾರಣಗಳಿಂದ ಮಾದಕ ದ್ರವ್ಯದ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ.

ಮಾದಕ ದ್ರವ್ಯಗಳ ಪಿಡುಗು ಸಮಾಜದಲ್ಲಿ ಆಳವಾಗಿ ಬೇರೂರಿದೆ. ಇದರಿಂದಾಗಿ ಬಹುತೇಕ ಇಡೀ ಪೀಳಿಗೆಯು ವಿನಾಶದತ್ತ ಸಾಗುತ್ತಿದೆ. ಮಾದಕ ವ್ಯಸನ ಮತ್ತು ದುರುಪಯೋಗದ ಹಿಡಿತದಿಂದ ಜನರನ್ನು ರಕ್ಷಿಸಲು, ಮಾದಕ ವ್ಯಸನ ಮತ್ತು ಅಕ್ರಮ ಸಾಗಣೆ ವಿರುದ್ಧ ಅರಿವು ಮೂಡಿಸುವ ದೃಷ್ಟಿಯಿಂದ ಪ್ರತಿ ವರ್ಷ ಜೂನ್​ 26 ರಂದು ಅಂತಾರಾಷ್ಟ್ರೀಯ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ.

ಮಾದಕ ವಸ್ತುಗಳ ಸೇವನೆ ಯುವ ಜನತೆಯ ಆರೋಗ್ಯ ಮತ್ತು ವೃತ್ತಿ ಜೀವನದ ಮೇಲೆ ಜೊತೆಗೆ ಸಮಾಜದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಸಾಕ್ಷ್ಯಗಳು ಸ್ಪಷ್ಟವಾಗಿದೆ ತಡೆಗಟ್ಟುವಲ್ಲಿ ಹೂಡಿಕೆ ಮಾಡಿ ಎಂಬ ಘೋಷವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಸೆಪ್ಟೆಂಬರ್​7 1987ರಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು. ನಿಷೇಧಿತ ಮಾದಕವಸ್ತು ಬಳಕೆ ಮತ್ತು ಕಳ್ಳಸಾಗಣೆಯನ್ನು ತಡೆಗಟ್ಟಲು ಪ್ರತಿ ವರ್ಷ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧ ಅಂತಾರರಾಷ್ಟ್ರೀಯ ದಿನವನ್ನು ಆಚರಿಸಲು ನಿರ್ಣಯವು ಪ್ರಸ್ತಾಪಿಸಿದೆ ಎಂದು ತಿಳಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ರವರು ಮಾದಕ ವಸ್ತುಗಳ ಸೇವನೆಯು ದೈಹಿಕವಾಗಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಹಾಳುಮಾಡುತ್ತದೆ.

ಮಾದಕ ದ್ರವ್ಯಗಳು ಮೆದುಳು, ನರಮಂಡಲದ ಮಲೂ ಪರಿಣಾಮ ಬೀರುತ್ತದೆ. ಹೃದಯ ಸಂಬಂಧಿ ಕಾಯಿಲೆ ಶ್ವಾಸಕೋಶಗಳ ಕ್ಯಾನ್ಸರ್ ಸಂತಾನೋತ್ಪತ್ತಿ ಕ್ಷೀಣತೆ ಲೈಂಗಿಕ ದೌರ್ಬಲ್ಯ ಮಾದಕ ವ್ಯಸನವು ಹಸಿವು ಮತ್ತು ತೂಕದ ತೀವ್ರ ನಷ್ಟ, ಮಲಬದ್ಧತೆ, ಹೆಚ್ಚಿದ ಆತಂಕ ಮತ್ತು ಕಿರಿಕಿರಿ, ನಿದ್ರಾಹೀನತೆ ಮತ್ತು ಬೌದ್ಧಿಕ ಕಾರ್ಯಚಟುವಟಿಕೆಗಳ ಕ್ರಮೇಣ ದುರ್ಬಲತೆಗೆ ಕಾರಣವಾಗಬಹುದು. ಎಂದು ಆರೋಗ್ಯ ಶಿಕ್ಷಣ ನೀಡಿದರು.

ಮಲ್ಲೇಶಪ್ಪ ರವರು ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿ ದರು. ಪ್ರವೀಣ್ ಐಸಿಟಿಸಿ ಪ್ರಯೋಗಶಾಲ ತಂತ್ರಜ್ಞರು ಹೆಚ್ಐವಿ ಏಡ್ಸ್ ಕುರಿತಂತೆ ಮಾಹಿತಿ ನೀಡಿದರು.

ಚಂದ್ರಶೇಖರ್ ರವರು ಮಾದಕ ವಸ್ತು ಹಾನಿ ಕುರಿತಂತೆ ಕವನ ವಾಚನ ಮಾಡಿದರು.

ಪ್ರಾಂಶುಪಾಲರು ದುಶ್ಚಟಗಳಿಂದ ದೂರವಿದ್ದು ಓದಿನ ಕಡೆ ಗಮನ ನೀಡಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಭಾರತದ ಆಸ್ತಿ ಯಾಗಬೇಕು ಎಂದರು ತಾಲೂಕ ಕಚೇರಿಯ ಉಪ ತಹಸಿಲ್ದಾರ್ ಸಿದ್ದಾರ್ಥ ಕಾರಂಜಿ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ರಾಷ್ಟ್ರೀಯ ಸಾಕ್ಷರತಾ ಸದಸ್ಯ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಮತ್ತಿತರರು ಇದ್ದರು.

ಡಾಕ್ಟರ್ ರಾಮಾಂಜನೇಯ ರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು ನಂತರ ಜಾಗೃತಿ ಜಾಥಾ ನಡೆಯಿತು.

Leave a Reply

Your email address will not be published. Required fields are marked *

error: Content is protected !!