WhatsApp Image 2024-03-09 at 4.47.46 PM

ಮಾದರ ಶ್ರೀಗಳು ಬಗ್ಗೆ ಆರೋಪ ಸರಿಯಲ್ಲ : ಎಚ್.ಹನುಮೇಶ್ ಜೋಳದ ರಾಶಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ,9- ಚಿತ್ರದುರ್ಗದ ಗುರುಪೀಠ ಮಾದರ ಚೆನ್ನಯ್ಯ ಸ್ವಾಮೀಜಿ ಬಗ್ಗೆ ಸಿ. ಕೆ. ಮಹೇಶ್ ಆರೋಪ ಮಾಡಿರುವುದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ಶ್ರೀ ಮಾದರ ಚೆನ್ನಯ್ಯ ಸಂಘದ ರಾಜ್ಯ ಅಧ್ಯಕ್ಷರು ಡಾಕ್ಟರ್ .ಹೆಚ್.ಹನುಮೇಶ ಜೋಳದರಾಶಿ ಖಂಡಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀಗಳು ಮಾದಿಗ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗಿಯ ಯುವತರಿಗೆ ಮತ್ತು ಸಮಾಜದ ಅನೇಕ ಜನರು ಸಮಸ್ಯೆಗಳನ್ನು ಸ್ವಾಮೀಜಿಗಳು ಸ್ಪಂದಿಸಿ ಬಗೆಹರಿಸುವ ಅಲ್ಲದೆ ಸಮಾಜದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಎಬಿಸಿಡಿ ವರ್ಗಿಕರಣಕ್ಕಾಗಿ ರಾಷ್ಟ್ರೀಯ ಮಾದಿಗ ದಂಡೋರ ಅಧ್ಯಕ್ಷರು ಮಂದಕೃಷ್ಣ ಮಾದಿಗ ಹತ್ತಿರ ಜೊತೆಗೂಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕರೆಸಿ ಸಭೆ ಮಾಡಿ ವರ್ಗೀಕರಣಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಅಂತ್ಯ ಮಾಡುವಂತೆ ಸಭೆಯಲ್ಲಿ ಬೇಡಿಕೆ ಶ್ರೀಗಳು ಇಟ್ಟಿದ್ದಾರೆ. ಇಚ್ಚೆತೆಗೆ ಮಾದಿಗ ಸಂಸ್ಕೃತ ಸಂಘದ ರಾಜ್ಯಾಧ್ಯಕ್ಷರಾದ ಸಿ ಕೆ ಮಹೇಶ್ ಸ್ವಾಮೀಜಿಯವರನ್ನು ಮನುವಾದ ಸಂಸ್ಕೃತಿಯನ್ನು ಹೊಂದಿದ್ದಾರೆ ಎಂದು ಆರೋಪ ಮಾಡಿದ್ದಾರೆ.  ಶ್ರೀಗಳ ಬಗ್ಗೆ ಈ ರೀತಿ ಆರೋಪ ಸರಿಯಲ್ಲ ಎಂದು ಕರ್ನಾಟಕ ರಾಜ್ಯ ಶ್ರೀ ಮಾದರ ಚೆನ್ನಯ್ಯ ಸಂಘ ತೀವ್ರ ಖಂಡನೆಯ ಮಾಡುತ್ತಿದ್ದವೇ ಎಂದರು.

ಬಿಜೆಪಿ ಪಕ್ಷದಲ್ಲಿರುವ ನಮ್ಮ ಸಮಾಜದ ನಾಯಕರೆಲ್ಲರೂ ಹಾಗೂ ಸ್ವಾಮೀಜಿ ಕೂಡ ಮನವಾದಿಗಳು ಅಲ್ಲ ಪ್ರಜಾಪ್ರಭುತ್ವ ಸೇವೆಯಲ್ಲಿ ಎಲ್ಲಾ ಪಕ್ಷಗಳು ಅವಶ್ಯಕತೆ ಬೇಕಾಗುತ್ತದೆ ಆದರಿಂದ ಎಲ್ಲಾ ಪಕ್ಷದವರೊಂದಿಗೆ ಸಂಪರ್ಕ ಬೆಳೆಸುವದು ಹಾಗೂ ಅಧಿಕಾರ ಪಡೆಯುವುದು ಸರ್ವಸಾಮಾನ್ಯ ಆದರೆ ಬಿಜೆಪಿಯಲ್ಲಿ ಇರುವವರೆಲ್ಲರೂ ನಮ್ಮ ಸಮುದಾಯದವರು ಮನೋವಾದಿಗಳೆಂದು ಅರ್ಥ ಮಾಡಿರಬಹುದು ಹಾಗೂ ಶ್ರೀಗಳು ಕೂಡ ಮನೋವಾದಿಗಳೆಂದು ಆರೋಪಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ ಸ್ವಾಮೀಜಿಗಳು ಸರ್ವ ಜನಾಂಗದ ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದಾರೆ.

ಶ್ರೀ ಮಾದರ ಚೆನ್ನಯ್ಯ ಸ್ವಾಮಿಜಿಗಳು ದೇಶದಲ್ಲಿ ಮಾದಿಗರ ಮಠ ಕರ್ನಾಟಕದಲ್ಲಿ ಇದೆ ಎಂದು ಗುರುತಿಸುವಂತೆ ಮಾಡುತ್ತಿದ್ದಾರೆ ನಮ್ಮ ಸಮುದಾಯವೂ ಕೂಡ ಸಂತೋಷದಿಂದ ಮಾದರ ಚೆನ್ನಯ್ಯ ಗುರುಪೀಠ ಚಿತ್ರದುರ್ಗದಲ್ಲಿ ಇದೆ ಎಂದು ಹೇಳಿಕೊಳ್ಳುವುದಕ್ಕೆ ಸಾಧ್ಯವಾಗಿದೆ ಸಿ ಕೆ ಮಹೇಶ್ ಎಂಬ ವ್ಯಕ್ತಿಗಳು ಸ್ವಾಮೀಜಿಯವರನ್ನು ಕಾಲು ಎಳೆಯುವ ಕೆಲಸ ಮಾಡಬಾರದೆಂದು ಮಾತನಾಡಿದ್ದಾರೆ ಈ ಮೂಲಕ ಪತ್ರಿಕಾಗೋಷ್ಠಿ ಮುಖಾಂತರ ಸಂಘ ಖಂಡನೆ ಮಾಡುತ್ತಾ ಎಚ್ಚರಿಸುತ್ತಿದ್ದೇವೆ ಎಂದು ಮಾತನಾಡಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಚಂದ್ರಕಾಂತ್, ಕುಮಾರಸ್ವಾಮಿ, ಚಂದ್ರಶೇಖರ್, ನಾಗಪ್ಪ ಬಿ.ಇ, ಉಜ್ಜಪ್ಪ ಮುಂತಾದವರು ಪಾಲ್ಗೊಂಡರು.

Leave a Reply

Your email address will not be published. Required fields are marked *

error: Content is protected !!