ಮಾನವೀಯತೆ ಮೆರೆದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಮ್ಮಣ್ಣ ನಾಯಕ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 22- ನಗರದ ಬಳ್ಳಾರಿ ಹೆದ್ದಾರಿ ರಸ್ತೆಯಲ್ಲಿ ರಸ್ತೆ ಹದಗೆಟ್ಟಿದ್ದು ಆಳವಾದ ಗುಂಡಿಗಳಿದ್ದು ಸವಾರರಿಗೆ ಮತ್ತು ಪಾದಚಾರಿಗಳಿಗೂ ಅನೇಕ ತೊಂದರೆಗಳು ಆಗುತ್ತಿತ್ತು. ಅಲ್ಲದೆ ಅಪಘಾತಗಳಿಗೆ ಮುನ್ಸೂಚನೆ ನೀಡುತ್ತಿದ್ದ ಈ ರಸ್ತೆ ತಗ್ಗು ಗುಂಡಿಗಳನ್ನು ಪೊಲೀಸರು ತಾವೇ ಮುಂದೆ ನಿಂತು ಗುಂಡಿಗಳನ್ನು ಮುಚ್ಚಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ
ಕಳೆದ ಅನೇಕ ವರ್ಷಗಳಿಂದ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾರ್ಯವು ನೆನೆಗುದಿಗೆ ಬಿದ್ದಿದ್ದು ಕಾಮಗಾರಿ ಕುಂಟುತ್ತಾ ಸಾಗಿದೆ ಗುತ್ತಿಗೆದಾರರಿಗೆ ಶಾಸಕರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿಗಳು ಹೇಳಿದರು ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ ಮಳೆಗಾಲವಾಗಿದ್ದು ರಸ್ತೆ ಗುಂಡಿಗಳು ಹೆಚ್ಚಿಗೆ ಆಗುತ್ತಿದ್ದು ಇದರಿಂದ ಅನೇಕ ತೊಂದರೆಗಳು ಆಗುತ್ತಿರುವುದನ್ನ ಕಂಡು, ಸಿರುಗುಪ್ಪ ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ತಿಮ್ಮಣ್ಣ ನಾಯಕ್ ತಾವೇ ಮುಂದೆ ನಿಂತು ಜೆಸಿಬಿ ಯಂತ್ರದ ಸಹಾಯದಿಂದ ರಸ್ತೆ ಗುಂಡಿಗಳನ್ನು ಮುಚ್ಚಿಸಿದ್ದಾರೆ ಇವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
