WhatsApp Image 2024-06-22 at 5.35.25 PM

ಡಿಡಿಪಿಐ ಅಮಾನತ್ತು, ಹೆಚ್ಚುವರಿ ಪ್ರಭಾರ : ಶ್ರೀಮತಿ ಹನುಮಕ್ಕ

ಕರುನಾಡ ಬೆಳಗು ಸುದ್ದಿ

ವಿಜಯನಗರ, 22- ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆನಡೆಸಿದ್ದು ಸಭೆಯಲ್ಲಿ 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ ಯಲ್ಲಿ 10ನೇ ಸ್ಥಾನದಲ್ಲಿದ್ದ ಜಿಲ್ಲೆಯು 27ನೇ ಸ್ಥಾನಕ್ಕೆ ಕುಸಿದಿದ್ದೇಕೆ? ಇದಕ್ಕೆ ಯಾರು ಜವಾಬ್ದಾರರು? ಇದಕ್ಕೆ ಹೊಣೆ ಯಾರು? ಡಿಡಿಪಿಐ ಮತ್ತು ಬಿಇಓ ಅವರ ಮೇಲೆ ಯಾಕೆ ಕ್ರಮ ಜರುಗಿಸಬಾರದು ಎಂದು ಮುಖ್ಯಮಂತ್ರಿಗಳು ಫಲಿತಾಂಶ ಕುಸಿಯಲು ಕಾರಣೀಭೂತರಾಗಿ ಕರ್ತವ್ಯ ಲೋಪವೆಸಗಿರುವ ಹಿನ್ನೆಲೆಯಲ್ಲಿ ಸದರಿಯವರ ವಿರುದ್ಧ ಶಿಸ್ತು ಕ್ರಮವನ್ನು ಬಾಕಿ ಇರಿಸಿ. ಡಿಡಿಪಿಐ ಅವರಿಗೆ ತರಾಟೆ ತೆಗೆದುಕೊಂಡು. ಡಿಡಿಪಿಐ ಆಗಿದ್ದ ಯುವರಾಜ ನಾಯಕ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದರು, ಅಲ್ಲದೇ ಸಿಇಓ ಮತ್ತು ಎಲ್ಲಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲು ತಿಳಿಸಿದರು.

ಉಪ ನಿರ್ದೇಶಕರ ಹುದ್ದೆ ಖಾಲಿ ಉಳಿದಿದ್ದರಿಂದ ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿ, ಐವಾನ್-ಎ-ಶಾಹಿ ಬಡಾವಣೆ, ಕಲಬುರಗಿಯಿಂದ ಹೆಚ್ಚುವರಿ ಪ್ರಭಾರವನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಶ್ರೀಮತಿ ಹನುಮಕ್ಕ, ಪ್ರಾಂಶುಪಾಲರು (ಡಯಟ್) ಬಳ್ಳಾರಿ ಇವರಿಗೆ ದಿನಾಂಕ 21.06.2024, ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು 1958ರ ನಿಯಮ-68 ರಡಿ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ವಹಿಸಿ ಮಾನ್ಯ ಆಯುಕ್ತರ ಆದೇಶದ ಮೇರೆಗೆ, ಸಹ ನಿರ್ದೇಶಕರು (ಆಡಳಿತ) ಅಪರ ಆಯುಕ್ತರ ಪರವಾಗಿ ಹೆಚ್. ಸಿ ಚಂದ್ರಶೇಖರ ಆದೇಶಿ, ಸದರಿಯವರು ಉಪ ನಿರ್ದೇಶಕರು (ಆಡಳಿತ), ಶಾಲಾ ಶಿಕ್ಷಣ ಇಲಾಖೆ, ವಿಜಯನಗರ ಜಿಲೆ, ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ವಹಿಸಿಕೊಂಡು, ವರದಿ ನೀಡಲು ತಿಳಿಸಿ ಜ್ಞಾಪನ ಪತ್ರದಲ್ಲಿ ಅದೇಶಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!