ಮುಧೋಳದಲ್ಲಿ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ
ಯಲಬುರ್ಗಾ, 26- ತಾಲೂಕಿನ ಮುಧೋಳ ಗ್ರಾಮದಲ್ಲಿ ಇದೇ ದಿ. 29 ರಂದು ಬೆ.10 ಘಂಟೆಗೆ ಸರಕಾರಿ ಮಾ.ಹಿ.ಪ್ರಾ.ಶಾಲೆಯ ಆವರಣದಲ್ಲಿ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು 91-92 ನೇ ಸಾಲಿನ ಸ.ಮಾ.ಹಿ.ಪ್ರಾ.ಶಾಲೆಯ ಹಾಗೂ94-95 ನೇ ಸಾಲಿನ ಶ್ರೀ ತ್ರಿಲಿಂಗೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆˌ
ನಿ.ಮುಖ್ಯೋಪಾಧ್ಯಾಯರಾದ ಚಿದಾನಂದಪ್ಪ ಕಜ್ಜಿ ಅಧ್ಯಕ್ಷತೆ ವಹಿಸಲಿದ್ದಾರೆ.ನಿ.ಮುಖ್ಯೋಪಾಧ್ಯಯರಾದ ರಾಮನಗೌಡ ಬಾಳನಗೌಡ್ರ ಉದ್ಘಾಟಿಸಲಿದ್ದಾರೆ.ಇಲಕಲ್ಲಿನ ಜಾನಪದ ಹಿರಿಯ ಸಾಹಿತಿಗಳಾದ ಶಂಭು ಬಳಿಗಾರರವರು ಅತಿಥಿ ಉಪನ್ಯಾಸಕರಾಗಿ ಆಗಮಿಸಲಿದ್ದಾರೆ. ಎಸ್.ಬಿ. ಮುಂಡರಗಿಮಠ ˌ ವೀರಣ್ಣ ವಾಲಿˌ ಕೆ.ಜಿ.ತಳುವಗೇರಿˌ ಹನಮಂತಪ್ಪ ವಡ್ಡರ ˌ ಎಂ.ಜಿ.ಪಲ್ಲೇದˌ ಯಲ್ಲಪ್ಪ ರಾಮಶೆಟ್ಟಿ ˌ ತಿಪ್ಪಣ್ಣ ಸಂದಿಮನಿ ˌ ಮಲ್ಲಿಕಾರ್ಜುನ ಕವಲೂರ ˌ ಬಾಳಪ್ಪ ಹೊಟ್ಟಿನ ˌ ಬಸಪ್ಪ ಹಗೇದಾಳ ˌ ಶರಣಪ್ಪ ಇಟಗಿ ˌ ಇನ್ನೀತರರು ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ.ಸರ್ವರಿಗೂ ಸಂಘಟಿಗರು ಸ್ವಾಗತ ಬಯಸಿದ್ದಾರೆ.