ಮೇಯರ್ ಚುನಾವಣೆ ನಡೆಸಲು ಮಾಜಿ ಮೇಯರ್ ಒತ್ತಾಯ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 23- ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್, ಉಪಮೇಯರ್ ಮತ್ತು ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷ ಚುನಾವಣೆಗೆ ಚುನಾವಣೆ ಪ್ರಕ್ರಿಯೆ ಕೂಡಲೇ ಕೈಗೊಳ್ಳಬೇಕೆಂದು ಮಹಾನಗರ ಪಾಲಿಕೆಯ, ಪ್ರತಿಪಕ್ಷದ ನಾಯಕ, ಸಿ ಇಬ್ರಾಹಿಂ ಬಾಬು ಒತ್ತಾಯಿಸಿದ್ದಾರೆ.
ಈ ಕುರಿತು ಕಲ್ಬುರ್ಗಿಯ ಪ್ರಾದೇಶಿಕ ಆಯುಕ್ತ ಅವರಿಗೆ ಪತ್ರ ಬರೆದು ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಉಪಮೇಯರ್ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷಗಳ ಚುನಾವಣೆ ಕಳೆದ ಮಾರ್ಚ್ 28ಕ್ಕೆ ತಾರೀಕುಗೆ ನಿಗದಿ ಮಾಡಲಾಗಿತ್ತು ಆದರೆ ಲೋಕಸಭಾ ಚುನಾವಣೆ ಕಾರಣ ಮುಂದೂಡಲಾಗಿತ್ತು ಈಗ ಎಲ್ಲಾ ಪೂರ್ಣಗೊಂಡಿದ್ದ ಕಾರಣ ಪಾಲಿಕೆಯ ಮೇಯರ್ ಚುನಾವಣೆಗೆ ಕೂಡಲೇ ಕ್ರಮ ವಹಿಸಿ, ಚುನಾವಣೆ ದಿನಾಂಕವನ್ನು ಘೋಷಣೆ ಮಾಡಬೇಕೆಂದು ಈ ಮೂಲಕ ಒತ್ತಾಯಿಸಿದ್ದಾರೆ.
