ರಾಜ್ಯ ಮಾನವ ಹಕ್ಕುಗಳ ಆಯೋಗದ ಜಿಲ್ಲಾ ಪ್ರವಾಸ : ಪೂರ್ವಭಾವಿ ಸಭೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 4- ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ಜುಲೈ 10 ರಂದು ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದು, ಆಯೋಗದಲ್ಲಿ ಬಾಕಿ ಇರುವ ಹೆಚ್.ಆರ್.ಸಿ ಪ್ರಕರಣಗಳ ವಿಚಾರಣೆ ಹಾಗೂ ಪ್ರಕರಣಗಳ ಕುರಿತು ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಿರುವ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ ಅವರ ಅಧ್ಯಕ್ಷತೆಯಲ್ಲಿ ಜುಲೈ 05 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ.
ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಗೆ ಬರುವಾಗ ಸಾರ್ವಜನಿಕರಿಗೆ ಒದಗಿಸಲಾಗಿರುವ ಸರ್ಕಾರದ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿಗಳು, ಬಡವರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿರುವ ಬಗ್ಗೆ, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸೌಲಭ್ಯಗಳು, ದೇವದಾಸಿ ಪದ್ಧತಿಯಲ್ಲಿ ನೊಂದವರಿಗೆ ಪುನರ್ವಸತಿ ಕ್ರಮಗಳ ಬಗ್ಗೆ, ಲೈಂಗಿಕ ಶೋಷಣೆಗೆ ಒಳಗಾದವರು/ ಲೈಂಗಿಕ ಕಾರ್ಯಕರ್ತರು ಇವರುಗಳಿಗೆ ಸಂಬAಧಿಸಿದ ಪುನರ್ವಸತಿ ವಿಷಯಗಳು ಹಾಗೂ ಅಲ್ಪಸಂಖ್ಯಾತರು ಇವರುಗಳಿಗೆ ಒದಗಿಸಲಾಗಿರುವ ಸೌಲಭ್ಯಗಳ ಬಗ್ಗೆ ಮತ್ತು ಪಾದಚಾರಿ ಮಾರ್ಗಗಳನ್ನು ಅತಿಕ್ರಮಣ ಮಾಡಿಕೊಂಡಿರುವ ಬಗ್ಗೆ ಹಾಗೂ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರಿಂದ ಹೊರಡಿಸಲಾಗಿರುವ ಸಂಬAಧಿಸಿದ ಕಾಯ್ದೆಗಳು/ನೀತಿ ನಿಯಮಗಳು ಹಾಗೂ ಇತರೆ ಮಾರ್ಗಸೂಚಿಗಳ ಪ್ರತಿಗಳನ್ನು ಹಾಗೂ ಸದರಿ ಸೌಲಭ್ಯಗಳನ್ನು ವಿಸ್ತರಿಸಿರುವ ಬಗ್ಗೆ ಅಂಕಿ ಅಂಶಗಳ ಮಾಹಿತಿಗಳನ್ನು ಒದಗಿಸುವುದು ಹಾಗೂ ಸರ್ಕಾರದ ವಿವಿಧ ಯೋಜನೆಗಳ ವಿವರಗಳು ಹಾಗೂ ಅವುಗಳಿಗೆ ಮಂಜೂರಾಗಿರುವ ಅನುದಾನ ಹಾಗೂ ಫಲಾನುಭವಿಗಳ ಅಂಕಿ ಅಂಶಗಳೊAದಿಗೆ ವಿವರಗಳೊಂದಿಗೆ ಮತ್ತು ತಮ್ಮಲ್ಲಿ ಬಾಕಿ ಇರುವ ಹೆಚ್.ಆರ್.ಸಿ ಪ್ರಕರಣಗಳ ಕುರಿತು ಕೈಗೊಂಡ ಕ್ರಮದ ಬಗ್ಗೆ ಮಾಹಿತಿಯೊಂದಿಗೆ, ಪ್ರತಿನಿಧಿಯನ್ನು ಕಳುಹಿಸದೇ ಖುದ್ದಾಗಿ ಸಭೆಗೆ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
