ಮೇಯರ್ ಚುನಾವಣೆ ರಾಜ್ಯ ಸರ್ಕಾರ ಕೂಡಲೇ ನಡೆಸಲಿ
ಮಾಜಿ ಸಚಿವ ಬಿ ಶ್ರೀರಾಮುಲು ಒತ್ತಾಯ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೦೧- ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದು6 ತಿಂಗಳು ಕಳೆದರೂ, ಅಧಿಕಾರವನ್ನು ಹಿಡಿದ ಕಾಂಗ್ರೆಸ್ ಪಕ್ಷ ಇನ್ನ ಮುಂದಾದರು ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ನಡೆಸಲಿ ಎಂದು ಬಿಜೆಪಿ ಮುಖಂಡ ಮಾಜಿ ಸಚಿವ ಬಿ ಶ್ರೀರಾಮುಲು ಒತ್ತಾಯ ಮಾಡಿದರು.
ಹಿಂದೂ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಾ, ವಿಧಾನಸಭಾ ಚುನಾವಣೆ ನಡೆದು ಹಲವಾರು ತಿಂಗಳು ಕಳೆದರು ಅಧಿಕಾರವನ್ನು ಹಿಡಿದ ಕಾಂಗ್ರೆಸ್ ಪಕ್ಷ ಆಡಳಿತ ನೀಡಲು ವಿಫಲವಾಗಿರುತ್ತದೆ ಎಂದು ಆರೋಪಿಸಿದ್ದರು.
ಪ್ರಧಾನವಾಗಿ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಗೆ ಎರಡು ಬಾರಿ ವಿನಾಕಾರಣ ಮುಂದಿಡಲು ಕಾರಣವೇನೆಂದು ಪ್ರಶ್ನಿಸಿದರು.ಈ ಬೆಳವಣಿಗೆ ಹಲವಾರು ಅನುಮಾನಗಳಿಗೆ ದಾರಿ ತೋರುತ್ತದೆ ಎಂದರು. ಕಾಂಗ್ರೆಸ್ ಮುಖಂಡರು ಮತ್ತು ಅಧಿಕಾರಿಗಳು ಒಂದಾಗಿ ಮೇಯರ್ ಚುನಾವಣೆ ಕಿಡಿಕಾರಿದರು. ಇದರಿಂದ ಹಿಂದಿನ ಬಿಜೆಪಿ ಸರ್ಕಾರ ಕೈಗೊಂಡ ಹಲವಾರು ಯೋಜನೆಗಳು ಕುಂಟು ಬೀಳುತ್ತಿರುವದಾಗಿ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರ ಹಿಡಿದ ಮೇಲೆ ರಿಪಬ್ಲಿಕ ಆಫ್ ಬಳ್ಳಾರಿ ಮಾಡುತ್ತಿರುವುದು ಅವರೇ ಎಂದು ಟೀಕಿಸಿದರು. ಲೋಕಸಭಾ ಚುನಾವಣೆ ಯಾವುದೇ ಸಮಯದಲ್ಲಿ ನಡೆದರು ಬಿಜೆಪಿ ಪಕ್ಷ ಸ್ಪರ್ಧಿಸಲು ಸಿದ್ಧವಾಗಿದ್ದೆ ಎಂದು ತಿಳಿಸಿದರು. ಹಿಂದಕ್ಕೆ ನಗರದಲ್ಲಿ ತಾವು ಕೈಗೊಂಡ ಹಲವಾರು ಅಭಿವೃದ್ಧಿ ಯೋಜನೆಗಳು ತಮ್ಮ ವಿಜಯಕ್ಕೆ ದಾರಿಯಾಗುತ್ತವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಎಸ್ ಮಲ್ಲನಗೌಡ ಮತ್ತು ಇತರರು ಇದ್ದರು.
