ಸಿರುಗುಪ್ಪ: ವಿಶ್ವಕರ್ಮ ಅಮರಶಿಲ್ಪಿ
ಜಕಣಾಚಾರಿ ಸಂಸ್ಮರಣ ದಿನಾಚರಣೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,೧- ಅತ್ಯಂತ ನಾಜೂ ಕಾದ ಭಾರತೀಯ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಅವರು ದೇವಾಲಯಗಳನ್ನು ನಿರ್ಮಿಸಿ ದಂತ ಕಥೆಯಾದ ಶಿಲ್ಪಿ ಜಕಣಾಚಾರಿ ಅವರು ಕಲ್ಯಾಣಿ ಚಾಲುಕ್ಯರ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿದ್ದಾರೆ ಅವರ ಮಗ ಚನ್ನಕೇಶವ ದೇವಾಲಯದ ಕೊಂಡಿಗಳು ಆಗಿದ್ದರು ಎಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು ತಹಸೀಲ್ದಾರ್ ರಾದ ಹೆಚ್ ವಿಶ್ವನಾಥ ಅವರು ಹೇಳಿದರು.
ಅವರು ನಗರದ ತಾಲೂಕ ಕಚೇರಿಯಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆ ಕಾರ್ಯಕ್ರಮದಲ್ಲಿ ಜಕಣಾಚಾರಿ ಭಾವಚಿತ್ರಕ್ಕೆ ಮಾಲಾರ್ಪಣೆ ಪುಷ್ಪ ಅರ್ಪಿಸಿ ಗೌರವಿಸಿ ನಮನ ಸ್ಮರಿಸಿ ಅವರು ಮಾತನಾಡುತ್ತಾ ಜಕಣಾಚಾರಿ ಅವರ ಸಂಸ್ವರಣ ದಿನವನ್ನು ಸರ್ಕಾರ ಆಚರಿಸುತ್ತಿರುವುದು ಮಹತ್ವದ ಕಾರ್ಯ ಎಂದರು.
ಉಪ ತಹಸಿಲ್ದಾರ್ ರಾಘವೇಂದ್ರ ಕಂದಾಯ ಪರಿವೀಕ್ಷಕ ಶೆಕ್ಷಾವಲಿ ರಾಷ್ಟ್ರೀಯ ಸಾಕ್ಷರತಾ ಸದಸ್ಯ ಸಮಾಜ ಸುಧಾರಕ ಅಬ್ದುಲ್ ನಬಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಡಿ ಸೋಮಪ್ಪ ವಿಶ್ವಕರ್ಮ ಮಹಾಸಭಾ ತಾಲೂಕ ಅಧ್ಯಕ್ಷ ಎಚ್ ಮೌನೇಶ ಆಚಾರಿ ಮಾಜಿ ಅಧ್ಯಕ್ಷ ಎ ಕಾಳನ ಗೌಡ ಸಮಾಜದ ಮುಖಂಡರಾದ ವಿರೇಶ್ ಆಚಾರಿ ಎ ಮೌನೇಶ್ ಆಚಾರಿ ಕಾರ್ಪೆಂಟರ್ ಅಮರೇಶ್ ಮರೇಗೌಡ ಶ್ರೀಧರ ಆಚಾರಿ ಗಂಗಾಧರ ಆಚಾರಿ ಶಿಲ್ಪಿ ಈರಣ್ಣ ಆಚಾರಿ ಗ್ರಾಮ ಲೆಕ್ಕಾಧಿಕಾರಿ ಮಹಾಂತೇಶ್ ನವೀನ್ ಗುಡದೇಶ್ ಹುಲಿಗೆಮ್ಮ ವಸುಂದರ ತುಷ ಮತ್ತಿತರರು ಇದ್ದರು.
