images

ಭಾರತ ಕಮ್ಯೂನಿಸ್ಟ್ ಪಕ್ಷ ಮಾರ್ಕ್ಸ್ (ವಾದಿ ಲೆನಿನ್ ವಾದಿ) ಮಾಸ್ ಲೈನ್

    ಲೋಕಾಯುಕ್ತ ಡಿವೈಎಸ್ಪಿ ವಸಂತ ಕುಮಾರ್ ವರ್ಗಾವಣೆ ಡಿ.ಹೆಚ್.ಪೂಜಾರ ಖಂಡನೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ , ೧೯- ನಗರ ಸಭೆಯಲ್ಲಿ ನಡೆದ ಮತ್ತು ನಡೆಯುತ್ತಿರುವ ಎಲ್ಲಾ ಭ್ರಷ್ಟಾಚಾರ ಬಯಲು ಗೊಳ್ಳುತ್ತದೆ ಎಂದು ಭಾವಿಸಿ, ಡಿ ವಾಯ ಎಸ್ ಪಿ ವಸಂತ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ ಅವರ ವರ್ಗಾವಣೆಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ ಮಾರ್ಕ್ಸ್ (ವಾದಿ ಲೆನಿನ್ ವಾದಿ) ಮಾಸ್ ಲೈನ್ -CPIML Mass Lin CPI(ML) ಮಾಸ್ ಲೈನ್ ರಾಜ್ಯ ಕಾರ್ಯದರ್ಶಿ ಡಿ.ಹೆಚ್.ಪೂಜಾರ,  ಖಂಡಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು ನಗರಸಭೆಯ, ಕಿರಿಯ ಇಂಜೀಯರ ಮತ್ತು ಗುತ್ತಿಗೆದಾರರು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮಾಡಿದ ಮಾಹಿತಿಯ ಮೇಲೆ ಲೋಕಾಯುಕ್ತ ಡಿ ವಾಯ ಎಸ್ಪಿ ಯವರು ಇತ್ತೀಚೆಗೆ ದಾಳಿ ನಡೆಸಿದ್ದರು.

ಈ ಪ್ರಕರಣದ ವಿಚಾರಣೆ ನಡೆದರೆ, ಕೇವಲ 6 ತಿಗಳ ಹಿಂದೆ ಅಷ್ಟೇ  ಕೊಪ್ಪಳಕ್ಕೆ ಬಂದಿರುವ ಅವರನ್ನು ಏಕಾಏಕಿ ವರ್ಗಾವಣೆ ಮಾಡಿದ್ದನ್ನು ಯಾರು ಸಹಿಸಿಕೊಳ್ಳುವುದಿಲ್ಲ.ನಿಷ್ಠೆಯಿಂದ, ನಿಷ್ಟುರತೆಯಿಂದ ಕರ್ತವ್ಯ ನಿರ್ವಹಿಸುವವರಿಗೆ ಬೆಲೆ ಇಲ್ಲವೇ. ಜನರು ಎಷ್ಟಂತ ಸಹಿಸಿಕೊಳ್ಳಬೇಕು.

ನಗರ ಸಭೆ ಭ್ರಷ್ಟಾಚಾರದ ಕೂಪವಾಗಿದೆ. ಫಾರಂ. 3 ದಾಖಲಾತಿಗಳನ್ನು ಕೊಡಲು, ನಿವೇಶನ ಮಂಜೂರಿ, ಆಶ್ರಯ ಯೋಜನೆಗಳ ಇತರೆ ಯೋಜನೆಗಳ ಮನೆ ಮಂಜೂರಾತಿ ನಿರ್ಮಾಣ ಲಂಚ ಕೊಡಬೇಕು.ನಗರದಲ್ಲಿ ರಸ್ತೆ, ಚರಂಡಿ ನಿರ್ಮಾಣ, ಇತರೆ  ಕಟ್ಟಡಗಳ  ಕಾಮಗಾರಿ, ಈ ಕಾಮಗಾರಿಗಳಲ್ಲಿ ಮಿತಿ ಮೀರಿದ ಪರ್ಸೆಂಟ್ ಪಡೆಯಲಾಗುತ್ತದೆ.

ಪರ್ಸೆಂಟ್ ಜ್ ಕೊಡುವ ಗುತ್ತೇದಾರರು ಗುಣಮಟ್ಟದ ಕಾಮಗಾರಿಯ ನಡೆಸಲು ಹೇಗೆ ಸಾಧ್ಯ.ಕಳಪೆ ಕಾಮಗಾರಿ ನಡೆಯುತ್ತಿರುವುರಿಂದ ವರ್ಷ ಮುಗಿಯುವುದರೊಳಗೆ ರಸ್ತೆಗಳು ಹಾಳಾಗುತ್ತವೆ.ಕೊಪ್ಪಳ ನಗರದ ನಾಗರಿಕರ ಒಳ್ಳೆಯತನವನ್ನು ದೌರ್ಬಲ್ಯವೆಂದು ಭಾವಿಸಿರುವ ಅಧಿಕಾರಸ್ಥರರು ಬೇಕಾ ಬಿಟ್ಟಿಯಾಗಿ ಕಾಮಗಾರಿ ನಡೆಸಿ, ಕೋಟ್ಯಂತರ ಹಣವನ್ನು ಲೂಟಿ ಮಾಡುತ್ತಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯವರು ಕೊಪ್ಪಳ ಜಿಲ್ಲೆಯ ಕಡೆಗೆ ಗಮನ ಕೊಡದಿದ್ದರೆ, ಮುಂದಿನ ದಿನಗಳಲ್ಲಿ ಜನರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ವಸಂತ ಕುಮಾರ್ ಅವರ ವರ್ಗಾವಣೆ ತಕ್ಷಣ ರದ್ದುಗೊಳಿಸಿ, ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿಗಳು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಾಗಣಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಒತ್ತಾಯಿಸುತ್ತೇವೆ ಎಂದು CPI(ML) ಮಾಸ್ ಲೈನ್ ರಾಜ್ಯ ಕಾರ್ಯದರ್ಶಿ ಡಿ.ಹೆಚ್.ಪೂಜಾರ, ಜಿಲ್ಲಾ ಕಾರ್ಯದರ್ಶಿ ಬಸವರಾಜ ನರೆಗಲ್ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!