ಲೋಕಾಯುಕ್ತರ ತಹಶೀಲ್ದಾರ ಮಂಜುನಾಥ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 19- ಜಿಲ್ಲೆಯ ಗಂಗಾವತಿಯ ತಹಶೀಲ್ದಾರ್ ಮಂಜುನಾಥ ಬೋಗಾವತಿ ಶನಿವಾರ ರಾತ್ರಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಅವರು ವ್ಯಕ್ತಿ ಒಬ್ಬರಿಂದ ಅಕ್ರಮವಾಗಿ ಕೆಂಪು ಮಣ್ಣು ಸಾಗಾಣಿಕೆಗೆ ನೆರವಾಗಲು ಮಂಜುನಾಥ ₹1ಲಕ್ಷ ನೀಡುವಂತೆ ವ್ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ಮಂಜುನಾಥ ಪರವಾಗಿ ರಾಜು ಎಂಬ ಖಾಸಗಿ ವ್ಯಕ್ತಿ ₹50 ಸಾವಿರ ಪಡೆದುಕೊಂಡಿದ್ದರು. ಇನ್ನುಳಿದ ಹಣ ಪಡೆದುಕೊಳ್ಳುವಾಗ ಅಧಿಕಾರಿಗಳು ದಾಳಿ ನಡೆಸಿದ್ದು ಇಬ್ಬರನ್ನೂ ಲೋಕಾಯುಕ್ತರನ್ನು ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಹಶೀಲ್ದಾರ್ ಮಂಜುನಾಥ ಅವರನ್ನು ಬಂಧಿಸಲು ಶನಿವಾರ ಸಂಜೆಯಿಂದಲೇ ಕಾಯುತ್ತಿದ್ದೆವು. ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರಿಂದ ಆಗಿರಲಿಲ್ಲ. ರಾತ್ರಿ 11 ಗಂಟೆ ಸುಮಾರಿಗೆ ಬಂಧಿಸಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.ಕೊಪ್ಪಳ ಲೋಕಾಯುಕ್ತ ಡಿವೈಎಸ್ ಪಿ ಸಲೀಂ ಪಾಷಾ ನೇತೃತ್ವದಲ್ಲಿ ಈ ದಾಳಿ ನಡೆಸಿದ್ದಾರೆ.
