ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಮೌಲ್ಯಮಾಪನ ಶಿಬಿರ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 14- ಕೇಂದ್ರ ಸರ್ಕಾರದ ಅಡಿಪ್ ಮತ್ತು ರಾಷ್ಟಿçÃಯ ವಯೋಶ್ರೀ ಯೋಜನೆಯಡಿ ಉಚಿತವಾಗಿ ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲು ಆಲಿಂಕೋ ಸಂಸ್ಥೆಯ ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ಜೂನ್ 29 ರಿಂದ ಜುಲೈ 06 ರವರೆಗೆ ಮೌಲ್ಯಮಾಪನ ಶಿಬಿರಗಳನ್ನು ಏರ್ಪಡಿಸಲಾಗಿದೆ.
ಜೂನ್ 29 ರಂದು ಕೊಪ್ಪಳದ ತಾಲ್ಲೂಕು ಪಂಚಾಯತ ಸಭಾಂಗಣ, ಜುಲೈ 01 ರಂದು ಗಂಗಾವತಿಯ ಸ್ಪೂರ್ತಿ ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಜು.02 ರಂದು ಕಾರಟಗಿಯ ಸಮುದಾಯ ಆರೋಗ್ಯ ಕೇಂದ್ರ, ಜು.03 ರಂದು ಕನಕಗಿರಿಯ ಸಮುದಾಯ ಆರೋಗ್ಯ ಕೇಂದ್ರ, ಜು.04 ರಂದು ಕುಷ್ಟಗಿಯ ತಾಲ್ಲೂಕು ಪಂಚಾಯತ ಸಭಾಂಗಣ, ಜು.05 ರಂದು ಯಲಬುರ್ಗಾದ ತಾಲ್ಲೂಕು ಪಂಚಾಯತಿ ಸಭಾಂಗಣ, ಜು.06 ರಂದು ಕುಕನೂರಿನ ತಾಲ್ಲೂಕು ಪಂಚಾಯತ ಸಭಾಂಗಣದಲ್ಲಿ ಮೌಲ್ಯಮಾಪನ ಶಿಬಿರಗಳನ್ನು ಏರ್ಪಡಿಸಲಾಗಿದೆ.
ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ನಿಗದಿತ ದಿನಾಂಕ ಹಾಗೂ ನಿಗದಿತ ಸ್ಥಳದಲ್ಲಿ ನಡೆಯುವ ಮೌಲ್ಯಮಾಪನ ಶಿಬಿರದಲ್ಲಿ ಉಚಿತವಾಗಿ ಭಾಗವಹಿಸಬಹುದು. ಫಲಾನುಭವಿಗಳು ಶಿಬಿರದಲ್ಲಿ ವಿಕಲಚೇತನ ವಿಶಿಷ್ಠ ಗುರುತಿನ ಚೀಟಿ (ಯು.ಡಿ.ಐ.ಡಿ), ಹಿರಿಯ ನಾಗರಿಕರ ಗುರುತಿನ ಚೀಟಿ ಅಥವಾ ವಯೋಮಿತಿ ಸೂಚಿಸುವ ದಾಖಲಾತಿ, ಆಧಾರ್ ಕಾರ್ಡ್, ಬಿ.ಪಿ.ಎಲ್. ಕಾರ್ಡ್ ಅಥವಾ ವಾರ್ಷಿಕ ಆದಾಯ ರೂ. 2,70,000/- ಗಳು ಮೀರದಿರುವ ಆದಾಯ ಪ್ರಮಾಣ ಪತ್ರ, ಇತ್ತೀಚಿನ 2 ಭಾವಚಿತ್ರಗಳ ದಾಖಲೆಯನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಜಯಶ್ರೀ-ಕೊಪ್ಪಳ ಎಂ.ಆರ್.ಡಬ್ಲೂ-9980126391, ಬಸವರಾಜ-ಯಲಬುರ್ಗಾ ಎಂ.ಆರ್.ಡಬ್ಲೂ- 9591923910, ಚಂದ್ರಶೇಖರ-ಕುಷ್ಟಗಿ ಎಂ.ಆರ್.ಡಬ್ಲೂ-9916308585, ಮಂಜುಳಾ-ಗAಗಾವತಿ ಎಂ.ಆರ್.ಡಬ್ಲೂ-7975398202 ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೇವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
