ಮಹಾಶಿವರಾತ್ರಿ ಅಂಗವಾಗಿ ಸಾರ್ವಜನಿಕರಿಗೆ ಬಿಲ್ವಪತ್ರೆ ಹಂಚಿಕೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,9- ಶ್ರೀ ಆರಾಧ್ಯರಂಗ ಬಳಗ ಹಚ್ಚಳ್ಳಿ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಶುಕ್ರವಾರದ ದಿನ ಸಾರ್ವಜನಿಕರಿಗೆ ಬಿಲ್ವಪತ್ರೆ ಮತ್ತು ಪಂಚಾಮೃತ ಹಂಚಿಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಈ ಬಾರಿ ಮುಖ್ಯ ಅತಿಥಿಯಾಗಿ ವಿಧಾನಪರಿಷತ್ ಸದಸ್ಯ ವೈ ಎಮ್ ಸತೀಶ್ ಅವರು ಪಾಲ್ಗೊಂಡು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಬಳಗದ ಪ್ರತಿನಿಧಿಗಳು ಪಂಪಾಪತಿ ಶಾಸ್ತ್ರಿಗಳು ಮಾತನಾಡುತ್ತಾ ಶ್ರೀ ಆರಾಧ್ಯರಂಗ ಬಳಗ ಕಳೆದ 11 ವರ್ಷದಿಂದ ಸತತವಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಬೆಲ್ಲೊ ಪತ್ರೆ ಮತ್ತು, ವಿನಿಯೋಗಕ್ಕೆ ಸಿದ್ಧವಾಗಿರಿಸಿದ ಪಂಚಾಮೃತವನ್ನು ಮಹಾಶಿವರಾತ್ರಿ ದಿನ ಪ್ರತಿ ವರ್ಷ ವಿತರಣೆ ಮಾಡಿರುವುದು ಅಭಿನಂದನೆಯ ಎಂದರು.
ಮುಖಂಡರು ಅಂಬರೀಶ ಹಚ್ಚಳ್ಳಿ, ಬಂದ್ರಾಳು ಮೃತ್ಯುಂಜಯ ಸ್ವಾಮಿ, ಕೋಳೂರು ಹೊತ್ತಿಗೇರಿ ಜನಶೇಖರ್ ರೆಡ್ಡಿ ಸ್ವಾಮಿ, ಎಚ್ ಕೆ ಗೌರಿ ಶಂಕರ್, ಶ್ರೀಧರ್, ರವಿ ಮೊದಲಾದವರು ಪಾಲ್ಗೊಂಡಿದ್ದರು.
